SUDDIKSHANA KANNADA NEWS/ DAVANAGERE/ DATE:29-12-2024
ಉತ್ತರ ಪ್ರದೇಶ: ಯುಪಿ ಶಿಕ್ಷಕನೊಬ್ಬ ತರಗತಿಯಲ್ಲಿ ಪೋರ್ನ್ ವೀಕ್ಷಿಸುತ್ತಿದ್ದ. ಇದನ್ನು ನೋಡಿದ ವಿದ್ಯಾರ್ಥಿಗೆ ಶಿಕ್ಷಕ ಥಳಿಸಿರುವ ಘಟನೆ ಝಾನ್ಸಿಯ ಖಾಸಗಿ ಶಾಲೆಯಲ್ಲಿ ನಡೆದಿದೆ.
ಝಾನ್ಸಿಯ ಖಾಸಗಿ ಶಾಲೆಯೊಂದರಲ್ಲಿ ಎರಡನೇ ತರಗತಿಯ ವಿದ್ಯಾರ್ಥಿಯೊಬ್ಬನು ಶಿಕ್ಷಕನು ತನ್ನ ಫೋನ್ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುತ್ತಿರುವುದನ್ನು ಕಂಡು ಮುಸಿ ಮುಸಿ ನಕ್ಕಿದ್ದ. ಸಹಪಾಠಿಗಳು ಇದನ್ನು ನೋಡಿದರು.
ತನ್ನ ಮೊಬೈಲ್ ಫೋನ್ನಲ್ಲಿ ಪೋರ್ನ್ ನೋಡುತ್ತಿರುವುದನ್ನು ವಿದ್ಯಾರ್ಥಿ ನೋಡಿದ ಕಾರಣ ಶಿಕ್ಷಕನೊಬ್ಬನಿಗೆ ಥಳಿಸಿದ್ದು, ಆಕ್ರೋಶ ಭುಗಿಲೇಳುವಂತೆ ಮಾಡಿದೆ. ಶಿಕ್ಷಕ ಕುಲದೀಪ್ ಯಾದವ್ ಅಶ್ಲೀಲ ಚಿತ್ರ ವೀಕ್ಷಿಸುತ್ತಿರುವುದನ್ನು ಕಂಡು ವಿದ್ಯಾರ್ಥಿಗಳು ನಗುತ್ತಿದ್ದರು. ಇದರಿಂದ ಕೋಪಗೊಂಡ ಶಿಕ್ಷಕನು ಬಾಲಕನಿಗೆ ಥಳಿಸಿದ್ದಾನೆ.
“ಶಿಕ್ಷಕರು ನನ್ನ ಮಗನ ಕೂದಲು ಹಿಡಿದು ತಲೆಯನ್ನು ಗೋಡೆಗೆ ಹೊಡೆದು ಮಗುವಿನ ಕಿವಿಗೆ ಗಾಯಗೊಳಿಸಿದ್ದಾರೆ. ಶಿಕ್ಷಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಗುವಿಗೆ ಬೆತ್ತದಿಂದ ಥಳಿಸಿದ್ದಾರೆ. ಘಟನೆಯ ಕುರಿತು ನಾನು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಬಾಲಕನ ತಂದೆ ಜೈ ಪ್ರಕಾಶ್ ಹೇಳಿದ್ದಾರೆ. ಮಗುವಿನ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಗೋಪಿನಾಥ್ ಸೋನಿ ಮಾತನಾಡಿ, ”ಶಾಲೆಯೊಂದರಲ್ಲಿ 8 ವರ್ಷದ ಮಗುವಿಗೆ ತರಗತಿ ಶಿಕ್ಷಕ ಥಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ನಾವು ಶಿಕ್ಷಕರನ್ನು ಬಂಧಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.