SUDDIKSHANA KANNADA NEWS/ DAVANAGERE/ DATE:23-07-2023
ದಾವಣಗೆರೆ: ದಾವಣಗೆರೆ ನಗರ ಉಪವಿಭಾಗದ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ 2023ರ ಜನವರಿ 1 ರಿಂದ ಇಲ್ಲಿಯವರೆಗೆ ದಾಖಲಾದ ಕಳ್ಳತನ ಪ್ರಕರಣಗಳಲ್ಲಿ ಸ್ವತ್ತು ವಶ (Recovery) ಪಡಿಸಿಕೊಳ್ಳಲಾಗಿದ್ದು, ಕಳೆದುಕೊಂಡವರಿಗೆ ಹಸ್ತಾಂತರಿಸಲಾಯಿತು.
ಈ ಸುದ್ದಿಯನ್ನೂ ಓದಿ:
BIG BREAKING STORY, EYE VIRAS: ಸಾವಿರಾರು ಮಕ್ಕಳಿಗೆ ತಗುಲಿದೆ ಕಣ್ಣು ಬೇನೆ ( ಐ ವೈರಸ್): ಪೋಷಕರಿಗೆ ಮಕ್ಕಳ ತಜ್ಞ ವೈದ್ಯರು ಹೇಳಿದ್ದೇನು…? ತಂದೆ ತಾಯಿ ಓದಲೇಬೇಕಾದ ಸ್ಟೋರಿ
ನಗರದ ಡಿ.ಎ.ಆರ್ ಕವಾಯಿತು ಮೈದಾನದಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ವಶ(Recovery)ಕ್ಕೆ ಪಡೆದುಕೊಂಡಿದ್ದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಸಂಬಂಧ ಪ್ರಾಪರ್ಟಿ ರಿಟರ್ನ್ ಪೆರೇಡ್ ನಡೆಸಲಾಯಿತು.
ಎಎಸ್ಪಿ ರಾಮಗೊಂಡ ಬಿ. ಬಸರಗಿ ಅವರು ಪ್ರಾಪರ್ಟಿ ರಿಟರ್ನ್ ಪೆರೇಡ್ನಲ್ಲಿ ದಾವಣಗೆರೆ ನಗರ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಡಿಸಿಆರ್ ಬಿ ಘಟಕದ ಡಿವೈಎಸ್ಪಿ ಬಿ. ಎಸ್. ಬಸವರಾಜ್, ಯಶವಂತ್, ಸಂಚಾರಿ ವೃತ್ತದ ಸಿಪಿಐ ಅನಿಲ್ ಆರ್.ಪಿ, ಬಡಾವಣೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ಧನಂಜಯ್, ಕೆಟಿಜೆ ನಗರದ ಪೊಲೀಸ್ ಇನ್ಸ್ ಪೆಕ್ಟರ್ ಶಶಿಧರ್, ಆಜಾದ್ ನಗರ ಪೊಲೀಸ್ ಠಾಣೆ ಇಮ್ರಾನ್ ಬೇಗ್, ಬಸವನಗರ ಪೊಲೀಸ್ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ಗುರುಬಸವರಾಜ್, ಪಿ.ಎಸ್.ಐಗಳಾದ ಅಂಜಿನಪ್ಪ, ಅಕ್ಬರ್ ಮುಲಾಲ, ಜಿ. ಎಂ. ರೇಣುಕಾ, ಪುಷ್ಪಲತಾ, ಪ್ರಮೀಳಮ್ಮ, ನಿಂಗಮ್ಮ, ಶಮೀಮ್ ಉನ್ನೀಸಾ ಹಾಗೂ ದಾವಣಗೆರೆ ನಗರ ಉಪವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ಅಪರಾಧ ವಿಭಾಗದ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಒಟ್ಟು 85 ಪ್ರಕರಣಗಳು ದಾಖಲಾಗಿದ್ದು, 73 ಬೈಕ್ ಗಳು, 2 ಕಾರು, ಒಂದು ಆಟೋ, 23,27,770 ರೂಪಾಯಿ ನಗದು, 8 ಮೊಬೈಲ್, 1 ಕುರಿ, 100 ಗ್ರಾಂ ಬಂಗಾರ, 598 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ 7 ಪ್ರಕರಗಳು ದಾಖಲಾಗಿದ್ದು, 4 ಬೈಕ್, 50 ಸಾವಿರ ರೂಪಾಯಿ ನಗದು, ಒಂದು ಮೊಬೈಲ್ ಫೋನ್, 276 ಗ್ರಾಂ ಬಂಗಾರದ ಆಭರಣಗಳು, ಬಸವನಗರ ಪೊಲೀಸ್ ಠಾಣೆ 12 ಪ್ರಕರಣಗಳು ದಾಖಲಾಗಿದ್ದು, 9 ಬೈಕ್ , 30 ಸಾವಿರ ರೂ. ಬೆಲೆ ಬಾಳುವ ಕುರಿ, ವಿದ್ಯಾನಗರ ಠಾಣೆಯಲ್ಲಿ 19 ಪ್ರಕರಣಗಳು ದಾಖಲಾಗಿದ್ದು, 12 ಬೈಕ್, ಒಂದು ಆಟೋ, 21,68 500 ರೂಪಾಯಿ ನಗದು, 5 ಮೊಬೈಲ್ ಫೋನ್, 566 ಗ್ರಾಂ ಬಂಗಾರದ ಆಭರಣಗಳು, 328 ಗ್ರಾಂ ಬೆಳ್ಳಿಯ ಆಭರಣಗಳು, ಆಜಾದ್ ನಗರದಲ್ಲಿ 2 ಪ್ರಕರಣಗಳು ದಾಖಲಾಗಿದ್ದು, 7 ಬೈಕ್, 86,030 ರೂಪಾಯಿ, ಗಾಂಧಿನಗರ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳು ದಾಖಲಾಗಿದ್ದು, 3 ಬೈಕ್, 5 ಸಾವಿರ ರೂಪಾಯಿ ನಗದು, 106 ಗ್ರಾಂ ಬಂಗಾರದ ಆಭರಣಗಳು, 225 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶ(Recovery)ಪಡಿಸಿಕೊಳ್ಳಲಾಗಿತ್ತು.
ಆರ್ ಎಂ ಸಿ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದ್ದು, 200 ರೂಪಾಯಿ ನಗದು, ಒಂದು ಮೊಬೈಲ್, ಬಡಾವಣೆ ಪೊಲೀಸ್ ಠಾಣೆಯಲ್ಲಿ 39 ಪ್ರಕರಣಗಳು ದಾಖಲಾಗಿದ್ದು, 37 ಬೈಕ್ ಗಳು, 2 ಕಾರು ವಶ, 18 ಸಾವಿರ ರೂಪಾಯಿ ನಗದು, 2 ಮೊಬೈಲ್ ಪತ್ತೆಯಾಗಿದ್ದು, ವಾರಸುದಾರರಿಗೆ ಎಎಸ್ಪಿ ನೇತೃತ್ವದಲ್ಲಿ ಹಸ್ತಾಂತರ ಮಾಡಲಾಯಿತು.
Police Recovery, Police Recovery Update, Police Recovery Updates News, Davanagere Police Recovery Suddi, Davanagere News, Davanagere Suddi