Home ಉದ್ಯೋಗ ವಾರ್ತೆ ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: 1,100 ವೆಲ್ತ್ ಎಕ್ಸಿಕ್ಯುಟಿವ್ ಹಾಗೂ ಕ್ರೆಡಿಟ್ ಅನಲಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಕ್ಟೋಬರ್ 1 ಕೊನೆ ದಿನ!
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: 1,100 ವೆಲ್ತ್ ಎಕ್ಸಿಕ್ಯುಟಿವ್ ಹಾಗೂ ಕ್ರೆಡಿಟ್ ಅನಲಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಕ್ಟೋಬರ್ 1 ಕೊನೆ ದಿನ!

Share
ಬ್ಯಾಂಕ್
Share

ಬೆಂಗಳೂರು / ಮುಂಬೈ: ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿಗೆ ಹೊರಡಿಸಲಾಗಿದ್ದ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿದೆ.

ಒಟ್ಟು 1,100 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಈ ಹಿಂದೆ ಇದ್ದ ಸೆಪ್ಟೆಂಬರ್ 24ರ ಗಡುವನ್ನು ಅಕ್ಟೋಬರ್ 01, 2026ರವರೆಗೆ ವಿಸ್ತರಿಸಲಾಗಿದೆ.

ಹುದ್ದೆಗಳ ವಿವರ ಹಾಗೂ ಸಂಖ್ಯೆ:

ವೆಲ್ತ್ ಎಕ್ಸಿಕ್ಯುಟಿವ್ (Wealth Executive – JMG/S-I): 1,000 ಹುದ್ದೆಗಳು

ಕ್ರೆಡಿಟ್ ಅನಲಿಸ್ಟ್ (Credit Analyst – MMG/S-II): 100 ಹುದ್ದೆಗಳು

ಅರ್ಹತೆ ಮತ್ತು ವಯೋಮಿತಿ (01.09.2026ಕ್ಕೆ ಅನ್ವಯ):

ವೆಲ್ತ್ ಎಕ್ಸಿಕ್ಯುಟಿವ್:

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಹಾಗೂ IC 38 / NISM Series ನಂತಹ ಮಾನ್ಯತೆ ಪಡೆದ ಪ್ರಮಾಣಪತ್ರ.

ಅನುಭವ: ವೆಲ್ತ್ ಪ್ರಾಡಕ್ಟ್ ಮಾರಾಟ ವಿಭಾಗದಲ್ಲಿ ಕನಿಷ್ಠ 2 ವರ್ಷಗಳ ಅನುಭವ.

ವಯೋಮಿತಿ: 22 ರಿಂದ 32 ವರ್ಷ.

ಕ್ರೆಡಿಟ್ ಅನಲಿಸ್ಟ್:

ವಿದ್ಯಾರ್ಹತೆ: ಪದವಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ (CA) ಉತ್ತೀರ್ಣತೆ.

ಅನುಭವ: ವಾಣಿಜ್ಯ ಬ್ಯಾಂಕ್‌ಗಳಲ್ಲಿ ಕನಿಷ್ಠ 1 ವರ್ಷದ ಸೇವಾ ಅನುಭವ.

ವಯೋಮಿತಿ: 21 ರಿಂದ 33 ವರ್ಷ.

(ನಿಯಮಗಳ ಪ್ರಕಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರಲಿದೆ).

ವೇತನ ಶ್ರೇಣಿ:

ವೆಲ್ತ್ ಎಕ್ಸಿಕ್ಯುಟಿವ್: ₹48,480 – ₹85,920/-

ಕ್ರೆಡಿಟ್ ಅನಲಿಸ್ಟ್: ₹64,820 – ₹93,960/-

ಅರ್ಜಿ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆ:

ಸಾಮಾನ್ಯ, ಒಬಿಸಿ ಮತ್ತು EWS ಅಭ್ಯರ್ಥಿಗಳಿಗೆ: ₹850/- (+ GST)

ಎಸ್‌ಸಿ, ಎಸ್‌ಟಿ, PwBD, ಮಹಿಳೆಯರು ಮತ್ತು ಮಾಜಿ ಸೈನಿಕರಿಗೆ: ₹175/- (+ GST)

ಆಯ್ಕೆ ವಿಧಾನ: ಅರ್ಜಿಗಳ ಪರಿಶೀಲನೆ, ಆನ್‌ಲೈನ್ ಪರೀಕ್ಷೆ (ನಡೆಸಿದಲ್ಲಿ), ಸೈಕೋಮೆಟ್ರಿಕ್ ಟೆಸ್ಟ್ ಹಾಗೂ ವೈಯಕ್ತಿಕ ಸಂದರ್ಶನದ (PI) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅಧಿಕೃತ ವೆಬ್ ಸೈಟ್: https://ibpsreg.ibps.in/bonwejul26/

Share

Leave a comment

Leave a Reply

Your email address will not be published. Required fields are marked *