SUDDIKSHANA KANNADA NEWS/ DAVANAGERE/ DATE:07-03-2024
ದಾವಣಗೆರೆ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 50 ನೇ ವರ್ಷದ ಸುವರ್ಣ ಮಹೋತ್ಸವ ಆಚರಣೆ ಹಾಗೂ ಡ್ರಗ್ಸ್, ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಆಶಯದೊಂದಿಗೆ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಮಾರ್ಚ್ 10ಕ್ಕೆ ನಗರದಲ್ಲಿ 10ಕೆ ಮೆರಾಥಾನ್ ಹಾಗೂ 5ಕೆ ಮ್ಯಾರಾಥಾನ್ ಪೊಲೀಸರೊಂದಿಗೆ ಓಟ ಸ್ಪರ್ಧೆ ಆಯೋಜಿಸಲಾಗಿದೆ.
ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಈ ಜಾಥಾ ಜರುಗಲಿದೆ. ಈ ಮ್ಯಾರಾಥಾನ್ ಓಟದ ಸ್ಪರ್ಧೆಯಲ್ಲಿ ಪೊಲೀಸರೊಂದಿಗೆ ಜಿಲ್ಲೆಯ ನಾಗರೀಕರು ಸಹ ಸ್ವ-ಹಿತಾಸಕ್ತಿಯಿಂದ ಪಾಲ್ಗೊಳಲು
ಅವಕಾಶ ಕಲ್ಪಿಸಲಾಗಿದೆ.
ಈ ಮ್ಯಾರಾಥಾನ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವವರು ಇಲ್ಲಿ ನೀಡಲಾಗಿರುವ ಕ್ಯೂಆರ್ ಕೋಡ್ ಲಿಂಕ್ನಲ್ಲಿ ಮಾರ್ಚ್ 9ರಂದು ಸಂಜೆ 4 ಗಂಟೆಯೊಳಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ.
ನಗರದಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮಾ. 10ಕ್ಕೆ ಬೆಳಗ್ಗೆ 6 ಗಂಟೆಗೆ 10ಕೆ ಮ್ಯಾರಾಥಾನ್ ಹಾಗೂ 5ಕೆ ಮ್ಯಾರಾಥಾನ್ ಪೊಲೀಸರೊಂದಿಗೆ ಓಟ ಸ್ಪರ್ಧೆಗೆ ಚಾಲನೆ ನೀಡಲಾಗುವುದು.
ವಿಜೇತರಿಗೆ ಬಹುಮಾನ:
10,000 ಮೀಟರ್ ಮ್ಯಾರಾಥಾನ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮೊದಲ 3 ಸ್ಪರ್ಧೆಗಳಿಗೆ ನಗದು ಬಹುಮಾನ ನೀಡಲಾಗುತ್ತದೆ. ಅಂದರೆ- ಮೊದಲ ಬಹುಮಾನ 10,000 ರೂ., ಎರಡನೇ ಬಹುಮಾನ ರೂ. 5000, 3000 ರೂ. ಮೂರನೇ ಬಹುಮಾನ ನೀಡಲಾಗುತ್ತದೆ.
5000ಮೀ ಮೆರಾಥಾನ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮೊದಲ 3 ಸ್ಪರ್ದೆಗಳಿಗೆ ನಗದು ಬಹುಮಾನ ನೀಡಲಾಗುತ್ತದೆ. ಅಂದರೆ- ಮೊದಲ ಬಹುಮಾನ ರೂ. 5000, ಎರಡನೇ ಬಹುಮಾನ ರೂ. 3000, ಮೂರನೇ ಬಹುಮಾನ ರೂ. 2000 ರೂ ಕೊಡಲಾಗುತ್ತದೆ.
ಮ್ಯಾರಾಥಾನ್ ಓಟದಲ್ಲಿ ಸ್ಪರ್ಧಿಸುವವರ ಗಮನಕ್ಕೆ:
10ಕೆ ಮ್ಯಾರಥಾನ್ ಹಾಗೂ 5ಕೆ ಮ್ಯಾರಥಾನ್ ಪೊಲೀಸರೊಂದಿಗೆ ಓಟ ಸ್ಪರ್ಧೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ 18 ವರ್ಷ ಮೇಲ್ಪಟ್ಟ ವಯಸ್ಕರಾಗಿರಬೇಕು, ಯಾವುದೇ ಆರೋಗ್ಯದ ಸಮಸ್ಯೆಗಳು ಹೊಂದಿರಬಾರದು.
ಮ್ಯಾರಾಥಾನ್ ಓಟದ ಮಾರ್ಗ:
10ಕೆ ಮೆರಾಥಾನ್ ಓಟದ ಮಾರ್ಗ: ಜಿಲ್ಲಾ ಕ್ರೀಡಾಂಗಣದಿಂದ – ಡೆಂಟಲ್ ಕಾಲೇಜ್ ರಸ್ತೆ – ಗುಂಡಿ ವೃತ್ತ – ಶಾಮನೂರು ರಸ್ತೆ – ಲಕ್ಷ್ಮೀ್ ಫ್ಲೋರ್ ಮಿಲ್ ವೃತ್ತ ಮೂಲಕ ಬಾಪೂಜಿ ಬ್ಯಾಂಕ್ ಸಮುದಾಯ ವೃತ್ತ – ಶಾರದಾಂಭ ವೃತ್ತ ಮೂಲಕ ಸಾಗಿ ಕರ್ನಲ್ ರವೀಂದ್ರನಾಥ್ (ಕ್ಲಾಕ್ ಟವರ್ ವೃತ್ತ) ವೃತ್ತದ ಮೂಲಕ ನೇರವಾಗಿ ಸಂಗೋಳ್ಳಿ ರಾಯಣ್ಣ ವೃತ್ತ ತಲುಪಿ ಅಲ್ಲಿಂದ ಬಲ ತಿರುವು ಪಡೆದು ನೇರವಾಗಿ ಹಳೆ ಪಿಬಿ ರಸ್ತೆಯಲ್ಲಿ ಅರುಣ ವೃತ್ತ(ಚೆನ್ನಮ್ಮ ವೃತ್ತ) ಮೂಲಕ ಸಾಗಿ ಎಂ.ಜಿ ವೃತ್ತದಿಂದ ಬಲ ತಿರುವು ಪಡೆದುಕೊಂಡು ಜಯದೇವ ವೃತ್ತ ಮೂಲಕ ಸಾಗಿ ವಿದ್ಯಾರ್ಥಿ ಭವನ ಜಂಕ್ಷನ್ ಮೂಲಕ ಸಾಗಿ – ಕೆಟಿಜೆ ನಗರ 16 ನೇ ಕ್ರಾಸ್ ಮುಂಭಾಗ ಬಾಪೂಜಿ ಆಸ್ಪತ್ರೆ ರಸ್ತೆ ಬಳಿ ಬಲ ತಿರುವ ಪಡೆದುಕೊಂಡು ಜಿಲ್ಲಾ ಕ್ರೀಡಾಂಗಣದ ಮುಖ್ಯದ್ವಾರದ ಒಳಗಡೆ ಬರುವುದು.
5ಕೆ ಮ್ಯಾರಾಥಾನ್ ಓಟದ ಮಾರ್ಗ: ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗಿ ಹದಡಿ ರಸ್ತೆಯ ಮುಖ್ಯದ್ವಾರದ ಮೂಲಕ ಸಾಗಿ ಡಿ.ಆರ್.ಆರ್ ಕಾಲೇಜ್ ವೃತ್ತ ಮೂಲಕ ಸಾಗಿ ಶಾಮನೂರು ಪಾರ್ವತಮ್ಮ ಕಲ್ಯಾಣ ಮಂಟಪದ ಬಳಿ ಬಲಗಡೆ ತಿರುವು ಪಡೆದುಕೊಂಡು ನೇರವಾಗಿ ಸಾಗಿ ಕಾಫಿಡೇ ವೃತ್ತ ಮೂಲಕ ನೂತನ್ ಕಾಲೇಜ್ ರಸ್ತೆ ಮಾರ್ಗವಾಗಿ ನೂತನ್ ಕಾಲೇಜ್ ಬಳಿ ಮುಂಭಾಗ ಬಲ ತಿರುವು ಪಡೆದು ಆಂಜನೇಯ ಬಡಾವಣೆಯ 15 ನೇ ಕ್ರಾಸ್ ಎಡ ತಿರುವು ಪಡೆದು ನೇರವಾಗಿ ಸಂಜೀವಿನಿ ನರ್ಸಿಂಗ್ ಕಾಲೇಜ್ ಬಳಿ ಬಲ ತಿರುವು ಪಡೆದು ಆಂಜನೇಯ ದೇವಸ್ಥಾನ ಮಾರ್ಗವಾಗಿ ಸಾಗಿ ಮೆಡಿಕಲ್ ಬಾಯ್ಸ್ ಹಾಸ್ಟೆಲ್ ರಸ್ತೆ ಮೂಲಕ ಸಾಗಿ ಡೆಂಟಲ್ ಕಾಲೇಜ್ ರಸ್ತೆ ತಲುಪುವುದು ಅಲ್ಲಿಂದ ಎಡ ತಿರುವು ಪಡೆದುಕೊಂಡು ಯುಬಿಡಿಟಿ ಕಾಲೇಜ್ ಬಳಿ ಬಲ ತಿರುವು ಪಡೆದುಕೊಂಡು ಎಆರ್ಜಿ ಕಾಲೇಜ್ ರಸ್ತೆ ಮಾರ್ಗವಾಗಿ ಸಾಗಿ ನೇರವಾಗಿ ಹದಡಿ ರಸ್ತೆ ತಲುಪುವುದು ನಂತರ ಎಡ ತಿರುವು ಪಡೆದುಕೊಂಡು ಜಿಲ್ಲಾ ಕ್ರೀಡಾಂಗಣದ ಹದಡಿ ರಸ್ತೆಯ ಭಾಗದ ಮುಖ್ಯದ್ವಾರದ ಒಳಗಡೆ ಬರುವುದು.