SUDDIKSHANA KANNADA NEWS/ DAVANAGERE/ DATE:13-10-2023
ದಾವಣಗೆರೆ (Davanagere): ಪ್ರಧಾನ ಮಂತ್ರಿ ನರೇದ್ರ ಮೋದಿ ಅವರ ಕಾರ್ಯಾಲಯದಿಂದ ನಗರದ ಶ್ರೀ ಸೋಮೇಶ್ವರ ವಿದ್ಯಾಲಯಕ್ಕೆ ಪ್ರಶಂಸೆ ಪತ್ರವನ್ನ ನೀಡಲಾಗಿದೆ.
READ ALSO THIS STORY:
Davanagere: ಗಣೇಶ ಗಲಾಟೆ, ಬಡಾವಣೆ ಪೊಲೀಸ್ ಠಾಣೆ ಮುಂದೆ ಹಿಂದೂ ಸಂಘಟನೆಗಳ ಆಕ್ರೋಶ: ಸ್ಥಳಕ್ಕೆ ಬಂದ ಎಸ್ಪಿ ಹೇಳಿದ್ದೇನು…?
ಇತ್ತೀಚೆಗೆ ನಡೆದ ಪರೀಕ್ಷಾ ಪೇ ಚರ್ಚಾ ಸಂವಾದವನ್ನು ಶಾಲೆಯಲ್ಲಿ ನಡೆಸಲಾಗಿತ್ತು. ಪ್ರಧಾನ ಮಂತ್ರಿ ನರೇದ್ರ ಮೋದಿ ಅವರ ಕಾರ್ಯಾಲಯದಿಂದ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಭಾಗವಹಿಸಿದ್ದರು.
ಹಲವು ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳಿಗೆ ಪ್ರಧಾನ ಮಂತ್ರಿಗಳ ಕಾರ್ಯಲಯದಿಂದ ಪ್ರಶಂಸೆ ಪತ್ರ ಬಂದಿದೆ. ವಿಶೇಷ ಎಂದರೆ ಪ್ರಶಂಸೆ ಪತ್ರ ಕನ್ನಡಲ್ಲಿ ಇದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರು ಸಹಿ ಮಾಡಿದ್ದಾರೆ. ಈ ಪ್ರಶಂಸೆ ಪತ್ರ ಬಂದ ಹಿನ್ನೆಲೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಧಾನ ಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿ ಸಂತೋಷ ವ್ಯಕ್ತಪಡಿಸಿದರು.