Home ಕ್ರೈಂ ನ್ಯೂಸ್ ಪರೀಕ್ಷೆಯಲ್ಲಿ ಫೇಲ್, ಲಕ್ಷ ಲಕ್ಷ ನೀಡಿ ನಕಲಿ ಸರ್ಟಿಫಿಕೇಟ್ ಪಡೆದ ‘ವೈದ್ಯರು’: ಭಾರಿ ಜಾಲ ಪತ್ತೆ, ಮೂವರ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪರೀಕ್ಷೆಯಲ್ಲಿ ಫೇಲ್, ಲಕ್ಷ ಲಕ್ಷ ನೀಡಿ ನಕಲಿ ಸರ್ಟಿಫಿಕೇಟ್ ಪಡೆದ ‘ವೈದ್ಯರು’: ಭಾರಿ ಜಾಲ ಪತ್ತೆ, ಮೂವರ ಬಂಧನ!

Share
ವೈದ್ಯ
Share

ಜೈಪುರ: ವಿದೇಶದಲ್ಲಿ ಎಂಬಿಬಿಎಸ್ (MBBS) ಶಿಕ್ಷಣ ಮುಗಿಸಿ, ಭಾರತದಲ್ಲಿ ವೈದ್ಯಕೀಯ ವೃತ್ತಿ ಮಾಡಲು ಅಗತ್ಯವಿರುವ ಪರೀಕ್ಷೆಯಲ್ಲಿ ಪದೇ ಪದೇ ಅನುತ್ತೀರ್ಣರಾಗಿದ್ದರೂ, ಲಕ್ಷಾಂತರ ರೂಪಾಯಿ ನೀಡಿ ನಕಲಿ ಪ್ರಮಾಣಪತ್ರ ಪಡೆದು ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿದ್ದ ಮೂವರು ನಕಲಿ ವೈದ್ಯರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

ರಾಷ್ಟ್ರೀಯ ಪರೀಕ್ಷಾ ಮಂಡಳಿಯ (NBEMS) ಫಾರಿನ್ ಮೆಡಿಕಲ್ ಗ್ರಾಜುಯೇಟ್ (FMG) ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದ ಈ ಆರೋಪಿಗಳು, 25 ಲಕ್ಷದಿಂದ 29 ಲಕ್ಷ ರೂಪಾಯಿವರೆಗೆ ಹಣ ನೀಡಿ ನಕಲಿ ಪ್ರಮಾಣಪತ್ರಗಳನ್ನು ಪಡೆದುಕೊಂಡಿದ್ದರು.

ಆರೋಪಿಗಳ ಹಿನ್ನೆಲೆ ಮತ್ತು ದಂಧೆಯ ವಿವರ:

ಆಶೀಶ್ ಕುಮಾರ್ (30): ಪಾಕಿಸ್ತಾನದಲ್ಲಿ 2021ರಲ್ಲಿ ಎಂಬಿಬಿಎಸ್ ಮುಗಿಸಿದ್ದ ಈತ 3 ಬಾರಿ ಎಫ್‌ಎಂಬಿ ಪರೀಕ್ಷೆ ಬರೆದರೂ ಫೇಲ್ ಆಗಿದ್ದ. ನಂತರ 25 ಲಕ್ಷ ರೂ. ನೀಡಿ ನಕಲಿ ಪ್ರಮಾಣಪತ್ರ ಪಡೆದು ರಾಜಸ್ಥಾನ ಮೆಡಿಕಲ್ ಕೌನ್ಸಿಲ್ (RMC) ನೋಂದಣಿಗೆ ಅರ್ಜಿ ಸಲ್ಲಿಸಿದ್ದ.

ರಾಜೇಂದ್ರ ಕುಮಾರ್ ಯಾದವ್ (39): ಚೀನಾದಲ್ಲಿ ಓದಿದ್ದ ಈತ ಬರೋಬ್ಬರಿ 8 ಬಾರಿ ಪರೀಕ್ಷೆ ಬರೆದು ವಿಫಲನಾಗಿದ್ದ. ನಂತರ 29 ಲಕ್ಷ ರೂ. ನೀಡಿ ನಕಲಿ ಪ್ರಮಾಣಪತ್ರ ಪಡೆದು, ಜೈಪುರದಲ್ಲಿ ಪತ್ನಿಯ ಹೆಸರಿನಲ್ಲಿದ್ದ ಖಾಸಗಿ ಆಸ್ಪತ್ರೆಯನ್ನು ನಿರ್ವಹಿಸುತ್ತಿದ್ದ.

ನರೇಶ್ ರೋಲಾನಿಯಾ (26): ಈತನೂ ಪಾಕಿಸ್ತಾನದಲ್ಲಿ ಓದಿ 3 ಬಾರಿ ಫೇಲ್ ಆಗಿದ್ದ. 26 ಲಕ್ಷ ರೂ. ನೀಡಿ ನಕಲಿ ಪ್ರಮಾಣಪತ್ರ ಪಡೆದು, ಕೋಟ್‌ಪುಟ್ಲಿಯ ಖಾಸಗಿ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌ನಲ್ಲಿ ಅಧಿಕೃತ ನೋಂದಣಿ ಇಲ್ಲದೆಯೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ.

100ಕ್ಕೂ ಹೆಚ್ಚು ವೈದ್ಯರು ತನಿಖೆಯ ವ್ಯಾಪ್ತಿಯಲ್ಲಿ: ಈ ನಕಲಿ ಪ್ರಮಾಣಪತ್ರ ದಂಧೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 30 ಜನರನ್ನು ಬಂಧಿಸಿದ್ದು, ಪ್ರಕರಣದಲ್ಲಿ ಬ್ರೋಕರ್‌ಗಳು ಮತ್ತು ರಾಜಸ್ಥಾನ ಮೆಡಿಕಲ್ ಕೌನ್ಸಿಲ್‌ನ ಸಿಬ್ಬಂದಿಗಳ ಪಾತ್ರವೂ ಕಂಡುಬಂದಿದೆ. ಸದ್ಯ 100ಕ್ಕೂ ಹೆಚ್ಚು ವಿದೇಶಿ ಮೆಡಿಕಲ್ ಪದವೀಧರರು ಪೊಲೀಸ್ ತನಿಖೆಯ ರೇಡಾರ್‌ನಲ್ಲಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles