SUDDIKSHANA KANNADA NEWS/DAVANAGERE/DATE:14-04-2024
ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಹಾಲಕ್ಷ್ಮೀ ಬಡಾವಣೆಯಲ್ಲಿ ಅನೇಕ ವರ್ಷಗಳಿಂದ ವಾಸ ಮಾಡುತ್ತಿದ್ದೇವೆ. ಆದ್ರೆ, ಅಗತ್ಯ ಮೂಲಭೂತ ಸೌಕರ್ಯಗಳ ಕಲ್ಪಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಸೂಕ್ತ ಸ್ಪಂದನೆ ಸಿಗದ ಕಾರಣ ಲೋಕಸಭಾ ಚುನಾವಣೆ ಬಹಿಷ್ಕರಿಸುವ ತೀರ್ಮಾನಕ್ಕೆ ಬಂದಿರುವುದಾಗಿ ಬಡಾವಣೆಯ ವಾಸಿಗಳು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಾಗರಿಕ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಎಸ್.ಪಿ.ಪ್ರಕಾಶ್ ಕುಮಾರ್, ಈ ಬಡಾವಣೆ ನಿರ್ಮಾಣದ ನಂತರದಲ್ಲಿ ನಾಗರಿಕರಿಗೆ ಅತ್ಯಗತ್ಯವಾಗಿ ಒದಗಿಸುವ ಕನಿಷ್ಠ ಮೂಲಭೂತ ಸೌಕರ್ಯಗಳ ಒದಗಿಸಿಲ್ಲ. ಎಲ್ಲ ಸಚಿವರು, ಶಾಸಕರು, ಜಿಲ್ಲಾಡಳಿತ, ದೂಡಾ, ಮಹಾನಗರ ಪಾಲಿಕೆ ಎಲ್ಲರ ಗಮನಕ್ಕೂ ತರಲಾಗಿದೆ. ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ, ಯಾವುದೇ ಪ್ರಯೋಜನ ಆಗಿಲ್ಲ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ಚುನಾವಣೆಯನ್ನು ಬಹಿಷ್ಕಾರ ಮಾಡುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕೆ.ಪಿ. ಚಂದ್ರಶೇಖರಪ್ಪ,ರವಿಕುಮಾರ್.ಎಸ್.ಕುಲಕರ್ಣಿ ಎಸ್. ಪ್ರಸಾದ್, ಶಿವಕುಮಾರ್ ಪಿ.ಬಿ, ಮೌನೇಶ್ವರ ಎನ್.ಹೆಚ್., ಹೆಚ್. ಗುರುಮೂರ್ತಿ ಹಿತೇಷ್ ಕುಮಾರ್ ವಿ ಪಟೇಲ್, ಸಮೀವುಲ್ಲಾ .ಎಮ್.ಎ. ಎಸ್.ಎಂ. ವೆಂಕಟೇಶ್, ಕೆ. ಅಶೋಕಶೆಟ್ಟಿ , ಕಾಶೀನಾಥ.ಟಿ.ಎಂ , ಕೆ.ಎನ್. ಮಂಜೇಶ್ , ಕೃಷ್ಣಾ ಜಿ. ವೈ.ಬಿ, ಚಂದ್ರಶೇಖರ್ ಹೆಚ್. ಎಸ್. ಉಪಸ್ಥಿತರಿದ್ದರು.