ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಮತ್ತು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪುತ್ರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಸೋಲಿಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಷಡ್ಯಂತ್ರ ರೂಪಿಸಿದ್ದು ಈಗ ಬಟಾಬಯಲಾಗಿದೆ. ಮಾತ್ರವಲ್ಲ, ಈ ಎಸ್ ಡಿಪಿಐ ಅಭ್ಯರ್ಥಿಗೆ ಫಂಡಿಂಗ್ ಮಾಡಿದ್ದ ಬಗ್ಗೆ ಮೊದಲು ವರದಿ ಪ್ರಕಟಿಸಿದ್ದೇ “ಸುದ್ದಿಕ್ಷಣ ನ್ಯೂಸ್ ಡಿಜಿಟಲ್ ಮೀಡಿಯಾ”.
“ಸುದ್ದಿಕ್ಷಣ” ನ್ಯೂಸ್ ಡಿಜಿಟಲ್ ಮೀಡಿಯಾದಲ್ಲಿ ಈ ಸುದ್ದಿ ಪ್ರಕಟವಾಗಿತ್ತು.
ಈ ಸುದ್ದಿಯನ್ನೂ ಓದಿ: BIG BREAKING: ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ ನಲ್ಲಿ ಎಸ್‌ಡಿಪಿಐಗೆ ಜಮೀರ್ ಅಹ್ಮದ್ ಟೀಂನಿಂದ 10 ಕೋಟಿ ರೂ. ನೆರವು? ಹೈಕಮಾಂಡ್ ಗೆ ದೂರು, ಶಿಸ್ತು ಕ್ರಮಕ್ಕೆ ಚಿಂತನೆ!
BIG BREAKING: ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ ನಲ್ಲಿ ಎಸ್‌ಡಿಪಿಐಗೆ ಜಮೀರ್ ಅಹ್ಮದ್ ಟೀಂನಿಂದ 10 ಕೋಟಿ ರೂ. ನೆರವು? ಹೈಕಮಾಂಡ್ ಗೆ ದೂರು, ಶಿಸ್ತು ಕ್ರಮಕ್ಕೆ ಚಿಂತನೆ! ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಲಾಗಿತ್ತು. ಆ ಬಳಿಕ ಎಲ್ಲಾ ಮಾಧ್ಯಮಗಳಲ್ಲಿ ಇದು ದೊಡ್ಡ ಸುದ್ದಿಯಾಗಿತ್ತು. ಹತ್ತು ಕೋಟಿ ರೂಪಾಯಿ ಫಂಡಿಂಗ್ ಮಾಡಿದ್ದ ಬಗ್ಗೆ, ಈ ಕುರಿತಂತೆ ಹೈಕಮಾಂಡ್ ಗೆ ಲಿಖಿತವಾಗಿಯೇ ದೂರು ನೀಡಲಾಗಿತ್ತು. ಜಮೀರ್ ಅಹ್ಮದ್ ಖಾನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದ ಕುರಿತಂತೆ ದೆಹಲಿ ಮಟ್ಟದ ನಾಯಕರು ಸುದ್ದಿಕ್ಷಣ ಮೀಡಿಯಾಕ್ಕೆ ನಿಖರ ಮಾಹಿತಿ ನೀಡಿದ್ದರು.
ಇಷ್ಟೆಲ್ಲಾ ಆದರೂ ಸಮರ್ಥ್ ಶಾಮನೂರು ಬೈ ಎಲೆಕ್ಷನ್ ನಲ್ಲಿ ಜಯ ಗಳಿಸಿದ್ದರು. ಕೇವಲ 5700 ಮತಗಳ ಅಂತರದಲ್ಲಿ ಅಷ್ಟೇ ಜಯಶಾಲಿಯಾಗಿದ್ದರು. ವೀರಶೈವ ಲಿಂಗಾಯತ ಸಮಾಜ ಸೇರಿದಂತೆ ಇತರೆ ಸಮಾಜದವರು ಕೈ ಹಿಡಿದ ಕಾರಣಕ್ಕೆ ಗೆಲ್ಲಲು ಕಾರಣವಾಗಿತ್ತು.
ಎರಡು ತಿಂಗಳ ಹಿಂದೆಯೇ ಈ ಸುದ್ದಿ ಪ್ರಕಟಿಸಲಾಗಿತ್ತು. ಆದರೆ ಈಗ ಜಮೀರ್ ಅಹ್ಮದ್ ಖಾನ್ ಮತ್ತು ದಾವಣಗೆರೆ ಕಾಂಗ್ರೆಸ್ ಸ್ಥಳೀಯ ಮುಖಂಡ ಹಾಗೂ ಎಂಎಲ್ ಸಿ ಅಬ್ದುಲ್ ಜಬ್ಬಾರ್ ಟೀಂನ ಸಿರಾಜ್ ಅಹ್ಮದ್ ಅವರು ಮಾತನಾಡಿದ್ದಾರೆ ಎನ್ನಲಾದ
ಆಡಿಯೋ ರಿಲೀಸ್ ಆಗಿದೆ.
ಈ ಆಡಿಯೋದಲ್ಲಿ ಇಬ್ಬರೂ ಸಹ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಸೋಲಿಸಲು ಹಾಗೂ ಎಸ್ ಡಿಪಿಐ ಅಭ್ಯರ್ಥಿ ಅಪ್ಸರ್ ಕೋಡಿಬೆಟ್ಟು ಅವರಿಗೆ ಮತ ಹಾಕುವಂತೆ ಹೇಳಿರುವುದು ಆಡಿಯೋದಲ್ಲಿದೆ. ಮಾತ್ರವಲ್ಲ, ಕಾಂಗ್ರೆಸ್ ವಿರುದ್ದ ಬಂಡೆದ್ದು ಸ್ಪರ್ಧೆ ಮಾಡಿದ್ದ ಸಾದಿಕ್ ಪೈಲ್ವಾನ್ ವಾರ್ಡ್ ಬಗ್ಗೆಯೂ ಮಾತನಾಡಿದ್ದಾರೆ. ಈ ವಾರ್ಡ್ ನಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಹೆಚ್ಚು ಮತ ಬೀಳದಂತೆ ನೋಡಿಕೊಳ್ಳುವಂತೆ ಜಮೀರ್ ಅಹ್ಮದ್ ಮಾತನಾಡಿದ್ದಾರೆ. ಆಗ ನಾವು ಸಾದಿಕ್ ಪೈಲ್ವಾನ್ ಸಹೋದರನಿಗೆ ಹಣ ನೀಡಿರುವುದಾಗಿ ಸಿರಾಜ್ ಅಹ್ಮದ್ ಹೇಳಿದ್ದಾರೆ. ನಾವು ಸಾದಿಕ್ ಪೈಲ್ವಾನ್ ವಾರ್ಡ್ ನಲ್ಲೇ ಕಾಂಗ್ರೆಸ್ ಗೆ ಮತ ಬೀಳದಂತೆ ನೋಡಿಕೊಳ್ಳುತ್ತೇವೆ. ನೀವು ತಲೆಕೆಡಿಸಿಕೊಳ್ಳಬೇಡಿ ಎಂದು ಸಿರಾಜ್ ಅಹ್ಮದ್ ಹೇಳಿದ್ದಾರೆ. ಇದು ಈಗ ಕಾಂಗ್ರೆಸ್ ನಲ್ಲಿ ಮತ್ತಷ್ಟು ಕೋಲಾಹಲ ಎಬ್ಬಿಸಿದೆ.
ಕಾಂಗ್ರೆಸ್ ಈಗಾಗಲೇ ಸೋಲು ಒಪ್ಪಿಕೊಂಡಿದೆ. ಎಸ್. ಎಸ್. ಮಲ್ಲಿಕಾರ್ಜುನ್ ಅವರು ಈಗಾಗಲೇ ಒತ್ತಡದಲ್ಲಿದ್ದಾರೆ ಎಂಬ ಮಾತು ಆಡುತ್ತಿದ್ದಾರೆ ಎಂದು ಸಿರಾಜ್ ಅಹ್ಮದ್ ಹೇಳಿದ್ದಾರೆ. ಒಟ್ಟಿನಲ್ಲಿ ಈ ಆಡಿಯೋ ಕಾಂಗ್ರೆಸ್ ನ ಭಿನ್ನಮತ ಮತ್ತಷ್ಟು ಹೆಚ್ಚಾಗುವಂತೆ ಮಾಡುವುದಂತೂ
ನಿಜ.
ಬೆಂಬಲ ಕೊಟ್ಟಿದ್ದ ಪ್ರಮುಖ ನಾಯಕರು:
ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್, ಎಂಎಲ್‌ಸಿಗಳಾದ ನಸೀರ್ ಅಹಮದ್ ಮತ್ತು ಅಬ್ದುಲ್ ಜಬ್ಬಾರ್ ಅವರು ಎಸ್‌ಡಿಪಿಐ ಅಭ್ಯರ್ಥಿಗೆ ರಹಸ್ಯವಾಗಿ ₹10 ಕೋಟಿ ಹಣಕಾಸಿನ ನೆರವು ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಆರೋಪಿಸಿದ್ದವು.
ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರು ಹೆಚ್ಚಾಗಿರುವುದರಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಈ ನಾಯಕರು ಒತ್ತಾಯಿಸಿದ್ದರು. ಆದರೆ ಹೈಕಮಾಂಡ್ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಮಲ್ಲಿಕಾರ್ಜುನ್ ಅವರಿಗೆ
ಟಿಕೆಟ್ ನೀಡಿದ್ದು ಈ ಅಸಮಾಧಾನಕ್ಕೆ ಕಾರಣ ಎನ್ನಲಾಗಿತ್ತು.
- Abdul Jabbar
- Congress Internal Rift
- Davanagere South By-election
- Karnataka Politics
- Samarth Shamanur
- SDPI Funding
- Shamanur Shivashankarappa
- Siraj Ahmed Audio Leak
- Sudeekshana News
- Zameer Ahmed Khan
- ಅಬ್ದುಲ್ ಜಬ್ಬಾರ್
- ಎಸ್‌ಡಿಪಿಐ ಫಂಡಿಂಗ್
- ಕರ್ನಾಟಕ ರಾಜಕಾರಣ
- ಕಾಂಗ್ರೆಸ್ ಭಿನ್ನಮತ
- ಜಮೀರ್ ಅಹ್ಮದ್ ಖಾನ್
- ದಾವಣಗೆರೆ ದಕ್ಷಿಣ ಉಪಚುನಾವಣೆ
- ಶಾಮನೂರು ಶಿವಶಂಕರಪ್ಪ
- ಸಮರ್ಥ್ ಶಾಮನೂರು
- ಸಿರಾಜ್ ಅಹ್ಮದ್ ಆಡಿಯೋ ಲೀಕ್
- ಸುದ್ದಿಕ್ಷಣ ಎಕ್ಸ್‌ಕ್ಲೂಸಿವ್





Leave a comment