SUDDIKSHANA KANNADA NEWS/ DAVANAGERE/ DATE:26-01-2025
ದಾವಣಗೆರೆ: ನಮ್ಮ ಮನೆ ಬಾಗಿಲು ಕಾದಿದ್ದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯರಲ್ಲ. ಹರಿಹರ ಶಾಸಕ ಬಿ. ಪಿ. ಹರೀಶ್. ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ವಿರುದ್ಧ ಹೆಂಗ್ ಬೇಕೋ ಹಂಗ್ ಮಾತನಾಡಿದ್ದ. ಈಗ ತಲೆಕೆಟ್ಟವನಂತೆ ಮಾತನಾಡುತ್ತಿದ್ದಾನೆ ಎಂದು ಬಿಜೆಪಿ ಶಾಸಕ ಬಿ. ಪಿ. ಹರೀಶ್ ವಿರುದ್ಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ. ಪಿ. ರೇಣುಕಾಚಾರ್ಯ ನಮ್ಮ ಮನೆ ಬಾಗಿಲಿಗೆ ಬಂದಿದ್ದರೂ ಕಾದಿಲ್ಲ. ಆದ್ರೆ, ಬಿ. ಪಿ. ಹರೀಶ್ ಈ ಹಿಂದೆ ನಮ್ಮ ಮನೆಯ ಬಾಗಿಲು ಕಾದಿದ್ದ. ಈ ವಿಚಾರದಲ್ಲಿ ರೇಣುಕಾಚಾರ್ಯ ಹೇಳಿದ್ದರಲ್ಲಿ ಸತ್ಯವಿದೆ. ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಗಂಟೆ ಹೊಡೆಯಲಿ ಎಂಬ ಸವಾಲು ಹಾಕಿದ್ದು, ಗಂಟೆ ಹೊಡೆದು ಹರೀಶ್ ಬರಲಿ. ಆ ದೇವರ ಒಳ್ಳೆಯದು ಮಾಡಲಿ ಎಂದು ಕುಹಕವಾಡಿದರು.
ಧರ್ಮಸ್ಥಳಕ್ಕೆ ಹೋಗಿ ಗಂಟೆ ಹೊಡೆದು ಬಂದ ಮೇಲಾದರೂ ಆ ವರೇ ಕಾಪಾಡಲಿ. ಹರಿಹರ ಶಾಸಕನಿಗೆ ಬುದ್ದಿ ಇದೆಯಾ? ಆತನಿಗೆ ತಲೆ ಕೆಟ್ಟಿದೆ ಎಂದೆನಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಹರೀಶ್ ನಮ್ಮ ಮನೆ ಬಾಗಿಲು ಕಾದಿದ್ದಲ್ಲದೇ, ಸಿದ್ದೇಶಿ
ವಿರುದ್ಧ ಬಂದು ತಲೆಯೆಲ್ಲಾ ಮಾತನಾಡಿದ್ದ. ಆಗ ನಮ್ಮ ಪರವಾಗಿ ಪ್ರಚಾರ ಮಾಡಿದ್ದ. ಇದನ್ನು ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದರು.
ಸುಮ್ಮನೆ ಏನೇನೋ ಮಾತನಾಡ್ತಾನೆ. ನಾಲಗೆ ಇಲ್ಲದ ಎಲುಬಿಲ್ಲದ ಹಾಗೆ ಮಾತನಾಡಬಾರದು. ಜನರು ಆರಿಸಿ ಕಳುಹಿಸಿದ್ದಾರೆ. ಜನರ ವಿಶ್ವಾಸ ಗಳಿಸಿ ಉತ್ತಮ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ಹೋರ್ಡಿಂಗ್ಸ್ ಬಗ್ಗೆ ಜಿ. ಪಂ. ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಬೇಕಿತ್ತು. ಬಳಿಕ ನಡೆದ ಸಭೆಯಲ್ಲಾದರೂ ಖುದ್ದಾಗಿ ಬಂದು ತಿಳಿಸಬೇಕಿತ್ತು. ಅಲ್ಲಿಯೇ ಕಮೀಷನರ್, ಡಿಸಿ, ಸಿಇಒ ಇದ್ದರು. ಟಿವಿಯಲ್ಲಿ ಬರುತ್ತೆ ಎಂದು ಏನೇನೋ ಮಾತನಾಡಿದರೆ ಹೇಗೆ? ಹೆಂಗ್ ಬೇಕ್ ಆಗೇ ಮಾತನಾಡಿದ್ದಾನೆ. ನನ್ನ ವಿರುದ್ಧ ಏನು ಬೇಕಾದ್ ಮಾಡಿಕೊಳ್ಳಲಿ ಎಂದು ಎಸ್. ಎಸ್. ಮಲ್ಲಿಕಾರ್ಜುನ್ ಗುಡುಗಿದರು.