ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಹಾರ ಭದ್ರತೆ ಮತ್ತು ಔಷಧ ನಿಯಂತ್ರಣ ಇಲಾಖೆಯು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಪ್ರಸಿದ್ಧ ಕ್ವಿಕ್ ಕಾಮರ್ಸ್ ಸಂಸ್ಥೆಯಾದ ‘ಜೆಪ್ಟೋ’ (Zepto) ವೇರ್‌ಹೌಸ್ ಮೇಲೆ ದಾಳಿ ನಡೆಸಿ ಅದನ್ನು ಸೀಲ್ ಮಾಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿರುವ ಜೆಪ್ಟೋ ದಾಸ್ತಾನು ಮಳಿಗೆಯ ಮೇಲೆ ಆಹಾರ ಸುರಕ್ಷತಾ ವಿಭಾಗದ ಅಧಿಕಾರಿಗಳು ದಿಢೀರ್ ತಪಾಸಣೆ ನಡೆಸಿದರು. ಈ ವೇಳೆ ಮಳಿಗೆಯೊಳಗೆ ಕಸದ ರಾಶಿ, ಕೊಳೆತ ವಸ್ತುಗಳು, ಹರಿದುಬಿದ್ದ ಪ್ಲಾಸ್ಟಿಕ್ ಕವರ್‌ಗಳು ಹಾಗೂ ಅತಿಯಾದ ಅಸ್ವಚ್ಛ ವಾತಾವರಣ ಕಂಡುಬಂದಿದೆ.
ಪ್ರಮುಖ ನಿಯಮ ಉಲ್ಲಂಘನೆಗಳು:
ಅಸ್ವಚ್ಛ ವಾತಾವರಣ: ಆಹಾರ ಧಾನ್ಯ ಹಾಗೂ ಸಿದ್ಧ ಉಡುಪುಗಳನ್ನು ತೀರಾ ಅಪೈಕರ್ ಹಾಗೂ ಅಸ್ವಚ್ಛ ಜಾಗದಲ್ಲಿ ಸಂಗ್ರಹಿಸಲಾಗಿತ್ತು.
ತಪ್ಪು ಲೇಬಲಿಂಗ್ ಮತ್ತು ಮಿಸ್ ಬ್ರ್ಯಾಂಡಿಂಗ್: ಆಹಾರ ಪದಾರ್ಥಗಳ ಮೇಲೆ ಸರಿಯಾದ ಲೇಬಲ್ ಇಲ್ಲದಿರುವುದು ಹಾಗೂ ನಿಯಮಬಾಹಿರವಾಗಿ ಮಿಸ್ ಬ್ರ್ಯಾಂಡಿಂಗ್ ಮಾಡುವುದು ಬೆಳಕಿಗೆ ಬಂದಿದೆ.
ಎಫ್‌ಎಸ್‌ಎಸ್‌ಎಐ (FSSAI) ನಿಯಮಗಳ ಉಲ್ಲಂಘನೆ: ಕೇಂದ್ರ ಆಹಾರ ಸುರಕ್ಷತಾ ಕಾಯ್ದೆಯ ಹಲವು ಪ್ರಮುಖ ಮಾರ್ಗದರ್ಶಿ ಸೂತ್ರಗಳನ್ನು ಗಾಳಿಗೆ ತೂರಲಾಗಿದೆ.
ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಸದರಿ ವೇರ್‌ಹೌಸ್ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೀಲ್ ಮಾಡಿದ್ದು, ಸಂಸ್ಥೆಗೆ ನೋಟಿಸ್ ನೀಡಿದೆ. ಅಲ್ಲದೆ, ಕಾನೂನುಬಾಹಿರವಾಗಿ ಆಹಾರ ನಿರ್ವಹಣೆ ಮಾಡುತ್ತಿರುವ ಈ ಮಳಿಗೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಶಿಫಾರಸು ಮಾಡಿದೆ.
ಇತ್ತೀಚೆಗಷ್ಟೇ ಮುಂಬೈನಲ್ಲಿ ಜೆಪ್ಟೋದ ಪ್ರತಿಸ್ಪರ್ಧಿ ‘ಬ್ಲಿಂಕಿಟ್’ (Blinkit) ಮಳಿಗೆ ಮೇಲೆಯೂ ಎಫ್‌ಡಿಎ ದಾಳಿ ನಡೆಸಿ, ಜಿರಳೆಗಳ ಹಾವಳಿ ಹಾಗೂ ಅಸ್ವಚ್ಛತೆಯ ಕಾರಣಕ್ಕೆ ಅದರ ಲೈಸೆನ್ಸ್ ಅಮಾನತುಗೊಳಿಸಿತ್ತು. ಬೆಂಗಳೂರಿನಲ್ಲೂ ಇಂದಿರಾ ಕ್ಯಾಂಟೀನ್, ಹೋಟೆಲ್ ಹಾಗೂ ಪಬ್‌ಗಳ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು, ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುವ ಯಾವುದೇ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ.
- Bengaluru Food Safety inspection
- FSSAI rules violation
- Hoskote Zepto dark store
- Quick commerce news Karnataka
- Unhygienic food handling
- Zepto Bengaluru raid
- Zepto news Bengaluru
- Zepto warehouse sealed
- ಅಸ್ವಚ್ಛ ಆಹಾರ ಸಂಗ್ರಹಣೆ
- ಆಹಾರ ಭದ್ರತಾ ತಪಾಸಣೆ
- ಎಫ್‌ಎಸ್‌ಎಸ್‌ಎಐ ನಿಯಮ ಉಲ್ಲಂಘನೆ
- ಜೆಪ್ಟೋ ವೇರ್‌ಹೌಸ್ ಸೀಲ್
- ಬೆಂಗಳೂರು ಆಹಾರ ಇಲಾಖೆ ದಾಳಿ
- ಬೆಂಗಳೂರು ಕ್ರೈಮ್ ನ್ಯೂಸ್
- ಹೊಸಕೋಟೆ ಜೆಪ್ಟೋ ಮಳಿಗೆ





Leave a comment