ಶಿವಮೊಗ್ಗ: ಸರ್ಕಾರಿ ಉದ್ಯೋಗಾವಕಾಶ ಹುಡುಕುತ್ತಿರುವ SSLC ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಘಟಕದಲ್ಲಿ ಖಾಲಿ ಇರುವ 56 ‘ಜವಾನ’ (Peon) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ
ಸಂಸ್ಥೆ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ, ಶಿವಮೊಗ್ಗ.
ಹುದ್ದೆಯ ಹೆಸರು: ಜವಾನ (Peon).
ಒಟ್ಟು ಹುದ್ದೆಗಳು: 56.
ವೇತನ ಶ್ರೇಣಿ: ₹27,000 – ₹46,675 (ಇದರ ಜೊತೆಗೆ ಸರ್ಕಾರದ ನಿಯಮಾನುಸಾರ ಭತ್ಯೆಗಳು ಲಭ್ಯ).
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು KSEAB ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ SSLC/10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕನ್ನಡ ಓದಲು ಮತ್ತು ಬರೆಯಲು ಕಡ್ಡಾಯವಾಗಿ ತಿಳಿದಿರಬೇಕು.
ವಯೋಮಿತಿ (24 ಆಗಸ್ಟ್ 2026 ಕ್ಕೆ ಅನ್ವಯಿಸುವಂತೆ):
ಕನಿಷ್ಠ ವಯಸ್ಸು: 18 ವರ್ಷ.
ಸಾಮಾನ್ಯ ವರ್ಗ (GM): ಗರಿಷ್ಠ 40 ವರ್ಷ (35 + 5 ವರ್ಷ ಸಡಿಲಿಕೆ).
ಪ್ರವರ್ಗ 2A, 2B, 3A, 3B: ಗರಿಷ್ಠ 43 ವರ್ಷ (38 + 5 ವರ್ಷ ಸಡಿಲಿಕೆ).
SC / ST / ಪ್ರವರ್ಗ-1: ಗರಿಷ್ಠ 45 ವರ್ಷ (40 + 5 ವರ್ಷ ಸಡಿಲಿಕೆ).
ಅರ್ಜಿ ಶುಲ್ಕ ವಿವರ
ಸಾಮಾನ್ಯ ವರ್ಗ: ₹200
ಪ್ರವರ್ಗ 2A, 2B, 3A, 3B: ₹100
SC / ST / ಪ್ರವರ್ಗ-1 / ಅಂಗವಿಕಲ ಅಭ್ಯರ್ಥಿಗಳು: ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ
SSLC ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:10 ರ ಅನುಪಾತದಲ್ಲಿ ಕಿರುಪಟ್ಟಿ (Shortlist) ಮಾಡಲಾಗುತ್ತದೆ. ಆಬಳಿಕ 10 ಅಂಕಗಳ ಸಂದರ್ಶನ ನಡೆಸಲಾಗುವುದು. ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿ ತಯಾರಿಸಲಾಗುತ್ತದೆ.
ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 23 ಜುಲೈ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24 ಆಗಸ್ಟ್ 2026 (ರಾತ್ರಿ 11:59 ರವರೆಗೆ)
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಅಧಿಕೃತ ಜಾಲತಾಣ shivamogga.dcourts.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ.
- 10th Pass Govt Jobs Karnataka
- 10th ಪಾಸಾದವರಿಗೆ ಉದ್ಯೋಗ
- Apply Online Shivamogga District Court
- Karnataka Court Jobs
- Karnataka Govt Jobs 2026
- Shivamogga Court Peon Recruitment
- Shivamogga District Court Recruitment 2026
- Shivamogga Peon Vacancy 2026
- ಕರ್ನಾಟಕ ಸರ್ಕಾರಿ ಉದ್ಯೋಗ 2026
- ಶಿವಮೊಗ್ಗ ಈ ಕೋರ್ಟ್ ಉದ್ಯೋಗ
- ಶಿವಮೊಗ್ಗ ಕೋರ್ಟ್ ಉದ್ಯೋಗಾವಕಾಶ
- ಶಿವಮೊಗ್ಗ ಕೋರ್ಟ್ ಜವಾನ ಹುದ್ದೆ
- ಶಿವಮೊಗ್ಗ ಜವಾನ ನೇಮಕಾತಿ ಅಧಿಸೂಚನೆ
- ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ನೇಮಕಾತಿ 2026





Leave a comment