Home ಉದ್ಯೋಗ ವಾರ್ತೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದಲ್ಲಿ 61 ವಿವಿಧ ಹುದ್ದೆಗಳ ನೇಮಕಾತಿ: SSLC, PUC ಪಾಸಾದವರಿಗೆ ಸುವರ್ಣಾವಕಾಶ!
ಉದ್ಯೋಗ ವಾರ್ತೆದಾವಣಗೆರೆನವದೆಹಲಿಬೆಂಗಳೂರು

ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದಲ್ಲಿ 61 ವಿವಿಧ ಹುದ್ದೆಗಳ ನೇಮಕಾತಿ: SSLC, PUC ಪಾಸಾದವರಿಗೆ ಸುವರ್ಣಾವಕಾಶ!

Share
ಚಿಕ್ಕಮಗಳೂರು
Share

ಚಿಕ್ಕಮಗಳೂರು: ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಸುದ್ದಿ. ಚಿಕ್ಕಮಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಘಟಕದಲ್ಲಿ ಖಾಲಿ ಇರುವ ಒಟ್ಟು 61 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

 ಹುದ್ದೆಗಳ ವಿವರ (Vacancies)

  • ಸೇವಕರು (Peon): 47 ಹುದ್ದೆಗಳು

  • ಬೆರಳಚ್ಚುಗಾರರು (Typist): 06 ಹುದ್ದೆಗಳು

  • ಶೀಘ್ರಲಿಪಿಗಾರರು ಗ್ರೇಡ್-III (Stenographer Grade-III): 05 ಹುದ್ದೆಗಳು

  • ಆದೇಶ ಜಾರಿಕಾರರು (Process Server): 02 ಹುದ್ದೆಗಳು

  • ಬೆರಳಚ್ಚು-ನಕಲುಗಾರರು (Typist-Copyist): 01 ಹುದ್ದೆ

  • ಒಟ್ಟು ಹುದ್ದೆಗಳು: 61

ಶೈಕ್ಷಣಿಕ ಅರ್ಹತೆ ಮತ್ತು ವೇತನ ಶ್ರೇಣಿ

ಹುದ್ದೆಯ ಹೆಸರುವಿದ್ಯಾರ್ಹತೆಮಾಸಿಕ ವೇತನ ಶ್ರೇಣಿ (₹)
ಸೇವಕರು (Peon)SSLC (10ನೇ ತರಗತಿ) ಉತ್ತೀರ್ಣ ಹಾಗೂ ಕನ್ನಡ ಓದಲು-ಬರೆಯಲು ಬರಬೇಕು₹27,000 – ₹46,675
ಆದೇಶ ಜಾರಿಕಾರರುSSLC ಉತ್ತೀರ್ಣ (ಚಾಲನಾ ಪರವಾನಗಿ ಇದ್ದವರಿಗೆ ಆದ್ಯತೆ)₹31,775 – ₹61,300
ಬೆರಳಚ್ಚುಗಾರರು / ನಕಲುಗಾರರು2ನೇ PUC / ಡಿಪ್ಲೋಮಾ ಹಾಗೂ ಸೀನಿಯರ್/ಜೂನಿಯರ್ ಟೈಪಿಂಗ್ ಪರೀಕ್ಷೆ ಉತ್ತೀರ್ಣ₹34,100 – ₹67,600
ಶೀಘ್ರಲಿಪಿಗಾರರು ಗ್ರೇಡ್-III2ನೇ PUC ಹಾಗೂ ಸೀನಿಯರ್ ಶೀಘ್ರಲಿಪಿ ಮತ್ತು ಟೈಪಿಂಗ್ ಉತ್ತೀರ್ಣ₹44,425 – ₹83,700

ವಯೋಮಿತಿ (28 ಜುಲೈ 2026 ಕ್ಕೆ ಅನ್ವಯವಾಗುವಂತೆ)

  • ಸಾಮಾನ್ಯ ವರ್ಗ (General): 18 ರಿಂದ 35 ವರ್ಷಗಳು (ಸಡಿಲಿಕೆ ಸೇರಿ)

  • ಪ್ರವರ್ಗ 2A, 2B, 3A, 3B: 18 ರಿಂದ 38 ವರ್ಷಗಳು

  • SC / ST / ಪ್ರವರ್ಗ-1: 18 ರಿಂದ 40 ವರ್ಷಗಳು

ಅರ್ಜಿ ಶುಲ್ಕ

  • ಸಾಮಾನ್ಯ ಅಭ್ಯರ್ಥಿಗಳಿಗೆ: ₹300

  • ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: ₹150

  • SC, ST, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ ನೀಡಲಾಗಿದೆ (ಉಚಿತ).

ಪ್ರಮುಖ ದಿನಾಂಕಗಳು

  • ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: 29 ಜೂನ್ 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28 ಜುಲೈ 2026 (ರಾತ್ರಿ 11:59 ರವರೆಗೆ)

  • ಅಧಿಕೃತ ವೆಬ್‌ಸೈಟ್: chikkamagaluru.dcourts.gov.in

Share

Leave a comment

Leave a Reply

Your email address will not be published. Required fields are marked *