SUDDIKSHANA KANNADA NEWS/ DAVANAGERE/ DATE:12-08-2023
ನವದೆಹಲಿ: ಲವ್ ಜಿಹಾದ್ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರವು ನಕಲಸಿ ಆಧಾರ ತೋರಿಸಿ ಲೈಂಗಿಕ ಸಂಪರ್ಕ ಹೊಂದಿದ್ದರೆ ಇನ್ನು ಮುಂದೆ ಜೈಲು ಊಟ ಗ್ಯಾರಂಟಿ. ಇದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕೊಟ್ಟಿರುವ ಎಚ್ಚರಿಕೆ.
ಕೇಂದ್ರ ಸರ್ಕಾರವು ಲವ್ ಜಿಹಾದ್ ಹೆಸರಿನಲ್ಲಿ ಮೋಸ ಮಾಡಿ, ದೇಶ ವಿರೋಧಿ ಚಟುವಟಿಕೆಗಳಲ್ಲಿ ತಳ್ಳುವವರಿಗೆ ತಕ್ಕ ಶಾಸ್ತಿ ಮಾಡಲು ಮುಂದಾಗಿದೆ. ಲವ್ ಜಿಹಾದ್ ಹೆಸರಿನಲ್ಲಿ ಯಾವುದೇ ವ್ಯಕ್ತಿಯು ತನ್ನ ಗುರುತನ್ನು ಮುಚ್ಚಿಟ್ಟು ನಕಲಿ ದಾಖಲೆ ತೋರಿಸಿ ಸುಳ್ಳು ಭರವಸೆಗಳನ್ನು ನೀಡಿ ಮದುವೆಯಾದರೆ ಅಥವಾ ಲೈಂಗಿಕ ಸಂಪರ್ಕ ಹೊಂದಿದರೆ ಅಪರಾಧ ಎಂದು ಘೋಷಿಸಿ ಸುಮಾರು ಹತ್ತು ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ಭಾರೀ ದಂಡ ವಿಧಿಸುವ ಕಾನೂನು ಜಾರಿಗೊಳಿಸಲಾಗುತ್ತಿದೆ.
ಕೇಂದ್ರ ಸರ್ಕಾರವು ಈ ಸಂಬಂಧ ನೂತನ ವಿಧೇಯಕ ಮಂಡನೆ ಮಾಡಿದ್ದು, ನಕಲಿ ಐಡೆಂಟಿಟಿ ತೋರಿಸಿ ಮದುವೆಯಾದರೆ, ಲೈಂಗಿಕ ಸಂಪರ್ಕ ಹೊಂದಿದ್ದರೆ ಜೈಲು ಶಿಕ್ಷೆ ಘೋಷಿಸಲಾಗಿದೆ.
ಈ ಸುದ್ದಿಯನ್ನೂ ಓದಿ:
Siddaramaiah: ಗುತ್ತಿಗೆದಾರರಿಗೆ ಅನ್ಯಾಯ ಆಗಲು ಬಿಡಲ್ಲ, ಉಪ್ಪು ತಿಂದವರು ನೀರು ಕುಡಿಯಲೇಬೇಕಲ್ವೇ?: ಸಿದ್ದರಾಮಯ್ಯ
ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಭಾರತೀಯ ದಂಡ ಸಂಹಿತೆ, ಭಾರತೀಯ ಅಪರಾಧ ಪ್ರಕ್ರಿಯ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು ಸಂಪೂರ್ಣ ತಿದ್ದುಪಡಿಗೊಳಿಸಿ ಹೊಸ ಹೆಸರುಗಳೊಂದಿಗೆ ಕಾಯ್ದೆಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಮೂರು ವಿಧೇಯಕಗಳನ್ನು ಸಂಸನ್ ನಲ್ಲಿ ಈಗಾಗಲೇ ಮಂಡನೆ ಮಾಡಿದ್ದಾರೆ.
ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದವರಿಗೆ ಜೀವಾವಧಿ, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದವರಿಗೆ ಗಲ್ಲು , ಹಾಗೂ ಲವ್ ಜಿಹಾದ್ ನಿಯಂತ್ರಣಕ್ಕೂ ಹಲವಾರು ಕಾನೂನು ತಂದಿದ್ದು ಈಗಿನ ಭಾರತೀಯ ದಂಡ ಸಂಹಿತೆಯಲ್ಲಿ ಈ ರೀತಿಯ ನಿಬಂಧನೆಗಳು ಇಲ್ಲದ ಕಾರಣ ಹೊಸ ಕಾನೂನನ್ನು ರೂಪಿಸಲಾಗಿದೆ.
ಮೂರು ವಿಧೇಯಕಗಳು:
ಅಮಿತ್ ಶಾ ಅವರು ಸಂಸತ್ತಿನಲ್ಲಿ ಐಪಿಸಿಯನ್ನು ಭಾರತೀಯ ನ್ಯಾಯ ಸಂಹಿತೆ-2023, ಸಿಆರ್ ಪಿಸಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ- 2023 ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಭಾರತೀಯ ಸಾಕ್ಷ್ಯಾ ವಿಧೇಯಕ- 2023 ಎಂದು ಬದಲಾಯಿಸಲಾಗುತ್ತಿದ್ದು ಸಮಿತಿ ಪರಿಶೀಲನೆ ಬಳಿಕ ಈ ವಿಧೇಯಕಗಳಿಗೆ ಸಂಸತ್ತಿನ ಎರಡು ಸದನಗಳಲ್ಲಿ ಅಂಗೀಕಾರ ದೊರೆತರೆ ಮೂರು ಕಾನೂನುಗಳು ಕೂಡ ಜಾರಿಯಾಗಲಿವೆ ಎಂದು ತಿಳಿಸಿದ್ದಾರೆ.