Home ಕ್ರೈಂ ನ್ಯೂಸ್ ‘ಹೆಣ್ಣುಮಕ್ಕಳಿಗೆ ಗೌರವ ನೀಡದಿದ್ದರೆ ಕರ್ನಾಟಕ ಖಾಲಿ ಮಾಡಿಸುತ್ತೇವೆ’: ‘ಟಾಕ್ಸಿಕ್’ ಚಿತ್ರ ಹಾಗೂ ರಾಕಿಂಗ್ ಸ್ಟಾರ್ ಯಶ್ ವಿರುದ್ದ ನಟಿ ರಿಷಿಕಾ ಸಿಂಗ್ ಕೆಂಡ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

‘ಹೆಣ್ಣುಮಕ್ಕಳಿಗೆ ಗೌರವ ನೀಡದಿದ್ದರೆ ಕರ್ನಾಟಕ ಖಾಲಿ ಮಾಡಿಸುತ್ತೇವೆ’: ‘ಟಾಕ್ಸಿಕ್’ ಚಿತ್ರ ಹಾಗೂ ರಾಕಿಂಗ್ ಸ್ಟಾರ್ ಯಶ್ ವಿರುದ್ದ ನಟಿ ರಿಷಿಕಾ ಸಿಂಗ್ ಕೆಂಡ!

Share
ಯಶ್
Share

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಹೊಸ ವಿವಾದವೊಂದು ಶುರುವಾಗಿದೆ.

ಸ್ಯಾಂಡಲ್‌ವುಡ್ ನಟಿ ರಿಷಿಕಾ ಸಿಂಗ್ ಅವರು ಟ್ರೇಲರ್‌ನಲ್ಲಿರುವ ಬೋಲ್ಡ್ ಹಾಗೂ ಶೃಂಗಾರ ದೃಶ್ಯಗಳನ್ನು ತೀವ್ರವಾಗಿ ಖಂಡಿಸಿದ್ದು, ನಟ ಯಶ್ ವಿರುದ್ಧ ವೀಡಿಯೊ ಹಂಚಿಕೊಂಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹಂಚಿಕೊಂಡಿರುವ ರಿಷಿಕಾ ಸಿಂಗ್, “ಯಶ್ ಅವರು ಒಬ್ಬ ಪತಿ ಮತ್ತು ತಂದೆಯಾಗಿದ್ದು, ಮಹಿಳೆಯರಿಗೆ ನೀಡಬೇಕಾದ ಗೌರವದ ಬಗ್ಗೆ ಕಾಳಜಿ ವಹಿಸಬೇಕಿತ್ತು. ‘ಟಾಕ್ಸಿಕ್’ ಟ್ರೇಲರ್‌ನಲ್ಲಿ ಮಹಿಳೆಯರನ್ನು ಬಿಂಬಿಸಿರುವ ರೀತಿ ಸರಿಯಿಲ್ಲ” ಎಂದು ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಅವರು, “ಮಹಿಳೆಯರಿಗೆ ಗೌರವ ನೀಡದಿದ್ದರೆ ನಿಮ್ಮನ್ನು ಕರ್ನಾಟಕದಿಂದಲೇ ಖಾಲಿ ಮಾಡಿಸುತ್ತೇವೆ” ಎಂದು ಗಂಭೀರ ಆರೋಪ ಹಾಗೂ ಎಚ್ಚರಿಕೆ ನೀಡಿದ್ದಾರೆ.

ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಯಶ್ ಅಭಿಮಾನಿಗಳು ಹಾಗೂ ನೆಟ್ಟಿಗರು ರಿಷಿಕಾ ಸಿಂಗ್ ವಿರುದ್ಧ ತಿರುಗಿಬಿದ್ದಿದ್ದಾರೆ. “ಸಿನಿಮಾ ಎಂಬುದು ಕಾಲ್ಪನಿಕ ಕಥೆ, ಇದರಲ್ಲಿ ವಯಸ್ಕ ಕಲಾವಿದರು ಸಮ್ಮತಿಯಿಂದ ನಟಿಸಿದ್ದಾರೆ” ಎಂದು ಯಶ್ ಅಭಿಮಾನಿಗಳು ಸಮರ್ಥಿಸಿಕೊಂಡಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26 ರಂದು ಬಹುಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿದೆ.

Share

Leave a comment

Leave a Reply

Your email address will not be published. Required fields are marked *