SUDDIKSHANA KANNADA NEWS/ DAVANAGERE/ DATE:13-10-2023
ದಾವಣಗೆರೆ: ಭದ್ರಾಡ್ಯಾಂ(Bhadra Dam)ನ ಬಲದಂಡೆ ನಾಲೆಯಲ್ಲಿ ನಿರಂತರ ನೂರು ದಿನಗಳ ಕಾಲ ನೀರು ಹರಿಸಬೇಕು ಎಂದು ಬೆಂಗಳೂರಿನಲ್ಲಿ ದಾವಣಗೆರೆ ಲೋಕಸಭಾ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ ರವರ ನೇತೃತ್ವದ ನಿಯೋಗವು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಭದ್ರಾ ನೀರಾವರಿ ಸಲಹಾ ಸಮಿತಿ (ಐ.ಸಿ.ಸಿ) ಅಧ್ಯಕ್ಷ ಮಧುಬಂಗಾರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
READ ALSO THIS STORY:
Davanagere: ಗಣೇಶ ಗಲಾಟೆ, ಬಡಾವಣೆ ಪೊಲೀಸ್ ಠಾಣೆ ಮುಂದೆ ಹಿಂದೂ ಸಂಘಟನೆಗಳ ಆಕ್ರೋಶ: ಸ್ಥಳಕ್ಕೆ ಬಂದ ಎಸ್ಪಿ ಹೇಳಿದ್ದೇನು…?
ಬೆಂಗಳೂರಿನ ಸಚಿವ ಮಧು ಬಂಗಾರಪ್ಪರ ನಿವಾಸಕ್ಕೆ ಸಿದ್ದೇಶ್ವರ ನೇತೃತ್ವದ ನಿಯೋಗ ತೆರಳಿ, ಆನ್ ಅಂಡ್ ಆಫ್ ಪದ್ಧತಿ ರದ್ದುಗೊಳಿಸಬೇಕು ಮತ್ತು ನಿರಂತರ 100 ದಿನ ನೀರು ಹರಿಸಬೇಕು ಎಂದು ಒತ್ತಾಯಿಸಲಾಯಿತು.
ಆಗಸ್ಟ್ 10 ರಿಂದ ನಿರಂತರವಾಗಿ 100 ದಿನ ನೀರು ಹರಿಸುವುದಾಗಿ ಸರ್ಕಾರ ಆದೇಶ ಹೊರಡಿಸಿದ್ದರಿಂದ ದಾವಣಗೆರೆ ಜಿಲ್ಲೆಯಲ್ಲಿ ರೈತರು ಸುಮಾರು 1.5 ಲಕ್ಷ ಎಕರೆಯಲ್ಲಿ ಭತ್ತದ ನಾಟಿ ಮಾಡಿದ್ದಾರೆ. ನಿಮ್ಮ ಅಧ್ಯಕ್ಷತೆಯಲ್ಲಿ ಐ ಸಿ ಸಿ ಸಮಿತಿ ಆನ್ ಅಂಡ್ ಆಫ್ ಪದ್ಧತಿ ಜಾರಿ ಮಾಡಿದೆ. ನಿರಂತರವಾಗಿ ನೀರು ಹರಿಸುವ ಪದ್ಧತಿ ರದ್ದುಗೊಳಿಸಿದೆ. ದಾವಣಗೆರೆ ಜಿಲ್ಲೆಯಲ್ಲಿ ಬೆಳೆದಿರುವ ಭತ್ತದ ಬೆಳೆ ನಾಶವಾಗುತ್ತದೆ. ಆದ್ದರಿಂದ ನಿರಂತರ ನೀರು ಹರಿಸುವ ಪದ್ಧತಿ ಜಾರಿ ಮಾಡಬೇಕು. ಅಕ್ಟೋಬರ್ 15 ರಂದು ನೀರು ನಿಲುಗಡೆ ಮಾಡಬಾರದು ಎಂದು ಆಗ್ರಹಿಸಲಾಯಿತು.
ಜಿ. ಎಂ. ಸಿದ್ದೇಶ್ವರ ಅವರ ನೇತೃತ್ವದ ನಿಯೋಗದಲ್ಲಿ ವಿಧಾನ ಪರಿಷತ್ ಸದಸ್ಯ ಕೆ. ಎಸ್. ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ಎಂ. ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ರೈತ ಮುಖಂಡರಾದ ಕೊಳೇನಹಳ್ಳಿ ಬಿ. ಎಂ. ಸತೀಶ್, ಧನಂಜಯ ಕಡ್ಲೆಬಾಳ್, ಶಾಗಲೆ ದೇವೇಂದ್ರಪ್ಪ, ಬಾತಿ ವಿರೇಶ್ ದೊಗ್ಗಳ್ಳಿ, ಬಿ ಕೆ ಶಿವಕುಮಾರ್, ವಕೀಲ ಕೆ. ಎನ್. ಹನುಮಂತಪ್ಪ, ಅಥಿತ್ ಅಂಬರಕರ್, ಕೊಟ್ರೇಶ್ ಗೌಡ ಮುಂತಾದವರು ಭಾಗವಹಿಸಿದ್ದರು.