ಮಂಗಳೂರು: ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಗಾದೆ ಮಾತಿದೆ. ಆದರೆ ಇಂದಿನ ದಿನಗಳಲ್ಲಿ ಸುಶಿಕ್ಷಿತ ಯುವತಿಯರೇ ಮಾದಕ ದ್ರವ್ಯದಂತಹ ಕರಾಳ ಜಾಲಕ್ಕೆ ಬಲಿಯಾಗುತ್ತಿರುವುದು ಆತಂಕ ಮೂಡಿಸಿದೆ.
ಮಂಗಳೂರಿನ ಮುಲ್ಕಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ಬಂಧಿತ ಆರೋಪಿತೆಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸುಹಾನಾ (21) ಎಂದು ಗುರುತಿಸಲಾಗಿದೆ. ಈಕೆ ಕುಂದಾಪುರದ ಖಾಸಗಿ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿ.ಸಿ.ಎ ವ್ಯಾಸಂಗ ಮಾಡುತ್ತಿದ್ದಳು. ಮಂಗಳೂರಿನ ಮುಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಮಾದಕ ದ್ರವ್ಯ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಮುಲ್ಕಿ ಪೊಲೀಸರು ದಾಳಿ ನಡೆಸಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ.
ಜಪ್ತಿ ಮಾಡಿದ ಸೊತ್ತುಗಳು: ಬಂಧಿತಳಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 1 ಕೆ.ಜಿ 42 ಗ್ರಾಂ ತೂಕದ ಅತ್ಯಂತ ದುಬಾರಿ ‘ಹೈಡ್ರೋವಿಡ್ ಗಾಂಜಾ’ವನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಹಾಗೂ ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಚೆನ್ನೈ ಟು ಮಂಗಳೂರು ಕನೆಕ್ಷನ್: ಪ್ರಾಥಮಿಕ ತನಿಖೆಯ ಪ್ರಕಾರ, ಈ ಮಾದಕ ವಸ್ತುವನ್ನು ಆರೋಪಿತೆಯು ಚೆನ್ನೈನಿಂದ ತರಿಸಿಕೊಂಡಿದ್ದಳು. ಮಂಗಳೂರಿನಲ್ಲಿ ಅಕ್ರಮವಾಗಿ ಪೂರೈಸಿ ಅತಿ ವೇಗವಾಗಿ ಹಣ ಗಳಿಸುವ ಉದ್ದೇಶದಿಂದ ಈ ಜಾಲದಲ್ಲಿ ಸಕ್ರಿಯಳಾಗಿದ್ದಳು ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.
ಹಳೆಯ ಪ್ರಕರಣಗಳ ನಂಟು: ಈಕೆಯ ಮೇಲೆ ಈ ಹಿಂದೆಯೂ ಗಂಭೀರ ಪ್ರಕರಣಗಳು ದಾಖಲಾಗಿವೆ. ಮಂಗಳೂರಿನ ಕಾವೂರು ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದಲ್ಲೂ ಈಕೆಯ ವಿರುದ್ಧ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.
- BCA student drug trafficking
- Hydro weed seized Mangalore
- Karnataka drug mafia
- Mangalore crime news
- Mangalore drug bust
- Mulki police arrest student
- NDPS case Mangalore.
- Suhana Sagar arrested
- ಬಿಸಿಎ ವಿದ್ಯಾರ್ಥಿನಿ ಬಂಧನ
- ಮಂಗಳೂರು ಡ್ರಗ್ಸ್ ಪ್ರಕರಣ
- ಮಂಗಳೂರು ನ್ಯೂಸ್.
- ಮಾದಕ ದ್ರವ್ಯ ಜಾಲ
- ಮುಲ್ಕಿ ಪೊಲೀಸರ ಕಾರ್ಯಾಚರಣೆ
- ಶಿವಮೊಗ್ಗ ಸುಹಾನಾ ಬಂಧನ
- ಹೈಡ್ರೋವಿಡ್ ಗಾಂಜಾ





Leave a comment