SUDDIKSHANA KANNADA NEWS/ DAVANAGERE/ DATE:23-12-2024
ದಾವಣಗೆರೆ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಆಯೋಜನೆ ಮಾಡಿದ್ದ 2ಕೆ24 ಪಿಪಿಎಲ್ 3ನಲ್ಲಿ ಫೈನಲ್ ಗೆದ್ದು ಚಾಲುಕ್ಯ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕದಂಬ ಮತ್ತು ಚಾಲುಕ್ಯ ತಂಡ ಫೈನಲ್ಗೆ ಪ್ರವೇಶ ಪಡೆದಿದ್ದವು. ಲೀಗ್ನಲ್ಲಿ ಎರಡು ತಂಡಗಳು ಬಲಿಷ್ಠವಾಗಿದ್ದು, ಫೈನಲ್ ಪಂದ್ಯ ರೋಚಕವಾಗಿತ್ತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಚಾಲುಕ್ಯ ತಂಡ ನಿಗದಿತ ಆರು ಓವರ್ಗಳಲ್ಲಿ ಮಹದೇವ್ 11, ರಾಮ್ ಪ್ರಸಾದ್ 6, ಪರಶುರಾಮ್ 20, ವರದರಾಜ್, ಮಂಜು ಅವರ ಉಪಯುಕ್ತ ಬ್ಯಾಟಿಂಗ್ನಿಂದ ಚಾಲುಕ್ಯ
ತಂಡವು 59 ರನ್ಗಳ ಬೃಹತ್ ಮೊತ್ತ ಗಳಿಸಿತ್ತು. ಗೆಲುವಿಗೆ 60 ರನ್ಗಳು ಗುರಿ ಪಡೆದ ಕದಂಬ ತಂಡ ಆರಂಭದಲ್ಲಿ ಪ್ರವೀಣ್ ಬಾಡ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ನಂತರ ಹನುಮಂತ ಒಂದು ಸಿಕ್ಸರ್, ಬೌಂಡರಿ ಬಾರಿಸಿ ತಂಡದ ಗೆಲುವಿನ ಆಸೆ ಚಿಗುರಿಸಿದರು. ತಂಡವನ್ನು ಗೆಲುವಿನ ದಡ ಸೇರಿಸಲು ಆಗಲಿಲ್ಲ. ಇನ್ನೂ ಬೌಲಿಂಗ್ನಲ್ಲಿ ಮಿಂಚಿದ.ಮಂಜಪ್ಪ ಎರಡು ಓವರ್ ಎಸೆದು
ಒಂದು ವಿಕೆಟ್ ಜೊತೆಗೆ ಬೆಸ್ಟ್ ಎಕಾನಮಿ ಕಾಪಾಡಿಕೊಂಡು ಕದಂಬ ತಂಡ 3 ವಿಕೆಟ್ಗೆ 41ರನ್ ಕಟ್ಟಿ ಹಾಕಿದರು. ವರದಿಗಾರರ ಕೂಟದ ಮೂರನೇ ಆವೃತ್ತಿಯ ಚಾಂಪಿಯನ್ ಆಗಿ ಚಾಲುಕ್ಯ ತಂಡ ಹೊರ ಹೊಮ್ಮಿತು.
ಇನ್ನೂ ಟೂರ್ನಿಯೂದ್ದಕ್ಕೂ ಬೌಲಿಂಗ್, ಬ್ಯಾಟಿಂಗ್, ಫಿಲ್ಡೀಂಗ್ನಲ್ಲಿ ಗಮನ ಸೆಳೆದ ಪ್ರವೀಣ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಹನುಮಂತ ಕಂಚಿಕೆರೆ ಉತ್ತಮ ಆಲ್ ರೌಂಡರ್ ಪ್ರಶಸ್ತಿ ಪಡೆದರೆ ನೂರಲ್ಲಾ ಉತ್ತಮ ಬ್ಯಾಟ್ಸಮನ್ ಪ್ರಶಸ್ತಿ ಪಡೆದರು. ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಡಾ.ಮಂಜಪ್ಪ ಉತ್ತಮ ಬೌಲರ್ ಪ್ರಶಸ್ತಿ ಪಡೆದರು. ಪಂದ್ಯದಲ್ಲಿ ಹ್ಯಾಟ್ರಿಕ್ ಸಿಕ್ಸ್ ಬಾರಿಸಿದ ಪರಶುರಾಮ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಮಿಂಚಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ್, ಕೂಟದ ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ್, ನಿಕಟಪೂರ್ವ ಅಧ್ಯಕ್ಷ ಬಸವರಾಜ್ ದೊಡ್ಮನಿ, ಹಿರಿಯ ವರದಿಗಾರರಾದ ಬಾಮಾ ಬಸವರಾಜ್, ಸುರೇಶ್ ಕುಣಿಬೆಳಕೆರೆ, ಆರ್.ರವಿ, ರಮೇಶ್ ಜಹಗೀರ್ದಾರ್, ಮಾಗನೂರು ಮಂಜಪ್ಪ, ಬಿ.ಸಿಕಂದರ್, ಡಾ.ಕೆ.ಜೈಮುನಿ, ಬಾ.ಮಾ.ಬಸವರಾಜಯ್ಯ, ಕಾಡಜ್ಜಿ ಮಂಜುನಾಥ,
ಆರ್.ಎಸ್.ತಿಪ್ಪೇಸ್ವಾಮಿ, ಸಿದ್ದಯ್ಯ ಹಿರೇಮಠ, ಎಂ.ಬಿ. ನವೀನ್, ಎನ್.ವಿ.ಬದರಿನಾಥ್, ರವಿಬಾಬು, ಡಾ.ಸಿ.ವರದರಾಜ್, ಹೆಚ್.ಎಂ.ಪಿ.ಕುಮಾರ್, ಸುರೇಶ್ ಕಕ್ಕರಗೊಳ್ಳ, ಅನಿಲ್ಕುಮಾರ್ ವಿ.ಭಾವಿ, ಮಹೇಶ್ ಕಾಶೀಪುರ, ಮಧು ನಾಗರಾಜ್, ನೂರುಲ್ಲಾ, ಬಿ.ಅಣ್ಣಪ್ಪ, ಕಾವ್ಯಾ, ಹನುಮಂತರಾವ್, ಮಲ್ಲಿಕಾರ್ಜುನ ಕೈದಾಳೆ, ಭಾರತಿ, ಪಿ.ಎಸ್.ಲೋಕೇಶ್, ಪ್ರವೀಣ್ ಬಾಡಾ, ಹನುಮಂತ ಕಂಚಿಕೆರೆ, ಅಜೇಯ್, ಮಹದೇವ, ಸಂಜಯ್, ರಾಮಪ್ರಸಾದ್, ವಿಷ್ಣು, ಅಣ್ಣೇಶ್, ಪರಶುರಾಮ, ಮಂಜಪ್ಪ, ವಿಜಯ್ ಜಾಧವ್, ಮದನ್, ದೇವಿಕಾ ಸುನೀಲ್, ತೇಜಸ್ವಿನಿ ಪ್ರಕಾಶ್, ಕಿರಣ್ಕುಮಾರ್, ಭಾಸ್ಕರ್, ರಫೀಕ್, ಗುರುಮೂರ್ತಿ, ಶಿವರಾಜ್ ಬೀದಿಮನಿ ಸೇರಿದಂತೆ ಇತರರು ಇದ್ದರು.