ದಾವಣಗೆರೆ: ದಾವಣಗೆರೆ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಚೆನ್ನಾಗಿ ಭಾಷಣ ಮಾಡುತ್ತಾರೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಾಯಿತ್ರಿ ಸಿದ್ದೇಶ್ವರ ಅವರು, ಸಂಸದರ ಕಾರ್ಯವೈಖರಿಯನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ.
ನಾನು ವಾಟ್ಸಪ್ ನಲ್ಲಿ ನೋಡಿದ್ದೇನೆ. ಸಂಸದರು ಮಾತನಾಡುವ ವಿಡಿಯೋಗಳನ್ನು ವೀಕ್ಷಿಸಿದ್ದೇನೆ ಎಂದು ಹೇಳಿದರು.
“ಸಂಸದರು ಬಹಳ ಚೆನ್ನಾಗಿ ಭಾಷಣ ಮಾಡುತ್ತಾರೆ, ಅದನ್ನು ನಾನು ವಾಟ್ಸಾಪ್ ವಿಡಿಯೋಗಳಲ್ಲಿ ನೋಡಿದ್ದೇನೆ. ಅವರು ಜಿಲ್ಲೆಯಲ್ಲಿ ಏನೆಲ್ಲಾ ‘ಒಳ್ಳೆಯ ಕೆಲಸ’ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಆ ಬಗ್ಗೆ ನೀವೇ (ಮಾಧ್ಯಮದವರು) ಹೇಳಬೇಕು,” ಎಂದು ಹೇಳುವ ಮೂಲಕ ಸಂಸದರ ವಿರುದ್ಧ ವ್ಯಂಗ್ಯದ ಬಾಣ ಬಿಟ್ಟಿದ್ದಾರೆ.





Leave a comment