Home ಕ್ರೈಂ ನ್ಯೂಸ್ ಮಾನವೀಯತೆಯೋ? ಅಪರಾಧವೋ? ಬಡ ಮಕ್ಕಳ ಸ್ಕೂಲ್ ಫೀಸ್ ಕಟ್ಟಲು ಮನೆ ಕಳ್ಳತನ ಮಾಡುತ್ತಿದ್ದ ಯುವಕ ಅರೆಸ್ಟ್!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಮಾನವೀಯತೆಯೋ? ಅಪರಾಧವೋ? ಬಡ ಮಕ್ಕಳ ಸ್ಕೂಲ್ ಫೀಸ್ ಕಟ್ಟಲು ಮನೆ ಕಳ್ಳತನ ಮಾಡುತ್ತಿದ್ದ ಯುವಕ ಅರೆಸ್ಟ್!

Share
ಕಳ್ಳತನ
Share

ತಮಿಳುನಾಡು: ಸಿನಿಮಾಗಳಲ್ಲಿ ಬಡವರ ಕಷ್ಟಕ್ಕೆ ಸ್ಪಂದಿಸಲು ಶ್ರೀಮಂತರ ಮನೆ ದೋಚುವ ರಾಬಿನ್ ಹುಡ್ ಕಥೆಗಳನ್ನು ನಾವು ನೋಡಿದ್ದೇವೆ. ಆದರೆ, ಇದೀಗ ತಮಿಳುನಾಡಿನಲ್ಲಿ ಇಂತಹುದೇ ಒಂದು ನೈಜ ಘಟನೆ ನಡೆದು ಭಾರೀ ಚರ್ಚೆಗೆ ಕಾರಣವಾಗಿದೆ. ತನ್ನ ಸ್ನೇಹಿತರ ಮಕ್ಕಳ ಶಿಕ್ಷಣ ನಿಲ್ಲಬಾರದು ಎಂಬ ಕಾರಣಕ್ಕೆ 20 ಮಕ್ಕಳ ಶಾಲಾ ಶುಲ್ಕ ಪಾವತಿಸಲು ಯುವಕನೊಬ್ಬ ಕಳ್ಳತನದ ಹಾದಿ ಹಿಡಿದಿದ್ದ ಎಂಬ ರೋಚಕ ವಿಷಯ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸ್ನೇಹಿತರಿಗೆ ಆಟೋ ಖರೀದಿಸಲು ನೆರವು:

ಬಂಧಿತ ಆರೋಪಿ ಕೇವಲ ಮಕ್ಕಳ ಶಾಲಾ ಶುಲ್ಕವನ್ನಷ್ಟೇ ಕಟ್ಟುತ್ತಿರಲಿಲ್ಲ, ಬದಲಿಗೆ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದ್ದ ತನ್ನ ಕೆಲವು ಬಡ ಸ್ನೇಹಿತರಿಗೆ ಜೀವನೋಪಾಯಕ್ಕಾಗಿ ಆಟೋ ರಿಕ್ಷಾ ಖರೀದಿಸಲು ಲಕ್ಷಾಂತರ ರೂಪಾಯಿ ಹಣವನ್ನೂ ನೀಡಿದ್ದ ಎನ್ನಲಾಗಿದೆ.

ಪೊಲೀಸ್ ತನಿಖೆಯಲ್ಲಿ ಸತ್ಯ ಬಯಲು:

ಇತ್ತೀಚೆಗೆ ನಡೆದ ಸರಣಿ ಮನೆ ಕಳ್ಳತನ ಪ್ರಕರಣಗಳನ್ನು ಬೆನ್ನಟ್ಟಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಆಘಾತಕಾರಿ ಸತ್ಯ ಹೊರಬಂದಿದೆ. ತಾನು ಕಳ್ಳತನ ಮಾಡಿದ ಹಣವನ್ನು ಯಾವುದೇ ಮೋಜು-ಮಸ್ತಿಗಾಗಿ ಬಳಸದೆ, ಸಂಪೂರ್ಣವಾಗಿ ಬಡವರ ಮತ್ತು ಸ್ನೇಹಿತರ ಸಹಾಯಕ್ಕೆ ಬಳಸುತ್ತಿದ್ದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ.

ಒಂದೆಡೆ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ ಮಾಡಿದ ಆತನ ಮಾನವೀಯ ಗುಣವನ್ನು ಕೆಲವರು ಮೆಚ್ಚುತ್ತಿದ್ದರೆ, ಇನ್ನೊಂದೆಡೆ ಕಾನೂನು ಕೈಗೆತ್ತಿಕೊಂಡು ಕಳ್ಳತನ ನಡೆಸಿರುವುದು ಗಂಭೀರ ಅಪರಾಧ ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles