Home ಕ್ರೈಂ ನ್ಯೂಸ್ ಚರ್ಚ್ ಉದ್ಘಾಟನಾ ಸಮಾರಂಭದಲ್ಲಿ ಹಿಂಸಾಚಾರ: ಪಾದ್ರಿಗಳು ಮತ್ತು ಭಕ್ತರ ಮೇಲೆ ಗುಂಪಿನಿಂದ ಹಲ್ಲೆ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಚರ್ಚ್ ಉದ್ಘಾಟನಾ ಸಮಾರಂಭದಲ್ಲಿ ಹಿಂಸಾಚಾರ: ಪಾದ್ರಿಗಳು ಮತ್ತು ಭಕ್ತರ ಮೇಲೆ ಗುಂಪಿನಿಂದ ಹಲ್ಲೆ

Share
ಚರ್ಚ್
Share

ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ನಾರಾಯಣತಲಾದಲ್ಲಿ ನೂತನ ಚರ್ಚ್‌ನ ಉದ್ಘಾಟನಾ ಸಮಾರಂಭದ ವೇಳೆ ದುಷ್ಕರ್ಮಿಗಳ ಗುಂಪೊಂದು ಏಕಾಏಕಿ ದಾಳಿ ನಡೆಸಿ, ಬಿಷಪ್, ಪಾಧ್ರಿಗಳು ಹಾಗೂ ಭಕ್ತರ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಈ ಘಟನೆಯು ರಾಜ್ಯದಲ್ಲಿ ಕ್ರಿಶ್ಚಿಯನ್ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಬೆದರಿಕೆ ಕುರಿತು ಗಂಭೀರ ಕಳವಳವನ್ನು ಹುಟ್ಟುಹಾಕಿದೆ.

ಶನಿವಾರ ನಡೆದ ಈ ಉದ್ಘಾಟನಾ ಸಮಾರಂಭದಲ್ಲಿ ಬಿಷಪ್ ಸುಬ್ರತ ಚಕ್ರವರ್ತಿ ಸೇರಿದಂತೆ ಹಲವು ಪಾಧ್ರಿಗಳು ಮತ್ತು ಭಕ್ತರು ಪಾಲ್ಗೊಂಡಿದ್ದರು. ಈ ವೇಳೆ ಸ್ಥಳಕ್ಕೆ ನುಗ್ಗಿದ 30-35 ಜನರ ಗುಂಪು ಚರ್ಚ್‌ನ ಶಿಲುಬೆಯನ್ನು ಧ್ವಂಸಗೊಳಿಸಿ, ಅಲ್ಲಿದ್ದವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದೆ. ಮಹಿಳೆಯರ ಮೇೆಯೂ ಹಲ್ಲೆ ನಡೆಸಿ, ಅವರ ಸಾಂಪ್ರದಾಯಿಕ ‘ಶಾಖಾ’ (ಬಿಳಿ ಬಳೆಗಳನ್ನು) ಕಳಚುವಂತೆ ಬಲವಂತಪಡಿಸಿ ಹೊರದೂಡಲಾಗಿದೆ. ಅಲ್ಲದೆ, ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲು ಯತ್ನಿಸಿದವರ ಫೋನ್‌ಗಳನ್ನು ಜಖಮ್‌ಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿದ್ದು, ಬಂಗಿಯಾ ಕ್ರಿಶ್ಚಿಯನ್ ಪರಿಷತ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದೆ.

ಚರ್ಚ್ ಉದ್ಘಾಟನೆಯಲ್ಲಿ ಘರ್ಷಣೆ: ದಕ್ಷಿಣ 24 ಪರಗಣ ಜಿಲ್ಲೆಯ ನಾರಾಯಣತಲಾದಲ್ಲಿ ಚರ್ಚ್ ಉದ್ಘಾಟನಾ ಸಮಾರಂಭದ ವೇಳೆ ಗುಂಪಿನಿಂದ ಅನಿರೀಕ್ಷಿತ ದಾಳಿ.

ಪಾಧ್ರಿಗಳು ಮತ್ತು ಭಕ್ತರಿಗೆ ಗಾಯ: ಬಿಷಪ್ ಸುಬ್ರತ ಚಕ್ರವರ್ತಿ ಹಾಗೂ ಇತರೆ ಪಾಧ್ರಿಗಳು, ಮಹಿಳಾ ಭಕ್ತರ ಮೇಲೆ ಹಲ್ಲೆ ನಡೆಸಿ, ಶಿಲುಬೆಯನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು.

ಅಲ್ಪಸಂಖ್ಯಾತರ ಕಳವಳ: ರಾಜ್ಯದಲ್ಲಿ ಮುಂದುವರಿದ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆ ‘ಬಂಗಿಯಾ ಕ್ರಿಶ್ಚಿಯನ್ ಪರಿಷತ್’ ಸಂಘಟನೆಯಿಂದ ತೀವ್ರ ಖಂಡನೆ ಹಾಗೂ ಆಕ್ರೋಶ.

ಪಶ್ಚಿಮ ಬಂಗಾಳದಲ್ಲಿ ಅಲ್ಪಸಂಖ್ಯಾತ ಸಮುದಾಯದವರನ್ನು ಗುರಿಯಾಗಿಸಿ ಇಂತಹ ಕೃತ್ಯಗಳು ಮರುಕಳಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles