SUDDIKSHANA KANNADA NEWS/ DAVANAGERE/ DATE:28-09-2023
ದಾವಣಗೆರೆ (Davanagere): ದೇಶದ ಶಾಂತಿ, ಸಮೃದ್ಧಿ ಮತ್ತು ಉತ್ತಮವಾಗಿ ಮಳೆ, ಬೆಳೆಯಾಗಲಿ ಎಂದು ವಿಶೇಷ ಪ್ರಾರ್ಥನೆಯನ್ನು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಕ್ಕ ಮಸೀದಿಯಾ ಇಮಾಮ್ ಅವರು ಸಲ್ಲಿಸಿದರು. ಈ ವೇಳೆ ಮುಸ್ಲಿಂ ಬಾಂಧವರು ಸಹ ಪ್ರಾರ್ಥಿಸಿದರು.
ಈ ಸುದ್ದಿಯನ್ನೂ ಓದಿ:
STOCK MARKET: ಷೇರುಪೇಟೆಯಲ್ಲಿ ಕರಡಿ ಕುಣಿತ ಜೋರು:ನಿಫ್ಟಿ-192 ಅಂಕ, ಸೆನ್ಸೆಕ್ಸ್ -610 ಅಂಕ ಕುಸಿತ
ಮಧ್ಯಾಹ್ನ 2.30 ಕ್ಕೆ ಆಜಾದ್ ನಗರದ 1ನೇ ಮುಖ್ಯರಸ್ತೆಯಲ್ಲಿ ಇರುವ ಮದಿನಾ ಅರಬ್ಬಿ ಮದ್ರೆಸ್ ದಿಂದ ಹೊರಟ ಮಿಲಾದ್ ಮೆರವಣಿಗೆ (ಬುಲುಸ) ಚಾಮರಾಜ ಪೇಟೆ ಮುಖ್ಯ ರಸ್ತೆ, ಬಾರ್ ಲೈನ್ ರಸ್ತೆ, ಅರುಣ ಚಿತ್ರ ಮಂದಿರ ಮಾರ್ಗವಾಗಿ ಬಿಪಿ ರಸ್ತೆ ಗಾಂಧಿ ಸರ್ಕಲ್ ಅಶೋಕ ಚಿತ್ರ ಮಂದಿರ ಮೂಲಕ ಕೆ. ಆರ್ ರಸ್ತೆ ಮೂಲಕ ಮಂಡಕ್ಕಿ ಬಟ್ಟಿ ಲೇಔಟ್ ನ ಮಿಲಾದ್ ಮೈದಾನ ಕ್ಕೆ ತಲುಪಿತು.
ಮೆರವಣಿಗೆ ಮಾರ್ಗದ ಮಧ್ಯೆ ತಂಪು ಪಾನೀಯ ಹಣ್ಣು ಚಾಕ್ಲೇಟು ಹಂಚಲಾಯಿತು. ಕೆ. ಆರ್ ಮಾರುಕಟ್ಟೆ ತರಕಾರಿ ಮಾರುವ ಹಿಂದೂ ಸಹೋದರಿಯರು ಕೂಡ ಚಾಕ್ಲೇಟು ಹಂಚಿದ್ದು ಸಾಮರಸ್ಯಕ್ಕೆ ಸಾಕ್ಷಿಯಾಯಿತು.
ಪ್ರವಾದಿ ಮಹಮದ್ ಸ್ವಲ್ಲಲ್ಲಾಹು ಅಲೈಹಿವ ಸ್ವಲ್ಲಂ ರವರ ಜೀವನ ಕುರಿತು ಅವರ ಶಾಂತಿಯ ಸಂದೇಶದ (ನತ) ಹಾಡುಗಳು ಹಾಡುತ್ತ ಗುಂಪು ಗುಂಪಾಗಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಬಾಂಧವರು ಆಗಮಿಸಿದರು.
ಹಳೆ ಎಸ್ ಬಿ ಎಂ ಬ್ಯಾಂಕ್ ಹತ್ತಿರ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಸಚಿವ ಎಸ್. ಎಸ್ ಮಲ್ಲಿಕಾರ್ಜುನ ಅವರು ಮಿಲಾದ್ ಗುಂಬಸ್ ಗೆ ಮಾಲಾರ್ಪಣೆ ಮಾಡಿದರು. ಎಲ್ಲಾ ಮುಸ್ಲಿಂ ಬಾಂಧವರಿಗೆ ಮಿಲಾದ್ ಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಕಾಂಗ್ರೆಸ್ ಹಿರಿಯ ಮುಖಂಡ ಸೈಯದ್ ಸೈಫ್ಲುಲ್ಲಾ, ತಂಜಿಮ್ ಅಧ್ಯಕ್ಷ ದಾದು ಸೇಠ್., ಸಾಧಿಕ್ ಪೈಲ್ವಾನ್, ಜೆ. ಅಮನುಲ್ಲಾ ಖಾನ್, ಮಿಲಾದ್ ಕಮಿಟಿ ಅಧ್ಯಕ್ಷ ಎ. ಬಿ. ಹಬೀಬ್ ಸಾಬ್, ಶಹನವಾಜ್ ಖಾನ್, ಅಯ್ಯುಬ್ ಪೈಲ್ವಾನ್, ಸಿರಾಜ್, ಸಿ. ಆರ್. ನಾಸೀರ್ ಅಹ್ಮದ್, ಟಿ. ಅಸ್ಗರ್, ಜಬೀವುಲ್ಲಾ ರಜ್ವಿ, ವಿಪಿ ಶಫಿವುಲ್ಲಾ, ನಜೀರ್, ಜಬೀವುಲ್ಲಾ, ಇಮ್ರಾನ್, ಸಬಿರ್ ಮತ್ತಿತರರು ಉಪಸ್ಥಿತರಿದ್ದರು.
Comments 2