Home ದಾವಣಗೆರೆ ಪಟ್ಟು ಸಡಿಲಿಸಿ, ಇಲ್ಲದಿದ್ದರೆ ಉತ್ತರ ರಾಜ್ಯಗಳ ಪರಿಸ್ಥಿತಿ ಬರುತ್ತೆ: ಕಾಂಗ್ರೆಸ್ ಹೈಕಮಾಂಡ್ ಗೆ ಸೆಡ್ಡು ಹೊಡೆದ ಅಬ್ದುಲ್ ಜಬ್ಬಾರ್!
ದಾವಣಗೆರೆಬೆಂಗಳೂರು

ಪಟ್ಟು ಸಡಿಲಿಸಿ, ಇಲ್ಲದಿದ್ದರೆ ಉತ್ತರ ರಾಜ್ಯಗಳ ಪರಿಸ್ಥಿತಿ ಬರುತ್ತೆ: ಕಾಂಗ್ರೆಸ್ ಹೈಕಮಾಂಡ್ ಗೆ ಸೆಡ್ಡು ಹೊಡೆದ ಅಬ್ದುಲ್ ಜಬ್ಬಾರ್!

Share
ಅಬ್ದುಲ್ ಜಬ್ಬಾರ್
Share

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ, ಪಕ್ಷದ ಪರ ಪ್ರಚಾರ ಮಾಡದಿರುವುದು, ಎಸ್ ಡಿಪಿಐ ಅಭ್ಯರ್ಥಿಗೆ ಫಂಡಿಂಗ್ ಮಾಡಿದ ಆರೋಪದ ಮೇಲೆ ಈಗಾಗಲೇ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಉಚ್ಚಾಟಿಸಲಾಗಿದೆ.

ಇದಕ್ಕೂ ಮುನ್ನ ಅಬ್ದುಲ್ ಜಬ್ಬಾರ್ ಅವರು ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಲೀಂ ಅಹ್ಮದ್, ರಿಜ್ವಾನ್ ಅರ್ಷದ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮಾತ್ರವಲ್ಲ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಮತ್ತು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ಕಾಂಗ್ರೆಸ್ ನಾಯಕರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು. ಸೌಜನ್ಯಕ್ಕೂ ನನ್ನನ್ನು ಪ್ರಚಾರಕ್ಕೆ ಕರೆದಿರಲಿಲ್ಲ. ನನ್ನ ಅವಶ್ಯಕತೆ ಇಲ್ಲ ಎಂದು ಭಾವಿಸಿದ್ದರು. ಆದರೆ ಈಗ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ್ದರು.

ಆದರೆ ಈಗ ನೇರ ಕಾಂಗ್ರೆಸ್ ಹೈಕಮಾಂಡ್ ಗೆ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷವು ತನ್ನ ಪಟ್ಟು ಸಡಿಲಿಸದೇ ಹೋದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಜಾತ್ಯಾತೀತ ರಾಜ್ಯವು ಉತ್ತರದ ರಾಜ್ಯಗಳ ಪರಿಸ್ಥಿಗೆ ಬಂದರೆ ಅದಕ್ಕೆ ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕರ ನಿರ್ಧಾರಗಳೇ ಕಾರಣವಾಗಬಹುದು ಎಂದು ಗುಡುಗಿದ್ದಾರೆ.

ಪ್ರಮುಖಾಂಶಗಳು:

ಪಕ್ಷದಿಂದ ಉಚ್ಚಾಟನೆ:

ಚುನಾವಣಾ ಪ್ರಚಾರದಿಂದ ದೂರ ಉಳಿದ ಆರೋಪದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅಬ್ದುಲ್ ಜಬ್ಬಾರ್ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದ್ದಾರೆ.

ಎಚ್ಚರಿಕೆಯ ಸಂದೇಶ:

ಕಾಂಗ್ರೆಸ್ ವರಿಷ್ಠರು ತಮ್ಮ ಹಠಮಾರಿ ಧೋರಣೆಯನ್ನು ಬಿಡದಿದ್ದರೆ, ದಕ್ಷಿಣ ಭಾರತದಲ್ಲೂ ಪಕ್ಷವು ಉತ್ತರ ಭಾರತದ ರಾಜ್ಯಗಳಲ್ಲಿ ಅನುಭವಿಸಿದಂತಹ ಹೀನಾಯ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಜಬ್ಬಾರ್ ಎಚ್ಚರಿಸಿದ್ದಾರೆ.

ನಾಯಕತ್ವದ ವಿರುದ್ಧ ಅಸಮಾಧಾನ:

ಸಲೀಂ ಅಹ್ಮದ್, ರಿಜ್ವಾನ್ ಅರ್ಷದ್ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ವಿರುದ್ಧ ಹರಿಹಾಯ್ದಿರುವ ಅವರು, “ಅಲ್ಪಸಂಖ್ಯಾತ ನಾಯಕರನ್ನು ಕಡೆಗಣಿಸುತ್ತಿರುವುದು ಪಕ್ಷದ ಅವನತಿಗೆ ನಾಂದಿಯಾಗಲಿದೆ” ಎಂದು ಗುಡುಗಿದ್ದಾರೆ.

ಜಾತ್ಯಾತೀತತೆ ಪ್ರಶ್ನೆ:

ಕರ್ನಾಟಕದಂತಹ ಜಾತ್ಯಾತೀತ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ತಪ್ಪು ನಿರ್ಧಾರಗಳು ಕೋಮುವಾದಿ ಶಕ್ತಿಗಳಿಗೆ ಲಾಭ ಮಾಡಿಕೊಡುತ್ತಿವೆ ಎಂಬುದು ಅವರ ಪ್ರಬಲ ವಾದವಾಗಿದೆ.

ಈ ಬೆಳವಣಿಗೆಯು ದಾವಣಗೆರೆ ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ಮತಬ್ಯಾಂಕ್ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಪಕ್ಷದ ಆಂತರಿಕ ಭಿನ್ನಮತ ಈಗ ಬೀದಿಗೆ ಬಂದಿದೆ.

Share

Leave a comment

Leave a Reply

Your email address will not be published. Required fields are marked *