SUDDIKSHANA KANNADA NEWS/ DAVANAGERE/ DATE:08-08-2024
ದಾವಣಗೆರೆ: ಚಿತ್ರದುರ್ಗದ ತರಳಬಾಳು ಬೃಹನ್ಮಠಕ್ಕೆ ತನ್ನದೇ ಆದ ಇತಿಹಾಸ. ದೊಡ್ಡ ಪರಂಪರೆ ಇದೆ. ಮಠದ ಗುರುಗಳು ಹಾಗೂ ಭಕ್ತರ ನಡುವಿನ ಭಿನ್ನಾಭಿಪ್ರಾಯ ವಿಚಾರ ಮಾಧ್ಯಮದಲ್ಲಿ ನೋಡಿದ್ದೇನೆ. ಎಲ್ಲಾ ಮಠಗಳಲ್ಲಿಯೂ ಭಿನ್ನಾಭಿಪ್ರಾಯ ಇರುತ್ತದೆ. ಹಾಗಾಗಿ, ಈ ಸಮಸ್ಯೆ ಆದಷ್ಟು ಬೇಗ ಬಗೆಹರಿಯಲಿ, ಸುಖಾಂತ್ಯವಾಗಲಿ ಎಂಬುದಾಗಿ ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಕೂಡಲಸಂಗಮದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಾಧಿಪತಿ ಜಯಮೃತ್ಯುಂಜಯ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿರಿಗೆರೆ ಗುರುಗಳು ಸಮಸ್ಯೆ ಬಗೆಹರಿಸಿ ನಮ್ಮಂಥ ಯುವ ಸ್ವಾಮೀಜಿಗಳಿಗೆ ಮಾರ್ಗದರ್ಶಕರಾಗಲೀ, ಎಲ್ಲಾ ಸಮಸ್ಯೆಗಳು ಬಗೆಹರಿಯಲಿ ಎಂದು ಹೇಳಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕೆಂಬ ಬೇಡಿಕೆ ಈಡೇರಿಕೆಗೆ ಸಾಕಷ್ಟು ಹೋರಾಟ ಮಾಡಿಕೊಂಡೇ ಬರುತ್ತಿದ್ದೇವೆ. ಸೆ. 11ರಂದು ವಕೀಲರ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ ಪಂಚಮಸಾಲಿ ಸಮಾಜದ ಹೋರಾಟಕ್ಕೆ ಸ್ಪಂದಿಸಿಲ್ಲ. 20 ಶಾಸಕರಿದ್ದು, ಮಾತನಾಡಲು ಸ್ಪೀಕರ್ ಅವಕಾಶ ನೀಡಿಲ್ಲ. ಪಂಚಮಸಾಲಿ ಸಮಾಜದ ಹೋರಾಟ ಹತ್ತಿಕ್ಕಬೇಕು ಎಂಬ ಕಾರಣಕ್ಕೆ ಕೊನೆ ಗಳಿಗೆಯಲ್ಲಿ ಅವಕಾಶ ನೀಡಲಾಗಿದೆ. ಹೋರಾಟ ಹತ್ತಿಕ್ಕಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಕಾಣಿಸುತ್ತದೆ. ಪಂಚಮಸಾಲಿ ಮೀಸಲಾತಿ ಹೋರಾಟ ನಡೆಸಿದ ಪರಿಣಾಮ ಸಮಾಜದ 20 ಶಾಸಕರು ಗೆದ್ದು ಬಂದಿದ್ದಾರೆ ಎಂದು ತಿಳಿಸಿದರು.
ಸಿಎಂ ಮನೆ ಬಾಗಿಲಿಗೆ ಹೋಗಿ ಮೀಸಲಾತಿ ಕೇಳಿ. ಇಲ್ಲದಿದ್ರೆ ಹೋರಾಟಕ್ಕಿಳಿಯಿರಿ ಎಂದು ನಾನೇ ಸ್ವತಃ ಶಾಸಕರ ಮನೆಗೆ ಹೋಗಿ ಮನವಿ ಮಾಡಿದ್ದೇನೆ. ಪಕ್ಷಾತೀತ ಬೆಂಬಲ ನೀಡುವಂತೆ ಕೇಳಿಕೊಂಡಿದ್ದೇನೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಆಗಿನ ಸಿಎಂ ಬಿ. ಎಸ್. ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗಲೂ ಮಾತನಾಡಲು ಸಮಾಜದ ಶಾಸಕರಿಗೆ ಅನುಮತಿ ನೀಡಲಾಗಿತ್ತು. ಸ್ಪೀಕರ್ ಅನುಮತಿ ನೀಡಿದ್ದರು. ಆದ್ರೆ, ಈಗಿನ ಸ್ಪೀಕರ್ ಕೊನೆ ಕ್ಷಣದಲ್ಲಿ ನೀಡಿದರೂ ಪ್ರಯೋಜನ ಆಗಲಿಲ್ಲ ಎಂದು ಹೇಳಿದರು.
ಬಸವಣ್ಣನವರ ಋಣ ನಮ್ಮ ಮೇಲಿದೆ. ಬಸವಣ್ಣನವರ ತತ್ವಕ್ಕೆ ಅಪಚಾರ ಆಗಬಾರದು. ಈ ರೀತಿಯಲ್ಲಿ ನಾವೆಲ್ಲರೂ ನಡೆದುಕೊಳ್ಳಬೇಕು. ಭಾಷೆಯಿಂದ ಕನ್ನಡಿಗರು. ರಾಷ್ಟ್ಕೀಯತೆಯಿಂದ ಭಾರತೀಯರು. ಸಮಾಜದಿಂದ ಲಿಂಗಾಯತರು.
ಬಸವಣ್ಣರ ಮೂಲತತ್ವಕ್ಕೆ ಕೊಡಲಿ ಪೆಟ್ಟು ಬೀಳಬಾರದು. ಈ ರೀತಿ ಯಾರೇ ಆದರೂ ವರ್ತಿಸಬೇಕು ಎಂದು ಸ್ವಾಮೀಜಿ ತಿಳಿಸಿದರು.
ತಾತ್ವಿಕ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳೋಣ. ನನ್ನ ಘೋಷಣೆ ನಾವು ಭಾಷೆಯಿಂದ ಕನ್ನಡಿಗರು, ರಾಷ್ಟ್ರೀಯತೆಯಲ್ಲಿ ಭಾರತೀಯರು, ಧಾರ್ಮಿಕವಾಗಿ ಲಿಂಗಾಯತರು. ಸಮಾಜದ ವಿಚಾರ ಬಂದಾಗ ಪಂಚಮಸಾಲಿಗಳು, ನಾವು ರೈತರು. ಇದೇ
ನನ್ನ ಘೋಷವಾಕ್ಯ ಎಂದು ಹೇಳಿದರು.