Home ಕ್ರೈಂ ನ್ಯೂಸ್ ತಂಗಿ ಎಂದವನ ಜೊತೆ ಹೆಂಡತಿ ಎಸ್ಕೇಪ್: ‘ರಕ್ಷಾಬಂಧನ’ದ ನಾಟಕವಾಡಿದ ಗೆಳೆಯನಿಂದಲೇ ದ್ರೋಹ!
ಕ್ರೈಂ ನ್ಯೂಸ್ಬೆಂಗಳೂರು

ತಂಗಿ ಎಂದವನ ಜೊತೆ ಹೆಂಡತಿ ಎಸ್ಕೇಪ್: ‘ರಕ್ಷಾಬಂಧನ’ದ ನಾಟಕವಾಡಿದ ಗೆಳೆಯನಿಂದಲೇ ದ್ರೋಹ!

Share
ಗೆಳೆಯ
Share

ಮಂಡ್ಯ: ಪ್ರೀತಿಯ ಹೆಸರಲ್ಲಿ ನಂಬಿಸಿ, ಕೊನೆಗೆ ಪತ್ನಿಯೇ ತನ್ನ ಪತಿಯ ಆತ್ಮೀಯ ಗೆಳೆಯನೊಂದಿಗೆ ಓಡಿಹೋಗಿ ಮದುವೆಯಾಗಿರುವ ವಿಲಕ್ಷಣ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆ:

ಬನ್ನಂಗಾಡಿಯ ಆಟೋ ಚಾಲಕ ಸಾಗರ್ ಹಾಗೂ ಹರವು ಗ್ರಾಮದ ರಕ್ಷಿತಾ ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರ ವಿರೋಧದ ನಡುವೆಯೂ ಸಾಗರ್‌ನನ್ನು ಮದುವೆಯಾಗಿದ್ದ ರಕ್ಷಿತಾ, ಕೇವಲ ಎರಡೇ ವರ್ಷಕ್ಕೆ ಪತಿಗೆ ಕೈ ಕೊಟ್ಟಿದ್ದಾಳೆ.

ಸ್ನೇಹಿತನ ನಂಬಿಕೆ ದ್ರೋಹ:

ಸಾಗರ್‌ನ ಆಪ್ತ ಗೆಳೆಯ ಇಂದ್ರ ಕೂಡ ಆಟೋ ಚಾಲಕನಾಗಿದ್ದು, ಸದಾ ಸಾಗರ್ ಮನೆಗೆ ಬರುತ್ತಿದ್ದ. ರಕ್ಷಿತಾಳನ್ನು ‘ನನ್ನ ಸ್ವಂತ ತಂಗಿ’ ಎಂದು ಕರೆಯುತ್ತಿದ್ದ ಇಂದ್ರ, ಕಳೆದ ರಕ್ಷಾಬಂಧನದಂದು ಅವಳಿಂದ ರಾಖಿ ಕಟ್ಟಿಸಿಕೊಂಡು ಅಣ್ಣ-ತಂಗಿ ಸಂಬಂಧದ ನಾಟಕವಾಡಿದ್ದ. ಆದರೆ ಬೆನ್ನ ಹಿಂದೆ ಅವಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಇಂದ್ರ, ಈಗ ಅವಳನ್ನೇ ಕರೆದುಕೊಂಡು ಪರಾರಿಯಾಗಿದ್ದಾನೆ.

ನಗದು, ಚಿನ್ನದೊಂದಿಗೆ ಎಸ್ಕೇಪ್:

ರಕ್ಷಿತಾ ಮನೆಯಲ್ಲಿದ್ದ 22 ಗ್ರಾಂ ಚಿನ್ನದ ಒಡವೆ ಹಾಗೂ 1 ಲಕ್ಷ ರೂಪಾಯಿ ನಗದು ಹಣದೊಂದಿಗೆ ಇಂದ್ರನ ಜೊತೆ ಓಡಿ ಹೋಗಿದ್ದಾಳೆ. ಅವರಿಬ್ಬರು ಮದುವೆಯಾಗಿರುವ ಫೋಟೋ ಕಂಡು ಸಾಗರ್ ಕಂಗಾಲಾಗಿದ್ದಾರೆ. ಪ್ರಸ್ತುತ ಸಾಗರ್ ಅವರು ತಮಗೆ ನ್ಯಾಯ ಕೊಡಿಸುವಂತೆ ಪಾಂಡವಪುರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles