SUDDIKSHANA KANNADA NEWS/ DAVANAGERE/ DATE:22-11-2024
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಪತ್ನಿಯೊಂದಿಗೆ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಯಾವಾಗಲೂ ರಾಜಕೀಯ ಸಭೆ, ಸಮಾರಂಭ, ಕಾರ್ಯಕ್ರಮ, ಪಕ್ಷದ ಮೀಟಿಂಗ್, ಹೈಕಮಾಂಡ್ ಭೇಟಿ, ಕಾರ್ಯಕರ್ತರ ಭೇಟಿ ಸೇರಿದಂತೆ ಯಾವಾಗಲೂ ಬ್ಯುಸಿ ಇರುತ್ತಿದ್ದವರು.
ಬೈ ಎಲೆಕ್ಷನ್ ರಿಸಲ್ಟ್ ನಾಳೆ ಬರಲಿದೆ. ಚನ್ನಪಟ್ಟಣ, ಸಂಡೂರು, ಶಿಗ್ಗಾಂವ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಎಕ್ಸಿಟ್ ಪೋಲ್ ಪ್ರಕಾರ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತಲಾ ಒಂದೊಂದು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿದ್ದರೂ,
ಡಿ. ಕೆ. ಶಿವಕುಮಾರ್ ಮಾತ್ರ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.
ಮುರುಡೇಶ್ವರದ ಸಮೀಪ ಇರುವ ನೇತ್ರಾಣಿ ದ್ವೀಪಕ್ಕೆ ಪತ್ನಿ ಉಷಾ ಹಾಗೂ ಮೀನುಗಾರಿಕಾ ಸಚಿವ ಮಂಕಾಳ ಎಸ್.ವೈದ್ಯ ಅವರೊಂದಿಗೆ ಭೇಟಿ ನೀಡಿದರು.
ನಿಸರ್ಗಕ್ಕೆ ಹತ್ತಿರವಾಗಿರುವ ಈ ಐಲ್ಯಾಂಡ್ಗೆ ಪಾರಿವಾಳ ದ್ವೀಪ ಎನ್ನುವ ಹೆಸರೂ ಕೂಡ ಇದೆ. ಕರ್ನಾಟಕದಲ್ಲಿ ಸ್ಕೂಬಾ ಡೈವಿಂಗ್ಗೆ ಅತ್ಯುತ್ತಮ ಸ್ಥಳವಾದ ನೇತ್ರಾಣಿ ದ್ವೀಪವು ಪಾರಿವಾಳಗಳಿಗೆ ಆಶ್ರಯ ತಾಣವೂ ಹೌದು. ಪ್ರಶಾಂತವಾದ ಈ ದ್ವೀಪ ಮನಸ್ಸಿಗೆ ಆಹ್ಲಾದಕರ ಅನುಭವ ನೀಡಿತು ಎಂದು ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.