Home ದಾವಣಗೆರೆ ವಾಹನ ಸವಾರರಿಗೆ ಶಾಕ್: ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ಬೆಲೆ! ನಿಮ್ಮ ನಗರದ ಇಂದಿನ ದರ ಪರಿಶೀಲಿಸಿ
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ವಾಹನ ಸವಾರರಿಗೆ ಶಾಕ್: ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ಬೆಲೆ! ನಿಮ್ಮ ನಗರದ ಇಂದಿನ ದರ ಪರಿಶೀಲಿಸಿ

Share
ಡೀಸೆಲ್
Share

ನವದೆಹಲಿ: ದೇಶಾದ್ಯಂತ ವಾಹನ ಸವಾರರ ಜೇಬಿಗೆ ಇಂಧನ ದರ ಮತ್ತೊಮ್ಮೆ ಭಾರಿ ಕತ್ತರಿ ಹಾಕಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆ ಏರಿಕೆ ಮತ್ತು ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿತದ ಹಿನ್ನೆಲೆಯಲ್ಲಿ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಕೇವಲ ಎರಡು ವಾರಗಳಲ್ಲಿ ನಾಲ್ಕನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಳ ಮಾಡಿವೆ.

ಕಳೆದ ಮೇ 15 ರಿಂದ ನಿರಂತರವಾಗಿ ಪರಿಷ್ಕರಣೆಗೊಳ್ಳುತ್ತಿರುವ ಇಂಧನ ದರವು, ಈ ಕೆಲವೇ ದಿನಗಳಲ್ಲಿ ಪ್ರತಿ ಲೀಟರ್‌ಗೆ ಬರೋಬ್ಬರಿ 7.50 ರೂಪಾಯಿಗಳಷ್ಟು ದುಬಾರಿಯಾಗಿದೆ. ಇಂದಿನ ಜಾರಿಗೆ ಬಂದಿರುವ ನೂತನ ದರಗಳ ಅನ್ವಯ ದೇಶದ ಪ್ರಮುಖ ನಗರಗಳಲ್ಲಿ ಇಂಧನ ದರ ಶತಕ ದಾಟಿ ಮುನ್ನುಗ್ಗುತ್ತಿದೆ. ಪ್ರಮುಖವಾಗಿ ಹೈದರಾಬಾದ್ ಮತ್ತು ತಿರುವನಂತಪುರಂನಲ್ಲಿ ಪೆಟ್ರೋಲ್ ದರ ₹115 ರ ಗಡಿ ದಾಟಿದ್ದರೆ, ಮುಂಬೈ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲೂ ಬೆಲೆ ಗಗನಕ್ಕೇರಿದೆ.

ಬೆಂಗಳೂರಿನಲ್ಲಿ ಇಂದಿನ ದರ ಎಷ್ಟು?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿನ ಪರಿಷ್ಕೃತ ದರಗಳ ಪ್ರಕಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹110.93 ಕ್ಕೆ ತಲುಪಿದ್ದರೆ, ವಾಣಿಜ್ಯ ವಾಹನಗಳ ಜೀವನಾಡಿಯಾಗಿರುವ ಡೀಸೆಲ್ ದರ ಪ್ರತಿ ಲೀಟರ್‌ಗೆ ₹98.80 ಮುಟ್ಟಿದೆ.

ದೇಶದ ಪ್ರಮುಖ ನಗರಗಳ ಇಂದಿನ ಇಂಧನ ದರ ಪಟ್ಟಿ (May 25, 2026):

ನಗರಪೆಟ್ರೋಲ್ ದರ (ಪ್ರತಿ ಲೀಟರ್‌ಗೆ)ಡೀಸೆಲ್ ದರ (ಪ್ರತಿ ಲೀಟರ್‌ಗೆ)
ಹೈದರಾಬಾದ್₹115.69₹103.82
ತಿರುವನಂತಪುರಂ₹115.49₹104.40
ಕೋಲ್ಕತ್ತಾ₹113.51₹99.82
ಮುಂಬೈ₹111.21₹97.83
ಬೆಂಗಳೂರು₹110.93₹98.80
ಚೆನ್ನೈ₹107.77₹99.55
ನವದೆಹಲಿ₹102.12₹95.20

ಬೆಲೆ ಏರಿಕೆಗೆ ಮುಖ್ಯ ಕಾರಣಗಳೇನು?

ಮಧ್ಯಪ್ರಾಚ್ಯದಲ್ಲಿ (Middle East) ಎದುರಾಗಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗ ಭೀತಿ ಎದುರಾಗಿದೆ. ಭಾರತವು ತನ್ನ ಬಳಕೆಯ ಶೇಕಡಾ 85 ಕ್ಕಿಂತ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ಜಾಗತಿಕ ಮಾರುಕಟ್ಟೆಯ ಏರಿಳಿತಗಳು ನೇರವಾಗಿ ದೇಶೀಯ ಇಂಧನ ದರಗಳ ಮೇಲೆ ಪ್ರಭಾವ ಬೀರುತ್ತಿವೆ. ಇದರೊಂದಿಗೆ ಸಾರಿಗೆ ವೆಚ್ಚ ಹೆಚ್ಚಾಗುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುವ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.

Share

Leave a comment

Leave a Reply

Your email address will not be published. Required fields are marked *