SUDDIKSHANA KANNADA NEWS/ DAVANAGERE/ DATE:07-01-2025
ಬೆಂಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರನ್ನು ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಶಾಮನೂರು ಶಿವಶಂಕರಪ್ಪರನ್ನು ಜಿ. ಎಂ. ಸಿದ್ದೇಶ್ವರ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ಸಿದ್ದೇಶ್ವರ ಅವರು ಆದಷ್ಟು ಬೇಗ ಸಂಪೂರ್ಣ ಗುಣಮುಖರಾಗಿ. ಶತಾಯುಷಿಗಳಾಗಿ ಎಂದು ಹಾರೈಸಿದರು.
ರಾಜಕೀಯದಲ್ಲಿ ಬದ್ದ ವೈರಿಗಳಾಗಿದ್ದ ಶಾಮನೂರು ಶಿವಶಂಕರಪ್ಪ ಹಾಗೂ ಜಿ. ಎಂ. ಸಿದ್ದೇಶ್ವರ ಅವರು ಸಂಬಂಧದಲ್ಲಿ ಮಾವ – ಅಳಿಯ ಆಗಬೇಕು. ಸಿದ್ದೇಶ್ವರ ಅವರು ಯಾವಾಗಲೂ ಶಾಮನೂರು ಶಿವಶಂಕರಪ್ಪರು ನಮ್ಮ ಹಿರಿಯರು.
ಅವರ ಮಾರ್ಗದರ್ಶನ ಅಗತ್ಯ ಎಂದು ಹೇಳುತ್ತಿದ್ದರು. ಯಾವುದೇ ರೀತಿಯ ಟೀಕೆಗಳನ್ನು ಮಾಡುತ್ತಿರಲಿಲ್ಲ. ಸಿದ್ದೇಶ್ವರ ಅವರು ಭೇಟಿ ನೀಡಿದ ವೇಳೆ ನಗುಮೊಗದಿಂದಲೇ ಸ್ವಾಗತಿಸಿದ ಶಾಮನೂರು ಶಿವಶಂಕರಪ್ಪರು ಭೇಟಿ ನೀಡಿದ್ದಕ್ಕೆ
ಧನ್ಯವಾದ ಹೇಳಿದರು. ಈ ವೇಳೆ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ್ ಮತ್ತಿತರರು ಹಾಜರಿದ್ದರು.