SUDDIKSHANA KANNADA NEWS/ DAVANAGERE/ DATE:19-02-2024
ಕೋಲಾರ: ಕೋಡಿ ಮಠದ ಶ್ರೀಗಳು ಹೇಳಿದ ಭವಿಷ್ಯ ನಿಜವಾಗುತ್ತದೆ ಎಂಬ ನಂಬಿಕೆ ಈಗಲೂ ಜನರಲ್ಲಿದೆ. ಹಾಗಾಗಿ, ಕೋಡಿ ಶ್ರೀಗಳ ಭವಿಷ್ಯವಾಣಿ ಬಗ್ಗೆ ಕುತೂಹಲ ಗರಿಗೆದರಿತ್ತದೆ. ಹೆಚ್ಚು ಕಡಿಮೆ ಈ ಶ್ರೀಗಳು ಹೇಳಿದ್ದು ನಿಜವಾಗಿದೆ.
ಆಗಾಗ್ಗೆ ಭವಿಷ್ಯವಾಣಿ ನುಡಿಯುವ ಶ್ರೀಗಳು, ಈಗ ಮತ್ತೊಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಯುಗಾದಿ ನಂತರ ಒಳ್ಳೆಯದಾಗುತ್ತದೆ ಎಂಬ ಸೂಚನೆ ಕೊಟ್ಟಿದ್ದಾರೆ.
ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ. ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, ಮಳೆ, ಬೆಳೆ ಇಲ್ಲದೇ ಕಂಗಾಲಾಗಿರುವ ರೈತರಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಬರಗಾಲದಿಂದ ಬೇಸತ್ತಿರುವ ಜನರು, ರೈತರಿಗೆ ಯುಗಾದಿ ನಂತರ ಆಶಾದಾಯಕ ದಿನಗಳು ಬರಲಿವೆ. ಒಳ್ಳೆಯ ಮಳೆ, ಬೆಳೆ ಮತ್ತು ವರುಣ ಸುರಿಯುವ ಲಕ್ಷಣಗಳಿವೆ ಎಂದು ಭವಿಷ್ಯ ಹೇಳಿದ್ದಾರೆ.
ಮತ್ತೊಂದು ಆಘಾತಕಾರಿ ಸುಳಿವನ್ನೂ ಸಹ ನೀಡಿದ್ದಾರೆ. ಖ್ಯಾತ ಧಾರ್ಮಿಕ ಮುಖಂಡನ ಸಾವು, ಮತಾಂಧತೆ ಹೆಚ್ಚಳ, ಬಾಂಬ್ ಸ್ಫೋಟ, ಭೂಕಂಪವೂ ಹೆಚ್ಚಾಗುತ್ತದೆ. ಇದರಿಂದ ಸಾವು ನೋವು ಸಂಭವಿಸುತ್ತದೆ ಎಂದೂ ನುಡಿದಿದ್ದಾರೆ.
ರಾಜಕೀಯ, ದುಡಿಮೆ, ವ್ಯಾಪಾರ, ಮಳೆ, ಬೆಳೆ ಸೇರಿದಂತೆ ಎಲ್ಲಾ ವಿಚಾರಗಳೂ ಯುಗಾದಿ ನಂತರದ ಒಂದು ತಿಂಗಳು ಕಳೆದ ಮೇಲೆ ಗೊತ್ತಾಗುತ್ತದೆ. ಕಾಯುತ್ತಿರಿ ಎಂದಿದ್ದಾರೆ.
ರಾಜ್ಯದಲ್ಲಿ 5 ಗ್ಯಾರಂಟಿ ನೀಡಿರುವ ಕಾಂಗ್ರೆಸ್ ಸರ್ಕಾರ ಈ ಯೋಜನೆಗಳ ಮೇಲೆ ನಂಬಿಕೆ ಹೆಚ್ಚು ಇಟ್ಟುಕೊಂಡಿದೆ. ಈ ಯೋಜನೆಗಳೇ ಲೋಕಸಭೆ ಚುನಾವಣೆಗೆ ಅನುಕೂಲ ಆಗಲಿವೆ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ. ಈ ಬಗ್ಗೆ ನನಗಿಂತ ನಿಮಗೆ ಹೆಚ್ಚು ಗೊತ್ತು. ರಾಷ್ಟ್ರ ರಾಜಕಾರಣವೂ ಸಹ ಯುಗಾದಿ ನಂತರವೇ ಗೊತ್ತಾಗಲಿದೆ. ಗ್ಯಾರೆಂಟ್ ಗಳಿಂದ ಸರ್ಕಾರ ನಡೆಯುತ್ತಿದ್ದೀಯಾ.? ಎಂಬ ಪ್ರಶ್ನೆಗೆ ಕೋಡಿ ಮಠದ ಶ್ರೀಗಳು ಈ ರೀತಿ ಪ್ರತಿಕ್ರಿಯೆ ನೀಡಿದರು.