ಮಧ್ಯಪ್ರದೇಶ: ಮಧ್ಯಪ್ರದೇಶದ ಕಟ್ನಿ ನಗರ ಪೊಲೀಸ್ ವರಿಷ್ಠಾಧಿಕಾರಿ (ಸಿಎಸ್‌ಪಿ) ನೇಹಾ ಪಚಿಸಿಯಾ ಅವರು ಗಂಭೀರ ಸ್ವರೂಪದ ಭೂ ಹಗರಣ, ಅಧಿಕಾರ ದುರುಪಯೋಗ ಮತ್ತು ಬೆದರಿಕೆ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ.
ಎಐಆರ್ ಇಂಡಿಯಾದಲ್ಲಿ ಕೆಬಿನ್ ಕ್ರೂ ಆಗಿ ವೃತ್ತಿಜೀವನ ಆರಂಭಿಸಿ, ನಂತರ MPPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪೊಲೀಸ್ ಅಧಿಕಾರಿಯಾದ ಇವರ ಈ ದಿಢೀರ್ ಪತನ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ.
ಜೈಲಿನಲ್ಲಿರುವ ಕೊಲೆ ಆರೋಪಿಯ ಕುಟುಂಬದ ಮೇಲೆ ಒತ್ತಡ ಹೇರಿ, ಸುಮಾರು 83 ಲಕ್ಷ ರೂ. ಮೌಲ್ಯದ ಸರ್ಕಾರಿ ಮಾರ್ಗಸೂಚಿ ಬೆಲೆಯುಳ್ಳ ಆಸ್ತಿಯನ್ನು ಕೇವಲ 18.20 ಲಕ್ಷ ರೂ.ಗಳಿಗೆ ಕಬಳಿಸಿದ ಆರೋಪ ಇವರ ಮೇಲಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ತಕ್ಷಣವೇ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.





Leave a comment