ನವದೆಹಲಿ/ಗುರುಗ್ರಾಮ: ಮದುವೆಯಾಗಲು ಕೇವಲ ಒಂದು ತಿಂಗಳು ಬಾಕಿ ಇರುವಾಗಲೇ ದೆಹಲಿಯ 31 ವರ್ಷದ ಎಚ್‌ಆರ್ ಮ್ಯಾನೇಜರ್ ಯುವರಾಜ್ ಸಿಂಗ್ ಮಂಚಂದಾ ಅವರ ಕೊಲೆಯಾಗಿದ್ದು, ಗುರುಗ್ರಾಮದ ಚರಂಡಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಹಣಕಾಸಿನ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದ್ದು, ದೆಹಲಿ ಪೊಲೀಸರು ಯುವರಾಜ್ ಅವರ ಮಾಜಿ ಸಹೋದ್ಯೋಗಿ ಅನ್ಯಾ ವಾಟ್ಸ್ ಮತ್ತು ಆಕೆಯ ಪತಿ ಸನ್ಯಮ್ ಸಚ್‌ದೇವ ಅವರನ್ನು ಉತ್ತರಾಖಂಡದಲ್ಲಿ ಬಂಧಿಸಿದ್ದಾರೆ.
ಘಟನೆಯ ವಿವರ:
ಸೆಪ್ಟೆಂಬರ್ 6 ರಂದು ಯುವರಾಜ್ ಅವರು ತಮ್ಮ ಸಹೋದರಿಯರೊಂದಿಗೆ ಲಜಪತ್ ನಗರದ ಮಾರುಕಟ್ಟೆಗೆ ಶೇರ್ವಾನಿ ಖರೀದಿಸಲು ತೆರಳಿದ್ದರು. ಮಧ್ಯಾಹ್ನ ಉಪಹಾರದ ನಂತರ, ಗುರುಗ್ರಾಮದಲ್ಲಿ ಮಾಜಿ ಸಹೋದ್ಯೋಗಿ ಅನ್ಯಾ ವಾಟ್ಸ್ ಅವರನ್ನು ತುರ್ತಾಗಿ ಭೇಟಿಯಾಗಬೇಕೆಂದು ತಿಳಿಸಿ ಕಾರಿನಲ್ಲಿ ತೆರಳಿದ್ದರು. ರಾತ್ರಿ 7 ಗಂಟೆಗೆ ಕುಟುಂಬಸ್ಥರೊಂದಿಗೆ ಫೋನ್‌ನಲ್ಲಿ ಮಾತನಾಡಿ, 10 ಗಂಟೆಗೆ ಮನೆಗೆ ಮರಳುವುದಾಗಿ ತಿಳಿಸಿದ್ದರು. ಆದರೆ, ಅದಾದ ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಸೆಪ್ಟೆಂಬರ್ 11 ರಂದು ಕುಟುಂಬಸ್ಥರು ಲಜಪತ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಸಿವಿವಿ ಕ್ಯಾಮೆರಾ, ಕಾಲ್ ರೆಕಾರ್ಡ್ ಹಾಗೂ ತಾಂತ್ರಿಕ ವಿವರಗಳನ್ನು ಪರಿಶೀಲಿಸಿದಾಗ, ಯುವರಾಜ್ ಅವರ ಕೊನೆಯ ಕರೆ ಅನ್ಯಾ ವಾಟ್ಸ್ ಅವರಿಗೆ ಹೋಗಿರುವುದು ತಿಳಿದುಬಂದಿದೆ.
7 ಗಂಟೆಗಳ ಕಾಲ ಕಾರಿನಲ್ಲೇ ಶವ, ನಂತರ ಚರಂಡಿಗೆ ಎಸೆತ:
ವಿಚಾರಣೆ ವೇಳೆ ಆರೋಪಿಗಳು ಕೊಲೆಯನ್ನು ಒಪ್ಪಿಕೊಂಡಿದ್ದಾರೆ. ಕಾರಿನಲ್ಲಿ ಯುವರಾಜ್ ಮತ್ತು ದಂಪತಿ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಈ ವೇಳೆ ಯುವರಾಜ್‌ಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಕೊಲೆಯ ನಂತರ ಸುಮಾರು 7 ಗಂಟೆಗಳ ಕಾಲ ಮೃತದೇಹವನ್ನು ಕಾರಿನಲ್ಲೇ ಇಟ್ಟುಕೊಂಡು ಗುರುಗ್ರಾಮದಾದ್ಯಂತ ಸುತ್ತಾಡಿದ ದಂಪತಿ, ನಂತರ ತಮ್ಮ ಮನೆಯ ಹತ್ತಿರದ ಚರಂಡಿಗೆ ಎಸೆದು ಉತ್ತರಾಖಂಡಕ್ಕೆ ಪರಾರಿಯಾಗಿದ್ದರು.
ತಾಂತ್ರಿಕ ಪರಿಶೀಲನೆ ನಡೆಸಿದ ಪೊಲೀಸರು ಉತ್ತರಾಖಂಡದಲ್ಲಿ ಅಡಗಿದ್ದ ದಂಪತಿಯನ್ನು ಸೆರೆಹಿಡಿದಿದ್ದಾರೆ. ಪ್ರಸ್ತುತ ನ್ಯಾಯಾಲಯವು ಇಬ್ಬರೂ ಆರೋಪಿಗಳನ್ನು 5 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
- Anya Vats
- Delhi Crime News
- Delhi HR professional murder
- Gurugram drain body
- Gurugram murder case
- Lajpat Nagar missing case
- Sanyam Sachdeva
- Yuvraj Singh Manchanda
- ಅನ್ಯಾ ವಾಟ್ಸ್ ಬಂಧನ
- ಗುರುಗ್ರಾಮ ಕೊಲೆ ಪ್ರಕರಣ
- ಚರಂಡಿಯಲ್ಲಿ ಶವ ಪತ್ತೆ
- ದೆಹಲಿ ಅಪರಾಧ ಸುದ್ದಿ
- ದೆಹಲಿ ಯುವರಾಜ್ ಕೊಲೆ
- ಮಾಜಿ ಸಹೋದ್ಯೋಗಿಯಿಂದ ಹತ್ಯೆ
- ಲಜಪತ್ ನಗರ ಸುದ್ದಿ
- ಹಣಕಾಸಿನ ವ್ಯಾಜ್ಯ ಕೊಲೆ





Leave a comment