Home ಕ್ರೈಂ ನ್ಯೂಸ್ EXCLUSIVE: ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ, ಪಕ್ಷದ ಸದಸ್ಯ ಸ್ಥಾನದಿಂದ ಉಚ್ಚಾಟನೆ: ಅಬ್ದುಲ್ ಜಬ್ಬಾರ್ ಎಂಎಲ್ ಸಿ ಇರುತ್ತೋ ಹೋಗುತ್ತೋ? ಇಲ್ಲಿದೆ ಉತ್ತರ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

EXCLUSIVE: ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ, ಪಕ್ಷದ ಸದಸ್ಯ ಸ್ಥಾನದಿಂದ ಉಚ್ಚಾಟನೆ: ಅಬ್ದುಲ್ ಜಬ್ಬಾರ್ ಎಂಎಲ್ ಸಿ ಇರುತ್ತೋ ಹೋಗುತ್ತೋ? ಇಲ್ಲಿದೆ ಉತ್ತರ

Share
ದಾವಣಗೆರೆ
Share

ದಾವಣಗೆರೆ: ಕಾಂಗ್ರೆಸ್ ಪಕ್ಷದ ಸದಸ್ಯತ್ವ ಸ್ಥಾನವೂ ಹೋಯ್ತು. ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಸ್ಥಾನವೂ ಹೋಯ್ತು. ಕೊನೆಗೆ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳುತ್ತಾ. ಇದು ದಾವಣಗೆರೆಯ ಅಬ್ದುಲ್ ಜಬ್ಬಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟ ಶಾಕ್ ಮೇಲೆ ಶಾಕ್.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಪ್ರಚಾರ ಮಾಡದೇ, ಶಿಸ್ತು ಉಲ್ಲಂಘನೆ ಮಾಡಿದ್ದಕ್ಕಾಗಿ ಈಗಾಗಲೇ ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅಬ್ದುಲ್ ಜಬ್ಬಾರ್ ಅವರನ್ನು ಈಗಾಗಲೇ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಉಚ್ಚಾಟನೆ ಮಾಡಿದ್ದಾರೆ. ಆದರೆ, ಈಗ ಕಾಡುತ್ತಿರುವ ಪ್ರಶ್ನೆ ಅಬ್ದುಲ್ ಜಬ್ಬಾರ್ ರ ವಿಧಾನ ಪರಿಷತ್ ಸದಸ್ಯ ಸ್ಥಾನ ಇರುತ್ತೋ ಹೋಗುತ್ತೋ ಎಂದು.

ಪಕ್ಷದಿಂದ ಉಚ್ಚಾಟನೆ ಮಾಡಿರುವುದರಿಂದ ಸಹಜವಾಗಿಯೇ ಪಕ್ಷದ ಸಭೆ, ಕಾರ್ಯಕ್ರಮ ಸೇರಿದಂತೆ ಎಲ್ಲಾ ಚಟುವಟಿಕೆಗಳಿಂದ ದೂರ ಉಳಿಯುತ್ತಾರೆ. ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಲಾಗಿತ್ತು. ಮೂರು ಬಾರಿಯೂ ಕಾಂಗ್ರೆಸ್ ಪಕ್ಷದಿಂದ ಎಂಎಲ್ ಸಿ ಆಗಿದ್ದ ಅಬ್ದುಲ್ ಜಬ್ಬಾರ್ ಅವರ ಈಗಿನ ಸ್ಥಾನ ಇರುತ್ತೋ ಹೋಗುತ್ತೋ ಎಂಬ ಗೊಂದಲ ಉಂಟಾಗಿದ್ದರೂ ಸದ್ಯಕ್ಕೆ ಸೇಫ್.

 ಪಕ್ಷದಿಂದ ಉಚ್ಚಾಟನೆ ಮತ್ತು MLC ಸ್ಥಾನ

ಭಾರತೀಯ ಸಂವಿಧಾನದ ಹತ್ತನೇ ಅನುಸೂಚಿ (Anti-Defection Law/ಪಕ್ಷಾಂತರ ನಿರೋಧಕ ಕಾಯ್ದೆ) ಪ್ರಕಾರ, ಒಬ್ಬ ಸದಸ್ಯನನ್ನು ಪಕ್ಷದಿಂದ ಉಚ್ಚಾಟಿಸಿದ ತಕ್ಷಣ ಆತನ ಸದನದ ಸದಸ್ಯತ್ವ ತಾನಾಗಿಯೇ ರದ್ದಾಗುವುದಿಲ್ಲ.

ತಾಂತ್ರಿಕವಾಗಿ:

ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದರೂ, ಅವರು ಸದನದಲ್ಲಿ (ವಿಧಾನ ಪರಿಷತ್) “ಉಚ್ಚಾಟಿತ ಸದಸ್ಯ” (Expelled Member) ಆಗಿ ಮುಂದುವರಿಯಬಹುದು.

ಸ್ವತಂತ್ರ ಸದಸ್ಯನಲ್ಲ:

ಪಕ್ಷದಿಂದ ಹೊರಹಾಕಲ್ಪಟ್ಟರೂ ಸದನದ ದಾಖಲೆಗಳಲ್ಲಿ ಅವರು ಅದೇ ಪಕ್ಷದ “ಲೇಬಲ್” ಅಡಿಯಲ್ಲೇ ಇರುತ್ತಾರೆ. ಅವರು ಬೇರೆ ಯಾವುದೇ ಪಕ್ಷಕ್ಕೆ ಅಧಿಕೃತವಾಗಿ ಸೇರುವಂತಿಲ್ಲ. ಒಂದು ವೇಳೆ ಸೇರಿದರೆ ಮಾತ್ರ ಅವರ ಸದಸ್ಯತ್ವ ಅನರ್ಹಗೊಳ್ಳುತ್ತದೆ.

2. ಸದಸ್ಯತ್ವ ಯಾವಾಗ ಹೋಗುತ್ತದೆ?

ಅಬ್ದುಲ್ ಜಬ್ಬಾರ್ ಅವರ ಎಂಎಲ್ ಸಿ ಸ್ಥಾನ ಹೋಗಬೇಕೆಂದರೆ ಈ ಕೆಳಗಿನ ಯಾವುದಾದರೂ ಒಂದು ಘಟನೆ ನಡೆಯಬೇಕು:

  • ಸ್ವಯಂ ರಾಜೀನಾಮೆ: ಅವರೇ ಸ್ವತಃ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸಭಾಪತಿಗಳಿಗೆ ಸಲ್ಲಿಸಿದರೆ ಸ್ಥಾನ ತೆರವಾಗುತ್ತದೆ.

  • ವಿಪ್ ಉಲ್ಲಂಘನೆ: ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷ ನೀಡುವ ಅಧಿಕೃತ ‘ವಿಪ್’ (ಮತದಾನದ ಸೂಚನೆ) ಅನ್ನು ಅವರು ಉಲ್ಲಂಘಿಸಿದರೆ, ಪಕ್ಷವು ಸಭಾಪತಿಗಳಿಗೆ ದೂರು ನೀಡುವ ಮೂಲಕ ಅವರನ್ನು ಅನರ್ಹಗೊಳಿಸಬಹುದು.

  • ಬೇರೆ ಪಕ್ಷ ಸೇರ್ಪಡೆ: ಅವರು ಅಧಿಕೃತವಾಗಿ ಬೇರೆ ರಾಜಕೀಯ ಪಕ್ಷದ ಸದಸ್ಯತ್ವ ಪಡೆದರೆ ಅವರ ಎಂಎಲ್ ಸಿ ಸ್ಥಾನ ತಕ್ಷಣವೇ ರದ್ದಾಗುತ್ತದೆ.

3. ಈಗಿರುವ ಸಾಧ್ಯತೆಗಳು

ಪ್ರಸ್ತುತ ಸನ್ನಿವೇಶದಲ್ಲಿ ಅಬ್ದುಲ್ ಜಬ್ಬಾರ್ ಅವರ ಮುಂದೆ ಮೂರು ದಾರಿಗಳಿವೆ:

ಹೋರಾಟಪಕ್ಷದ ಶಿಸ್ತು ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುವುದು ಅಥವಾ ಎಂಎಲ್ ಸಿಯಾಗಿ ಅವಧಿ ಮುಗಿಯುವವರೆಗೆ ಮುಂದುವರಿಯುವುದು.

ಸರಣಿ ರಾಜೀನಾಮೆ:

ನೈತಿಕ ಹೊಣೆ ಹೊತ್ತು ಅಥವಾ ಪಕ್ಷದ ಒತ್ತಡಕ್ಕೆ ಮಣಿದು ಎಂಎಲ್ ಸಿ ಸ್ಥಾನಕ್ಕೂ ರಾಜೀನಾಮೆ ನೀಡುವುದು.

ತಟಸ್ಥ ಧೋರಣೆ:

ಕಾಂಗ್ರೆಸ್‌ನಿಂದ ಉಚ್ಚಾಟಿತರಾಗಿದ್ದರೂ, ಸದನದಲ್ಲಿ ತಾಂತ್ರಿಕವಾಗಿ ಕಾಂಗ್ರೆಸ್ ಸದಸ್ಯರಾಗಿಯೇ ಉಳಿದು, ಪಕ್ಷದ ಕಾರ್ಯಕ್ರಮಗಳಿಂದ ದೂರವಿರುವುದು.

ರಾಜಕೀಯ ವಿಶ್ಲೇಷಕರ ಪ್ರಕಾರ ಅಬ್ದುಲ್ ಜಬ್ಬಾರ್ ಅವರೇ ರಾಜೀನಾಮೆ ನೀಡಬೇಕಾಗುತ್ತದೆ. ರಾಜ್ಯ ಸರ್ಕಾರ ಕಾಂಗ್ರೆಸ್ ಪಕ್ಷವೇ ಇರುವುದರಿಂದ ಸಹಜವಾಗಿಯೇ ಯಾವ ಕಾರ್ಯಕ್ರಮಗಳಲ್ಲಿಯೂ ಪಕ್ಷದಲ್ಲಿ ಗುರುತಿಸಿಕೊಳ್ಳದ ಕಾರಣ ಅಬ್ದುಲ್ ಜಬ್ಬಾರ್ ಅವರೇ ರಾಜೀನಾಮೆ ನೀಡಬೇಕು. ಪಕ್ಷದಿಂದ ಉಚ್ಚಾಟನೆ ಮಾಡಿದರೂ ವಿಧಾನ ಪರಿಷತ್ ಸದಸ್ಯ ಸ್ಥಾನ ಇರುತ್ತದೆ. ಹಾಗಾಗಿ, ಅಬ್ದುಲ್ ಜಬ್ಬಾರ್ ಅವರು ರಾಜೀನಾಮೆ ನೀಡುತ್ತಾರಾ, ಕಾಂಗ್ರೆಸ್ ಹೈಕಮಾಂಡ್ ಗೆ ಸೆಡ್ಡು ಹೊಡೆಯುತ್ತಾರಾ? ಎಂಬ ಪ್ರಶ್ನೆ ಎದ್ದಿದೆ.

Share

Leave a comment

Leave a Reply

Your email address will not be published. Required fields are marked *