Home ಕ್ರೈಂ ನ್ಯೂಸ್ ನಾನೇ ರಾಜೀನಾಮೆ ಕೊಟ್ಟ ಮೇಲೆ ಉಚ್ಚಾಟನೆ ಎಲ್ಲಿಂದ? ರಿಜ್ವಾನ್ ಅರ್ಷದ್ ವಿರುದ್ಧ ಅಫ್ರೀನ್ ಖಾನ್ ಆಕ್ರೋಶ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ನಾನೇ ರಾಜೀನಾಮೆ ಕೊಟ್ಟ ಮೇಲೆ ಉಚ್ಚಾಟನೆ ಎಲ್ಲಿಂದ? ರಿಜ್ವಾನ್ ಅರ್ಷದ್ ವಿರುದ್ಧ ಅಫ್ರೀನ್ ಖಾನ್ ಆಕ್ರೋಶ!

Share
ಉಚ್ಚಾಟನೆ
Share

ಬೆಂಗಳೂರು: ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತ ಈಗ ಬೀದಿಗೆ ಬಂದಿದೆ. ಬೆಂಗಳೂರು ಉತ್ತರ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಸ್ಥಾನದಿಂದ ಉಚ್ಚಾಟನೆಗೊಂಡ ಬೆನ್ನಲ್ಲೇ ಅಫ್ರೀನ್ ಖಾನ್, ಶಾಸಕ ರಿಜ್ವಾನ್ ಅರ್ಷದ್ ಮತ್ತು ನಾಯಕ ಸಲೀಂ ಅಹ್ಮದ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಉಚ್ಚಾಟನೆ ಮಾಡಿದ ಬಳಿಕ ಫೇಸ್ ಬುಕ್ ನಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಅವರು, ಉಚ್ಚಾಟನೆ ಮಾಡಿದ್ದೇವೆ ಎನ್ನೋದು ಮೂರ್ಖತನದ್ದು ಎಂದು ಹೇಳಿದ್ದಾರೆ.

ಮುಖ್ಯಾಂಶಗಳು:

ರಾಜೀನಾಮೆ vs ಉಚ್ಚಾಟನೆ:

ತಾವು ಏಪ್ರಿಲ್ 4ರಂದೇ ರಾಜೀನಾಮೆ ನೀಡಿದ್ದು, ಈಗ ಉಚ್ಚಾಟನೆ ಮಾಡಿರುವುದು ಕೇವಲ ರಾಜಕೀಯ ನಾಟಕ ಎಂದು ಅಫ್ರೀನ್ ಕಿಡಿಕಾರಿದ್ದಾರೆ.

ದಾವಣಗೆರೆ ಉಪಚುನಾವಣೆ:

ದಾವಣಗೆರೆ ದಕ್ಷಿಣ ಉಪಚುನಾವಣೆಯ ಸಂದರ್ಭದಲ್ಲಿ ಹಿರಿಯ ನಾಯಕರಾದ ನಸೀರ್ ಅಹ್ಮದ್ ಮತ್ತು ಅಬ್ದುಲ್ ಜಬ್ಬಾರ್ ಅವರ ರಾಜೀನಾಮೆಯನ್ನು ಬಲವಂತವಾಗಿ ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ.

ಮುಸ್ಲಿಂ ನಾಯಕತ್ವ:

ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪ್ರಭಾವ ಕುಗ್ಗಿಸಲು ರಿಜ್ವಾನ್ ಅರ್ಷದ್ ಯತ್ನಿಸುತ್ತಿದ್ದಾರೆ ಮತ್ತು ಮುಸ್ಲಿಂ ಸಮುದಾಯವನ್ನು ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ ಎಂದು ದೂರಿದ್ದಾರೆ.

ಜಾತಿಗಣತಿ ವಿಳಂಬ:

ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಮತ್ತು ಜಾತಿಗಣತಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ದ್ರೋಹ ಬಗೆದಿದೆ ಎಂದು ಅವರು ಟೀಕಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *