SUDDIKSHANA KANNADA NEWS/ DAVANAGERE/ DATE:02-01-2025
ಬೆಂಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರಿಗೆ ಶಾಲು ಹೊದಿಸಿ, ಹಾರ ಹಾಕಿ, ಶತೋತ್ತರ ಆಯುಷಿಯಾಗುವಂತೆ ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವದಿಸಿದರು.
ಬೆಂಗಳೂರಿನಲ್ಲಿ ಶಾಮನೂರು ಶಿವಶಂಕರಪ್ಪರನ್ನು ಭೇಟಿ ಮಾಡಿ ಆಶೀರ್ವದಿಸಿದ ಶ್ರೀಗಳು ಮಾತನಾಡಿದರು.
ಶ್ರೀಗಳು ಪ್ರತಿಯೊಬ್ಬರಿಗೂ ಸನ್ಮಾರ್ಗ ತೋರಿಸುವ ಗುರುವಿನ ಅಗತ್ಯತೆ ಬಹಳವಿದೆ. ಸನ್ಮಾರ್ಗದಲ್ಲಿ ಹೋದರೆ ಮಾತ್ರ ಒಳಿತಾಗುತ್ತದೆ. ಕೆಟ್ಟ ಮಾರ್ಗದಲ್ಲಿ ಹೋದರೆ ಕೆಡುಕಾಗುತ್ತದೆ. ಇದು ಗೊತ್ತಿದ್ದರೂ ಯಾವುದು ಸರಿಯಾದ ಮಾರ್ಗ, ಅಪಮಾರ್ಗ ಅನ್ನುವುದು ಅರ್ಥವಾಗುವುದಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ.ಉತ್ತಮ ಮಾರ್ಗದರ್ಶಕರಾಗಿ ಸದಾಕಾಲ ಶಿಷ್ಯರ ಹಿತ ಬಯಸುವ ತಾವೇ ನಮ್ಮ ಗುರುಗಳು ಎಂದು ಶ್ರೀ ಜಗದ್ಗುರುಗಳೊಡನೆ ಚರ್ಚಿಸಿ ಶಾಮನೂರು ಶಿವಶಂಕರಪ್ಪರು ಭಾವುಕರಾದರು.
ಈ ಸಂದರ್ಭದಲ್ಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ದಾವಣಗೆರೆ ಜಿಲ್ಲೆಯ ಲೋಕಸಭಾ ಸದಸ್ಯೆ ಪ್ರಭಾ ಮಲ್ಲಿಕಾರ್ಜುನ್, ವೀರಶೈವ ಮಹಾಸಭಾ ಕರ್ನಾಟಕ ರಾಜ್ಯದ ಅಧ್ಯಕ್ಷ ಶಂಕರ್ ಬಿದರಿ ಸೇರಿದಂತೆ ಹಲವು ಗಣ್ಯರು, ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥರು ಹಾಜರಿದ್ದರು.