ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಪ್ರಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣಕ್ಕೆ ಈಗ ಯಾರಿಗೂ ಊಹಿಸಲಾಗದ ರೋಮಾಂಚಕ ತಿರುವು ಸಿಕ್ಕಿದೆ. ಈ ಕೊಲೆಯ ಹಿಂದಿರುವುದು ಯಾವುದೇ ಹಳೆಯ ಹಗೆತನ, ಹಣದ ಆಸೆ ಅಥವಾ ಕೌಟುಂಬಿಕ ವೈಷಮ್ಯವಲ್ಲ, ಬದಲಿಗೆ ಕೇವಲ ‘ಸಮಯ’ಕ್ಕಾಗಿ (Time) ಈ ಕೃತ್ಯ ಎಸಗಲಾಗಿದೆ ಎಂದು ಪುಣೆ ಪೊಲೀಸರು ಬಹಿರಂಗಪಡಿಸಿದ್ದಾರೆ!
ಹೌದು, ಉದ್ಯಮಿ ಕೇತನ್ ಅಗರ್ವಾಲ್ ಜೊತೆ ನಿಶ್ಚಿತಾರ್ಥವಾಗಿದ್ದ ಸಿಯಾ ಗೋಯಲ್ ಎಂಬಾಕೆಯೇ ತನ್ನ ಪ್ರಿಯಕರ ಚೇತನ್ ಚೌಧರಿ ಜೊತೆ ಸೇರಿ ಈ ಭೀಕರ ಹತ್ಯೆ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಯಾಗೆ ತನಗೆ ನಿಗದಿಯಾಗಿದ್ದ ಈ ಮದುವೆ ಇಷ್ಟವಿರಲಿಲ್ಲ. ಒಂದು ವೇಳೆ ಕೇತನ್‌ನನ್ನು ಮುಗಿಸಿದರೆ, ತನಗೆ ಮದುವೆಯಿಂದ ಕನಿಷ್ಠ 3 ವರ್ಷಗಳ ಕಾಲ ಬಿಡುಗಡೆ ಸಿಗುತ್ತದೆ ಎಂದು ಅವಳು ನಂಬಿದ್ದಳು ಎನ್ನಲಾಗಿದೆ. ಮತ್ತೊಂದೆಡೆ ಸಹ-ಆರೋಪಿ ಹಾಗೂ ಸಿಯಾ ಪ್ರಿಯಕರ ಚೇತನ್‌ಗೂ ಕೂಡ ಸೆಟಲ್ ಆಗಲು ಇನ್ನೂ 3 ವರ್ಷಗಳ ಕಾಲ ಸಮಯ ಬೇಕಿತ್ತಂತೆ.
ನಾಮುಚ್ಛೂಡಿಗೆ ಹೆದರಿ ಹತ್ಯೆಯ ಹಾದಿ!
ಸಿಯಾ ಹಾಗೂ ಕೇತನ್ ಅವರದ್ದು ಹಿರಿಯರು ನಿಶ್ಚಯಿಸಿದ ಮದುವೆಯಾಗಿತ್ತು (Arranged Marriage). ಈ ಮದುವೆಯನ್ನು ನಿರಾಕರಿಸಿದರೆ ಸಮಾಜದಲ್ಲಿ ಕುಟುಂಬಕ್ಕೆ ಮಾನಹಾನಿಯಾಗುತ್ತದೆ, ಮನೆಯವರು ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಇಬ್ಬರು ಆರೋಪಿಗಳು ಮದುವೆ ಕ್ಯಾನ್ಸಲ್ ಮಾಡುವ ಬದಲು, ಕೇತನ್‌ನನ್ನೇ ಜಗತ್ತಿನಿಂದ ಇಲ್ಲದಂಗೆ ಮಾಡಲು ಸಂಚು ರೂಪಿಸಿದ್ದರು.
2,004 ಕಾಲ್ಸ್, 238 ಗಂಟೆಗಳ ಮಾತುಕತೆ!
ಪೊಲೀಸ್ ತನಿಖೆಯ ವೇಳೆ ಇವರಿಬ್ಬರ ರಹಸ್ಯ ಸಂಬಂಧ ಬಯಲಾಗಿದೆ. ಸಿಯಾ ಮತ್ತು ಚೇತನ್ ಜನವರಿ ತಿಂಗಳಿನಿಂದ ಭಾರಿ ಸಂಪರ್ಕದಲ್ಲಿದ್ದರು. ಫೆಬ್ರವರಿಯಲ್ಲಿ ಕೇತನ್ ಜೊತೆ ಸಿಯಾ ನಿಶ್ಚಿತಾರ್ಥವಾಗುವ ಕೆಲವೇ ವಾರಗಳ ಮುನ್ನ ಇವರಿಬ್ಬರೂ ಸ್ನೇಹಿತರೊಂದಿಗೆ ಉದಯಪುರಕ್ಕೆ ಐದು ದಿನಗಳ ಪ್ರವಾಸ ಕೈಗೊಂಡಿದ್ದರು. ಇನ್ನು ಇವರ ಕಾಲ್ ರೆಕಾರ್ಡ್ಸ್ (CDR) ಪರಿಶೀಲಿಸಿದಾಗ ಇಬ್ಬರ ನಡುವೆ ಬರೋಬ್ಬರಿ 2,004 ಬಾರಿ ಫೋನ್ ಕರೆಗಳು ನಡೆದಿರುವುದು ಹಾಗೂ ಒಟ್ಟು 238 ಗಂಟೆಗಳ ಕಾಲ ಮಾತನಾಡ ಉಲ್ಲೇಖ ಸಿಕ್ಕಿದ್ದು, ಇದು ಕೊಲೆ ಸಂಚಿಗೆ ಬಲವಾದ ಸಾಕ್ಷಿಯಾಗಿದೆ.
ಕೊಲೆಯ ಹಿಂದಿನ ದಿನ ಕೆಫೆಯಲ್ಲಿ ಭೇಟಿ, ಚಾಟ್ಸ್ ಡಿಲೀಟ್!
ಜೂನ್ 18 ರಂದು ಕೇತನ್ ಅಗರ್ವಾಲ್ ಹತ್ಯೆಯಾಗಿದ್ದು, ಇದಕ್ಕೂ ಕೇವಲ ಒಂದು ದಿನ ಮುನ್ನ ಅಂದರೆ ಜೂನ್ 17 ರಂದು ಸಿಯಾ ಹಾಗೂ ಚೇತನ್ ಪುಣೆಯ ಲುಲ್ಲಾನಗರದ ಕೆಫೆಯೊಂದರಲ್ಲಿ ಸುಮಾರು ಒಂದು ಗಂಟೆ ಕಾಲ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಕೊಲೆಯ ಬಳಿಕ ಇಬ್ಬರೂ ತಮ್ಮ ಮೊಬೈಲ್‌ನಲ್ಲಿದ್ದ ವಾಟ್ಸಾಪ್, ಇನ್‌ಸ್ಟಾಗ್ರಾಮ್ ಚಾಟ್‌ಗಳನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿ, ರಿಸೈಕಲ್ ಬಿನ್ ಕೂಡ ಕ್ಲಿಯರ್ ಮಾಡಿ ಸಾಕ್ಷಿ ನಾಶಕ್ಕೆ ಯತ್ನಿಸಿದ್ದಾರೆ. ಸದ್ಯ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಈ ಡಿಲೀಟ್ ಆದ ಡೇಟಾವನ್ನು ರಿಕವರಿ ಮಾಡುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಯಾಳ ಸೋದರ ಸಾಹಿಲ್ ಗೋಯಲ್‌ನನ್ನು ಸತತ 10 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ತನಿಖೆ ಮುಂದುವರಿದಿದೆ.
- Call data records conspiracy
- Chetan Chaudhary
- Deleted WhatsApp chats forensics
- Fiancee kills fiance
- Pune crime news
- Pune murder case updates
- Pune realtor Ketan Agarwal murder
- Sahil Goyal questioning
- Siya Goyal
- Udaipur trip
- ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ
- ಚೇತನ್ ಚೌಧರಿ
- ಪುಣೆ ಕ್ರೈಮ್ ನ್ಯೂಸ್
- ಪುಣೆ ರಿಯಲ್ಟರ್ ಕೇತನ್ ಕೊಲೆ
- ಪ್ರಿಯಕರನೊಂದಿಗೆ ಸೇರಿ ಕೊಲೆ
- ಮದುವೆ ಮುಂದೂಡಲು ಕೊಲೆ
- ಮಹಾರಾಷ್ಟ್ರ ಕ್ರೈಮ್
- ರಹಸ್ಯ ಸಂಬಂಧ
- ವಾಟ್ಸಾಪ್ ಚಾಟ್ ಡಿಲೀಟ್
- ಸಿಯಾ ಗೋಯಲ್





Leave a comment