Home ದಾವಣಗೆರೆ ದಾವಣಗೆರೆ ಲಯನ್ಸ್ ಕ್ಲಬ್‌ಗೆ ನೂತನ ಸಾರಥಿ ಮಹಾಂತೇಶ್ ವಿ. ಒಣರೊಟ್ಟಿ: 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಜುಲೈ 26ಕ್ಕೆ
ದಾವಣಗೆರೆಬೆಂಗಳೂರು

ದಾವಣಗೆರೆ ಲಯನ್ಸ್ ಕ್ಲಬ್‌ಗೆ ನೂತನ ಸಾರಥಿ ಮಹಾಂತೇಶ್ ವಿ. ಒಣರೊಟ್ಟಿ: 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಜುಲೈ 26ಕ್ಕೆ

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ಲಯನ್ಸ್ ಕ್ಲಬ್ 317 ಹೆಚ್. ಜಿಲ್ಲೆಯ 2026-2027ನೇ ಸಾಲಿನ ನೂತನ ಪದಾಧಿಕಾರಿಗಳ ಪ್ರತಿಷ್ಠಾಪನಾ ಸಮಾರಂಭವು ನಗರದ ದೇವರಾಜ್ ಅರಸ್ ಬಡಾವಣೆಯಲ್ಲಿನ ಲಯನ್ಸ್ ಭವನದಲ್ಲಿ ಜುಲೈ 26ರಂದು ಆಯೋಜಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಲಯನ್ಸ್ ಕ್ಲಬ್ ಜಿಲ್ಲಾ 317 ಹೆಚ್. ಕಾರ್ಯದರ್ಶಿ ಸುರಭಿ ಶಿವಮೂರ್ತಿ ಅವರು, ಸಂಜೆ 6 ಗಂಟೆಯಿಂದ 9.30 ಗಂಟೆಯವರೆಗೆ ಲಯನ್ ಮಹಾಂತೇಶ್ ವಿ. ಒಣರೊಟ್ಟಿ ಅವರ ನೇತೃತ್ವದಲ್ಲಿ ನಡೆಯುವ ನೂತನ ಪದಾಧಿಕಾರಿಗಳ ಪ್ರತಿಷ್ಠಾಪನಾ ಸಮಾರಂಭ ಹಾಗೂ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವ ಕಾರ್ಯಕ್ರಮದ ಉದ್ಘಾಟನೆಯನ್ನು ಲಯನ್ಸ್ ಕ್ಲಬ್ ಪ್ರಥಮ ಮಹಿಳೆ ಮಂಜುಳಾ ಮಹಾಂತೇಶ್ ವಿ. ಒಣರೊಟ್ಟಿ ಅವರು ನೆರವೇರಿಸಲಿದ್ದಾರೆ. ಜಿಲ್ಲೆ 317 ಹೆಚ್ ಲಯನ್ಸ್ ಮಾಜಿ ಗೌರ್ನರ್ ಎಂ. ಕೆ. ಭಟ್ ಅವರು ಪ್ರತಿಷ್ಠಾಪನಾ ಅಧಿಕಾರಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು, 317 ಹೆಚ್. ಲಯನ್ಸ್ ಜಿಲ್ಲಾ ಗೌರ್ನರ್ ಆರ್. ಜಿ. ಶ್ರೀನಿವಾಸಮೂರ್ತಿ ಭಾಗವಹಿಸಲಿದ್ದಾರೆ. ನೂತನ ಸದಸ್ಯರಿಗೆ ಪ್ರಮಾಣ ಮತ್ತು ವಚನ ಬೋಧನೆಯನ್ನು ಲಯನ್ಸ್ ಮಾಜಿ ಗೌರ್ನರ್ ಡಾ. ಬಿ. ಎಸ್. ನಾಗಪ್ರಕಾಶ್ ನಿರ್ವಹಿಸಲಿದ್ದಾರೆ. ಅತಿಥಿಗಳಾಗಿ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಎಸ್. ಶಿವಮೂರ್ತಿ, ಜಿಲ್ಲಾ ಕ್ಯಾಬಿನೆಟ್ ಖಜಾಂಚಿ ಎಸ್. ವೆಂಕಟಾಚಲಂ, ವಲಯ-1ರ ವಲಯ ಅಧ್ಯಕ್ಷರಾದ ನೀಲಿ ಉಮೇಶ್, ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಎನ್. ಸಿ. ಬಸವರಾಜ್ ಆಗಮಿಸಲಿದ್ದಾರೆ. ಸಮಾರಂಭದ ಕಾರ್ಯನಿರ್ವಹಕರಾದ ಸಿ. ಅಜಯ್ ನಾರಾಯಣ, ಹೆಚ್. ವಿ. ಮಂಜುನಾಥ ಸ್ವಾಮಿ ಉಪಸ್ಥಿತರಿರುವರು ಎಂದು ಹೇಳಿದರು.

ನೂತನ ಪದಾಧಿಕಾರಿಗಳು:

ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಮಹಾಂತೇಶ್ ವಿ. ಒಣರೊಟ್ಟಿ, ಕಾರ್ಯದರ್ಶಿಯಾಗಿ ಕೆ. ಎಸ್. ಸಂತೋಷ್, ಖಜಾಂಚಿಯಾಗಿ ಬಿ. ರಮೇಶ್, ಸಹಕಾರ್ಯದರ್ಶಿಯಾಗಿ ಮುರುಗೇಶ್ ಬಣಕಾರ್ ಅವರು 2026-2027ನೇ ಸಾಲಿಗೆ ಆಯ್ಕೆಯಾಗಿದ್ದಾರೆ.

2ನೇ ಉಪಾಧ್ಯಕ್ಷರಾಗಿ ಕೋರಿ ಶಿವಕುಮಾರ್, ಮೂರನೇ ಉಪಾಧ್ಯಕ್ಷರಾಗಿ ಎಸ್. ಕೆ. ಮಲ್ಲಿಕಾರ್ಜುನ್, ಲಯನ್ ಟೀಮರ್ ಆಗಿ ಕೆ. ವಿ. ರಂಗನಾಥ್, ಲಯನ್ ಟೈಲ್ ಟ್ವಿಸ್ಟರ್ ಆಗಿ ಜೆ. ಎಸ್. ಬದರೀನಾಥ್, ಪಿಆರ್ ಒ ಆಗಿ ಭೀಮಾನಂದ ಶೆಟ್ಟಿ, ಛೇರ್ಮನ್ ಸದಸ್ಯತ್ವ ಸಮಿತಿಗೆ ಹೆಚ್. ಎಂ. ನಾಗರಾಜ್, ಛೇರ್ಮನ್ ಕ್ಲಬ್ ವಿಸ್ತರಣಾ ಸಮಿತಿಗೆ ಬೆಳ್ಳೂಡಿ ಶಿವಕುಮಾರ್, ಕ್ಲಬ್ ಮಾರ್ಕೆಟಿಂಗ್ ಗೆ ಎಸ್. ನಾಗರಾಜ್, ಛೇರ್ಮನ್ ಎಲ್ ಸಿಐಎಫ್ ಕೋ ಆರ್ಡಿನೇಟರ್ ಆಗಿ ಎ. ಎನ್. ಮದನ್ ಕುಮಾರ್, ಪ್ರಚಾರ ಸಮಿತಿ ಛೇರ್ಮನ್ ಆಗಿ ಕಾಸಲ್ ರತನ್ ಕುಮಾರ್, ಲಿಯೋ ಛೇರ್ಮನ್ ಆಗಿ ವಾಸುದೇವ ರಾಯ್ಕರ್, ನಿರ್ದೇಶಕರಾಗಿ ಕೆ. ಮುರುಗೇಶಪ್ಪ, ಮಾಳಗಿ ಷಣ್ಮುಖಪ್ಪ, ಹೆಚ್. ಸಿ. ಹನುಮಂತಪ್ಪ, ಎಂ. ಎನ್. ಮುರುಳೀಧರ್ ಗುಪ್ತ, ಬಿ. ಎಸ್. ಶಿವಾನಂದ್, ಕೆ. ಟಿ. ಮಹಾಲಿಂಗಪ್ಪ, ಹೆಚ್. ಕೆ. ಹೇಮಣ್ಣ, ಮಲ್ಲಿಕಾರ್ಜುನ್ ಗಾಂಧಿ, ಪಿ. ಹೆಚ್. ಗೋವಿಂದರಾಜ್, ಎ. ನಾಗರಾಜ್, ಪಿ. ಸಿ. ಜಗದೀಶ್ ಕುಮಾರ್, ಎನ್. ಎಲ್. ಆಂಜನೇಯ ಶೆಟ್ಟಿ, ಬಿ. ರವಿಕುಮಾರ್, ಹೆಚ್. ಎಸ್. ಮಲ್ಲಿಕಾರ್ಜುನ್, ಇ. ಎಂ. ಮಂಜುನಾಥ್, ಸಿ. ರುದ್ರೇಶ್, ಎಂ. ಬಸವರಾಜಪ್ಪ, ಆರ್. ಎಸ್. ರವೀಂದ್ರ, ಸಲಹೆಗಾರರಾಗಿ ಡಾ. ಬಿ. ಎಸ್. ನಾಗಪ್ರಕಾಶ್, ಆರ್. ಜಿ. ಶ್ರೀನಿವಾಸಮೂರ್ತಿ, ಎಸ್. ಕೆ. ಶಿವಕುಮಾರ್, ಎನ್. ವಿ. ಬಂಡಿವಾಡ್, ಎಸ್. ಜಿ. ಉಳುವಯ್ಯ, ಎಸ್. ಶಿವಮೂರ್ತಿ, ಟಿ. ಎಂ. ಪಂಚಾಕ್ಷರಯ್ಯ, ದಿನೇಶ್ ಕೆ. ಶೆಟ್ಟಿ, ದೇವರಮನಿ ನಾಗರಾಜ್, ಹೆಚ್. ವಿ. ಮಂಜುನಾಥ ಸ್ವಾಮಿ, ಎಸ್. ಓಂಕಾರಪ್ಪ, ಎನ್. ಆರ್. ನಾಗಭೂಷಣ ರಾವ್, ವೈ. ಬಿ. ಸತೀಶ್, ಎಸ್. ಸಿ. ಹುಲ್ಲತ್ತಿ, ಸದಸ್ಯರಾಗಿ ಜೆ. ಎಸ್. ವೀರೇಶ್, ಎಸ್. ಶಿವಕುಮಾರ್, ಪಿ. ಜಯಣ್ಣ, ಜೆ. ಎಸ್. ಅಂಬರೀಷ್, ಶಿವನಗೌಡ ಟಿ. ಪಾಟೀಲ್ ಅವರು ನಿಯೋಜನೆಗೊಂಡಿದ್ದಾರೆ ಎಂದು ತಿಳಿಸಿದರು. 

ಗೋಷ್ಠಿಯಲ್ಲಿ ನೂತನ ಕಾರ್ಯದರ್ಶಿ ಸಂತೋಷ್ ಕುಮಾರ್, ಪಿಆರ್ ಒ ಭೀಮಾನಂದ ಶೆಟ್ಟಿ, ಜೆ. ಎಸ್. ವೀರೇಶ್ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *