Home ಕ್ರೈಂ ನ್ಯೂಸ್ ದೂರು ನೀಡಲು ಬಂದ ಸಂತ್ರಸ್ತೆಗೆ “ಗಮನ ಸೆಳೆಯುವುದು ಬೇಡ, ಸುಮ್ಮನೆ ವಿಷಯ ಬಿಟ್ಟುಬಿಡು”: ಉಡಾಫೆ ಮಾತನಾಡಿದ್ದ ಅಶ್ವಿನಿ ಚೈನಾನಿ ಸೆರೆ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ದೂರು ನೀಡಲು ಬಂದ ಸಂತ್ರಸ್ತೆಗೆ “ಗಮನ ಸೆಳೆಯುವುದು ಬೇಡ, ಸುಮ್ಮನೆ ವಿಷಯ ಬಿಟ್ಟುಬಿಡು”: ಉಡಾಫೆ ಮಾತನಾಡಿದ್ದ ಅಶ್ವಿನಿ ಚೈನಾನಿ ಸೆರೆ!

Share
ದೂರು
Share

ನಾಸಿಕ್: ದೇಶದ ಪ್ರತಿಷ್ಠಿತ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನಾಸಿಕ್ ಘಟಕದಲ್ಲಿ ಭೀಕರ ಲೈಂಗಿಕ ಕಿರುಕುಳ ಮತ್ತು ಮಾನಸಿಕ ಹಿಂಸೆಯ ಪ್ರಕರಣ ಬೆಳಕಿಗೆ ಬಂದಿದೆ.

ಈ ಪ್ರಕರಣದಲ್ಲಿ ದೂರು ನೀಡಲು ಬಂದ ಸಂತ್ರಸ್ತೆಗೆ “ಗಮನ ಸೆಳೆಯುವುದು ಬೇಡ, ಸುಮ್ಮನೆ ವಿಷಯ ಬಿಟ್ಟುಬಿಡು” ಎಂದು ಉಡಾಫೆಯ ಉತ್ತರ ನೀಡಿದ್ದ ಎಚ್‌ಆರ್ ಮುಖ್ಯಸ್ಥ ಅಶ್ವಿನಿ ಚೈನಾನಿ ಸೇರಿದಂತೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ:

ಗುತ್ತಿಗೆ ಆಧಾರಿತ ಉದ್ಯೋಗಿಯಾಗಿ ಸೇರಿದ್ದ ಸಂತ್ರಸ್ತೆಗೆ ತಂಡದ ನಾಯಕ (ಟೀಮ್ ಲೀಡ್) ರಜಾ ಮೆಮನ್ ಎಂಬಾತ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಸಂತ್ರಸ್ತೆ ಕಂಪನಿಯ ಉನ್ನತ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬದಲಾಗಿ, “ನಿನಗೆ ಯಾಕೆ ಈ ಸ್ಪಾಟ್‌ಲೈಟ್ ಬೇಕು? ಸುಮ್ಮನೆ ಬಿಟ್ಟುಬಿಡು” ಎಂದು ಎಚ್‌ಆರ್ ಮ್ಯಾನೇಜರ್ ಅಶ್ವಿನಿ ಚೈನಾನಿ ಸಂತ್ರಸ್ತೆಯ ಬಾಯಿ ಮುಚ್ಚಿಸಲು ಯತ್ನಿಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ವ್ಯವಸ್ಥಿತ ಕಿರುಕುಳ:

ದೂರು ನೀಡಿದ್ದಕ್ಕಾಗಿ ಸೇಡು ತೀರಿಸಿಕೊಳ್ಳಲು ರಜಾ ಮೆಮನ್ ಮತ್ತು ಇತರ ಸಹೋದ್ಯೋಗಿಗಳು ಸಂತ್ರಸ್ತೆಯ ಕಂಪ್ಯೂಟರ್ ಸಿಸ್ಟಮ್ ಅನ್ನು ಹ್ಯಾಕ್ ಮಾಡಿ, ಪ್ರತಿ ಸೆಕೆಂಡಿಗೆ ಒಂದು ಕರೆ ಬರುವಂತೆ ತಾಂತ್ರಿಕ ಬದಲಾವಣೆ ಮಾಡಿ ಮಾನಸಿಕವಾಗಿ ಕುಸಿಯುವಂತೆ ಮಾಡಿದ್ದರು. ಅಲ್ಲದೆ, ಮತಾಂತರಕ್ಕೆ ಒತ್ತಡ ಹೇರಿದ ಆರೋಪವೂ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಸದ್ಯ ನಾಸಿಕ್ ಪೊಲೀಸರ ವಿಶೇಷ ತನಿಖಾ ತಂಡ (SIT) ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಒಟ್ಟು ಒಂಬತ್ತು ಎಫ್‌ಐಆರ್ ದಾಖಲಾಗಿವೆ.

Share

Leave a comment

Leave a Reply

Your email address will not be published. Required fields are marked *