ಬೆಂಗಳೂರು: ಈ ದೇಶದಲ್ಲಿ ಹುಟ್ಟು, ಇಲ್ಲಿ ವ್ಯಾಸಂಗ ಮಾಡಿರುವ ಯುವ ಪೀಳಿಗೆ ಹಕ್ಕು ಕಸಿಯುತ್ತಿದ್ದಾರೆ. ಚುನಾವಣೆ ಗೆದ್ದ ನಂತರ ದೇಶದಲ್ಲಿ ಮೋದಿ ಅವರ ಬಿರುಗಾಳಿ, ಅಮಿತ್ ಶಾ ಚಾಣಕ್ಯತನ ಇದೆ ಎಂದು ಹೇಳುತ್ತಿದ್ದರು. ಇಲ್ಲಿ ಯಾವ ಬಿರುಗಾಳಿಯೂ ಇಲ್ಲ. ಚಾಣಕ್ಯತನವೂ ಇಲ್ಲ. ಚುನಾವಣಾ ಆಯೋಗದ ಮೂಲಕ ಮತಗಳ್ಳತನ ಮಾಡುವುದು ಚಾಣಕ್ಯತನವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಈ ಚುನಾವಣಾ ಆಯೋಗದ ಕುತಂತ್ರ, ಅವ್ಯವಹಾರಗಳಿಗೆ ಕಡಿವಾಣ ಹಾಕಲು ನ್ಯಾಯಾಂಗದ ಪಾತ್ರ ವಹಿಸಬೇಕು. ಇಲ್ಲವಾದರೆ ದೇಶದ ಪ್ರಜಾಪ್ರಭುತ್ವ, ಸಂವಿಧಾನ ಬುಡಮೇಲು ಮಾಡುತ್ತಾರೆ. ಹೀಗಾಗಿ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಬಾರದು ಎಂದು ಒತ್ತಾಯಿಸಿದರು.
ಚುನಾವಣಾ ಆಯೋಗದಲ್ಲಿ ಮೂವರು ಆಯುಕ್ತರು ಇರುತ್ತಾರೆ. ಇಲ್ಲಿ ನಿರ್ಧಾರ ಕೈಗೊಳ್ಳುವಾಗ ಬಹುಮತ ಇರುವ ತೀರ್ಮಾನ ಕೈಗೊಳ್ಳಬೇಕು. ಆದರೆ ಕಳೆದ 10 ತಿಂಗಳಲ್ಲಿ 14 ಬಾರಿ ಇಬ್ಬರು ಆಯುಕ್ತರು ಭಿನ್ನಮತ ವ್ಯಕ್ತಪಡಿಸಿದ್ದರು ಅಜ್ಞಾನೇಶ್ ಕುಮಾರ್ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು ಫಾರಂ 6ಕ್ಕೆ ತಿದ್ದುಪಡಿ ತರಲಾಗಿದೆ. ನೈಜ್ಯ ಮತದಾರರ ಕಸಿಯುವ ಕೆಲಸ ಮೋದಿ ಹಾಗೂ ಶಾ ಮಾಡುತ್ತಿದ್ದಾರೆ. ಜ್ಞಾನೇಶ್ ಕುಮಾರ್ ಅವರು ಬೇರೆ ಆಯುಕ್ತರ ಭಿನ್ನಮತಕ್ಕೆ ಮನ್ನಣೆ ನೀಡುತ್ತಿಲ್ಲ ಎಂದು ಕಿಡಿಕಾರಿದರು.
ಜ್ಞಾನೇಶ್ ಕುಮಾರ್ ಜತೆಗೆ ಇನ್ನಿಬ್ಬರು ಬೇರೆ ಗೌಪ್ಯ ಆಯುಕ್ತರು ಎಂದರೆ ಅಮಿತ್ ಶಾ ಹಾಗೂ ನರೇಂದ್ರ ಮೋದಿ ಅವರು. ಇವರ ಮಾತು ಕೇಳಿಕೊಂಡು ದೇಶದಲ್ಲಿ 13 ಕೋಟಿ ಮತದಾರರ ಹೆಸರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ. ಈ ದೇಶ ಸ್ವತಂತ್ರವಾಗಿರಬೇಕು ಎಂದರೆ ಸುಸ್ಥಿರ ಪ್ರಜಾಪ್ರಭುತ್ವ ಇರಬೇಕು. ಅದಕ್ಕೆ ಚುನಾವಣಾ ಆಯೋಗ ರಚಿಸಲಾಯಿತು. 75 ವರ್ಷಗಳ ಕಾಲ ಚುನಾವಣಆಧಿಕಾರಿಗಳು ಯಾವುದೇ ಅಕ್ರಮ ಮಾಡಿರಲಿಲ್ಲ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಆಯೋಗದ ಮೂಲಕ ಚುನಾವಣೆಯಲ್ಲಿ ಅಕ್ರಮ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ನಮ್ಮ ಪೂರ್ವಜರು ಕೊಟ್ಟಿರುವ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಿಕೊಳ್ಳಲು ಹೋರಾಟ ಮಾಡಬೇಕು ಎಂದರು.
2023ರಲ್ಲಿ ಕಾನೂನಿಗೆ ತಿದ್ದುಪಡಿ ತಂದು ಚುನಾವಣಾ ಆಯೋಗದ ಆಯುಕ್ತರ ಆಯ್ಕೆಯಲ್ಲಿ ಮುಖ್ಯನ್ಯಾಯಾಧೀಶರನ್ನು ಕೈಬಿಟ್ಟು ಕೇಂದ್ರ ಮಂತ್ರಿಯನ್ನು ಕೂರಿಸಿದ್ದಾರೆ. ಇದರಿಂದ ನಮಗೆ ನ್ಯಾಯ ಸಿಗುವುದಿಲ್ಲ. ನಮ್ಮ ಹೋರಾಟ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಮುಂದುವರಿಯಲಿದ್ದು, ಸೋಮವಾರದಿಂದ ಜಿಲ್ಲಾ ಮಟ್ಟದಲ್ಲಿ ಈ ಹೋರಾಟ ಮುಂದುವರಿಯಬೇಕು ಎಂದು ತಿಳಿಸಿದರು.
- Amit Shah
- BK Hariprasad
- Democracy
- Election Commission
- Form 6 Amendment
- Gyanesh Kumar
- Indian Election Commission Controversy
- Karnataka Congress Protest
- KPCC
- Narendra Modi
- Voter List Deletion
- Voter Theft Allegations
- ಅಮಿತ್ ಶಾ
- ಕರ್ನಾಟಕ ರಾಜಕೀಯ
- ಕಾಂಗ್ರೆಸ್ ಪ್ರತಿಭಟನೆ
- ಚುನಾವಣಾ ಆಯೋಗ
- ಜ್ಞಾನೇಶ್ ಕುಮಾರ್
- ನರೇಂದ್ರ ಮೋದಿ
- ಪ್ರಜಾಪ್ರಭುತ್ವ
- ಫಾರಂ 6 ತಿದ್ದುಪಡಿ
- ಬಿ. ಕೆ. ಹರಿಪ್ರಸಾದ್
- ಮತಗಳ್ಳತನ
- ಮತದಾರರ ಪಟ್ಟಿ ಅಕ್ರಮ





Leave a comment