ಪಿಲಿಭಿತ್ (ಉತ್ತರ ಪ್ರದೇಶ): ಖಾಸಗಿ ಫೋಟೋ ಹಾಗೂ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದ ಲಾರಿ ಚಾಲಕನನ್ನು ಮಹಿಳೆಯೊಬ್ಬಳು ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆ ಮಾಡಿ, ಬಳಿಕ ಆತನ ಟ್ರಕ್ಗೆ ಬೆಂಕಿ ಹಚ್ಚಿರುವ ಭೀಕರ ಘಟನೆ ಉತ್ತರ ಪ್ರದೇಶದ ಪಿಲಿಭಿತ್ನಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ 40 ವರ್ಷದ ಅಮನ್ದೀಪ್ ಕೌರ್ ಎಂಬ ಮಹಿಳೆಯನ್ನು ಪೊಲೀಸರು ಮಂಗಳವಾರ ಬಂಧಿಸಿ ಜೈಲಿಗಟ್ಟಿದ್ದಾರೆ.
ಕಳೆದ ಜುಲೈ 10 ರಂದು ಪುರಾಣಪುರ ಕೊತ್ವಾಲಿ ಪ್ರದೇಶದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಲಾರಿ ಚಾಲಕ ಬಲ್ವಿಂದರ್ ಸಿಂಗ್ ಎಂಬಾತನ ಮೃತದೇಹ ಪತ್ತೆಯಾಗಿತ್ತು.
ಬ್ಲ್ಯಾಕ್ಮೇಲ್ನಿಂದ ಬೇಸತ್ತು ಕೊಲೆ:
ಪೊಲೀಸ್ ವಿಚಾರಣೆ ವೇಳೆ ಆರೋಪಿ ಅಮನ್ದೀಪ್ ಕೌರ್ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ತಾನು ಮತ್ತು ಬಲ್ವಿಂದರ್ ಕಳೆದ 2-3 ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದೆವು. ಆದರೆ ಇತ್ತೀಚೆಗೆ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿದ್ದಾಗಿ ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ಬಲ್ವಿಂದರ್, ಆಕೆಯ ಖಾಸಗಿ ಫೋಟೋ ಹಾಗೂ ವೀಡಿಯೋಗಳನ್ನು ಕುಟುಂಬದವರಿಗೆ ತೋರಿಸುವುದಾಗಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದ್ದ.
ಅಪಘಾತವೆಂದು ಬಿಂಬಿಸಲು ಯತ್ನ:
ಬೆದರಿಕೆಯಿಂದ ಬೇಸತ್ತ ಅಮನ್ದೀಪ್ ಕೌರ್, ಕಾಲುವೆ ಬಳಿ ನಿಲ್ಲಿಸಿದ್ದ ಟ್ರಕ್ನಲ್ಲಿ ಬಲ್ವಿಂದರ್ನ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾಳೆ. ಬಳಿಕ ಕೊಲೆಯನ್ನು ಅಪಘಾತವೆಂದು ಬಿಂಬಿಸಲು ಮತ್ತು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಟ್ರಕ್ ಮೇಲೆ ಡೀಸಲ್ ಸುರಿದು ಬೆಂಕಿ ಹಚ್ಚಿದ್ದಾಳೆ.
ಮೃತನ ಸಹೋದರ ಗುರ್ಮೀತ್ ಸಿಂಗ್ ನೀಡಿದ ದೂರಿನನ್ವಯ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡ್ ಹಾಗೂ ಡೀಸೆಲ್ ಕ್ಯಾನ್ ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
- Amandeep Kaur
- Balwinder Singh
- Bharatiya Nyaya Sanhita
- blackmail murder
- BNS ಸೆಕ್ಷನ್ 103
- crime news
- Indian news
- Pilibhit murder case
- truck set on fire
- UP News
- UP police arrest
- UP woman kills truck driver
- ಅಮನ್ದೀಪ್ ಕೌರ್
- ಉತ್ತರ ಪ್ರದೇಶ ಅಪರಾಧ ಸುದ್ದಿ
- ಕ್ರೈಮ್ ನ್ಯೂಸ್ ಕನ್ನಡ
- ಖಾಸಗಿ ಫೋಟೋ ಬೆದರಿಕೆ
- ಪಿಲಿಭಿತ್ ಕೊಲೆ ಪ್ರಕರಣ
- ಬಲ್ವಿಂದರ್ ಸಿಂಗ್
- ಬ್ಲ್ಯಾಕ್ಮೇಲ್ ಕೊಲೆ
- ಲಾರಿ ಚಾಲಕನ ಕೊಲೆ
- ಲಾರಿಗೆ ಬೆಂಕಿ





Leave a comment