ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ಸಿ. ಜೋಸೆಫ್ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ವದಂತಿಗಳಿಗೆ ಈಗ ತೆರೆ ಬಿದ್ದಿದೆ.
ಜೂನ್ 22 ರಂದು ಸಿಎಂ ವಿಜಯ್ ಅವರ 52 ನೇ ವರ್ಷದ ಹುಟ್ಟುಹಬ್ಬಕ್ಕೆ ತ್ರಿಶಾ ಯಾವುದೇ ಪೋಸ್ಟ್ ಹಾಕದ ಕಾರಣ, ಇಬ್ಬರೂ ದೂರಾಗಿದ್ದಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿತ್ತು. ಆದರೆ, ಈಗ ತ್ರಿಶಾ ಹಂಚಿಕೊಂಡಿರುವ ಒಂದು ವಿಶೇಷ ಪೋಸ್ಟ್ ಇಂಟರ್‌ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ.
ವದಂತಿಗಳಿಗೆ ಬ್ರೇಕ್ ಹಾಕಿದ ಮಧ್ಯರಾತ್ರಿಯ ಸೆಲ್ಫಿ!
ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ತಾವಿಬ್ಬರು ದೂರಾಗಿದ್ದಾರೆ ಎಂಬ ಸುದ್ದಿಗೆ ನಟಿ ತ್ರಿಶಾ ಪರೋಕ್ಷವಾಗಿ ಉತ್ತರ ನೀಡಿದ್ದಾರೆ. ಸಿಎಂ ವಿಜಯ್ ಅವರ ಮಧ್ಯರಾತ್ರಿಯ ಬರ್ತ್‌ಡೇ ಆಚರಣೆಯ ಸುಂದರ ಫೋಟೋವೊಂದನ್ನು ಹಂಚಿಕೊಂಡಿರುವ ಅವರು, “ಯಾರಿಂದಾಗಿ ಎಲ್ಲವೂ ಸಾರ್ಥಕ ಎನಿಸುತ್ತದೆಯೋ ಆ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು (To the person who makes it all worth it, HBD 00.00)” ಎಂದು ಬರೆದುಕೊಂಡು ಹಾರ್ಟ್ ಎಮೋಜಿ ಹಾಕಿದ್ದಾರೆ. ಫೋಟೋದಲ್ಲಿ ವಿಜಯ್ ಕೇಕ್ ಮುಂದೆ ನಿಂತು ನಗುತ್ತಿದ್ದರೆ, ತ್ರಿಶಾ ಅವರನ್ನು ಪ್ರೀತಿಯಿಂದ ನೋಡುತ್ತಿರುವುದು ಕಾಣಬಹುದು.
ಅನ್‌ಫಾಲೋ ಸುದ್ದಿ ಸುಳ್ಳು:
ತ್ರಿಶಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಎಂಬ ವದಂತಿ ಹರಡಿತ್ತು. ಆದರೆ ಮೂಲಗಳ ಪ್ರಕಾರ, ತ್ರಿಶಾ ಮೊದಲಿನಿಂದಲೂ ವಿಜಯ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡಿಯೇ ಇರಲಿಲ್ಲ. ಹೀಗಾಗಿ ಅನ್‌ಫಾಲೋ ಎಂಬ ವದಂತಿ ಸಂಪೂರ್ಣ ಸುಳ್ಳು ಎಂದು ಸ್ಪಷ್ಟವಾಗಿದೆ.
ದಿಢೀರ್ ಚರ್ಚೆಗೆ ಕಾರಣವೇನು?
ಇತ್ತೀಚೆಗೆ ರಾಜಕೀಯಕ್ಕೆ ಪ್ರವೇಶಿಸಿ ಮೇ ತಿಂಗಳಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ವಿಜಯ್ ಅವರ ವೈಯಕ್ತಿಕ ಜೀವನ ಸದ್ಯ ಕೋರ್ಟ್ ಮೆಟ್ಟಿಲೇರಿದೆ. ಅವರ ಪತ್ನಿ ಸಂಗೀತ ಸೊರ್ನಾಲಿಂಗಂ ಫೆಬ್ರವರಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ವಿಜಯ್ ಅವರಿಗೆ ಬೇರೆ ಮಹಿಳೆಯೊಂದಿಗೆ ಸಂಬಂಧವಿದೆ ಎಂದು ಆರೋಪಿಸಿದ್ದರು. ಈ ಪ್ರಕರಣದ ವಿಚಾರಣೆ ಜೂನ್ 22 ರಂದೇ ನಿಗದಿಯಾಗಿತ್ತು, ಬಳಿಕ ಇದನ್ನು ಆಗಸ್ಟ್ 7 ಕ್ಕೆ ಮುಂದೂಡಲಾಗಿದೆ. ಇದೇ ಕಾರಣಕ್ಕೆ ತ್ರಿಶಾ ಮತ್ತು ವಿಜಯ್ ಜೋಡಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ.
- CM Vijay birthday post
- Tamil cinema updates
- Tamil Nadu CM Vijay 52nd birthday
- Thalapathy Vijay divorce case
- Trisha Instagram Post
- Trisha Krishnan
- Trisha Unfollow Vijay rumors
- Vijay Trisha relationship news
- ತಮಿಳು ಸಿನಿಮಾ ಸುದ್ದಿ
- ತಮಿಳುನಾಡು ಮುಖ್ಯಮಂತ್ರಿ ವಿಜಯ್
- ತ್ರಿಶಾ ಇನ್ಸ್ಟಾಗ್ರಾಮ್ ಪೋಸ್ಟ್
- ತ್ರಿಶಾ ಕೃಷ್ಣನ್
- ನಟ ವಿಜಯ್ ಬರ್ತ್‌ಡೇ
- ವಿಜಯ್ ತ್ರಿಶಾ ಬ್ರೇಕಪ್ ವದಂತಿ
- ವಿಜಯ್ ವಿಚ್ಛೇದನ ಪ್ರಕರಣ
- ಸಿಎಂ ವಿಜಯ್ 52ನೇ ಹುಟ್ಟುಹಬ್ಬ





Leave a comment