SUDDIKSHANA KANNADA NEWS/ DAVANAGERE/ DATE:24-10-2023
ನವದೆಹಲಿ: ಅಫ್ಘಾನಿಸ್ತಾನ ವಿರುದ್ಧ ಹೀನಾಯ ಸೋಲನುಭವಿಸಿದ ಪಾಕ್ ಕ್ರಿಕೆಟ್ ತಂಡಕ್ಕೆ ಪಾಕಿಸ್ತಾನದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮಾತ್ರವಲ್ಲ, ಆಟಗಾರರ ಬಗ್ಗೆ ಲೇವಡಿ, ವ್ಯಂಗ್ಯ ಮಾಡಲಾಗುತ್ತಿದೆ. ಅದರಲ್ಲಿಯೂ ಪಾಕಿಸ್ತಾನ ಮಾಜಿ ನಾಯಕ ಹಾಗೂ ಮಾಜಿ ವೇಗದ ಬೌಲರ್ ವಾಸೀಂ ಅಕ್ರಂ (Wasim Akram) ಕೊಟ್ಟಿರುವ ಪ್ರತಿಕ್ರಿಯೆ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
Read Also This Story:
ದಸರಾದಲ್ಲಿ ಚಿನ್ನ (Gold) ಖರೀದಿಗೆ ಗ್ರಾಹಕರು ಒಲವು ತೋರುವುದೇಕೆ..? ಹೂಡಿಕೆ ಮಾಡಲು ಇರುವ ಉತ್ತಮ ಮಾರ್ಗ ಯಾವುದು? ಡಿಜಿಟಲ್ ಗೋಲ್ಡ್ ಎಂದರೇನು…?
ಈ ಹುಡುಗರು ಪ್ರತಿದಿನ 8 ಕಿಲೋ ಮಟನ್ ತಿನ್ನುತ್ತಿದ್ದಾರೆ ಎಂದು ತೋರುತ್ತದೆ. ಫಿಟ್ನೆಸ್ ಪರೀಕ್ಷೆಗಳು ಬೇಡವೇ?’ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ವಿರುದ್ಧ ತಂಡದ ‘ಮುಜುಗರದ’ ಸೋಲಿನ ನಂತರ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಅವರು ಹೇಳಿದರು.
ಅಫ್ಘಾನಿಸ್ತಾನಕ್ಕೆ ತಂಡದ ಆಘಾತಕಾರಿ ಸೋಲಿನ ನಂತರ ವಿಶ್ವಕಪ್ನಲ್ಲಿ ಪಾಕಿಸ್ತಾನದ ಮುಂದಿನ ಹಾದಿ ಸ್ವಲ್ಪ ಕಠಿಣವಾಗಿದೆ. ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ಅವರು, ಪಾಕ್ ಸೋಲಿನ ಬಗ್ಗೆ ಈ ರೀತಿಯಲ್ಲಿ ವ್ಯಂಗ್ಯವಾಡಿದ್ದಾರೆ.
ಎಂಟು ವಿಕೆಟ್ಗಳ ಸೋಲು:
ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ನಲ್ಲಿ ಬ್ಯಾಕ್ ಟು ಬ್ಯಾಕ್ ಗೆಲುವಿನೊಂದಿಗೆ ಪ್ರಾರಂಭಿಸಿದ ಪಾಕಿಸ್ತಾನವು ಭಾರತದ ವಿರುದ್ಧ ಸೋತ ಬಳಿಕ ಅಪ್ಘಾನಿಸ್ತಾನಕ್ಕೂ ಶರಣಾಗಿದೆ. ಇದು ಮೂರನೇ ಸೋಲು.
ಈ ಸೋಲು ಪಾಕಿಸ್ತಾನವನ್ನು ಎಲಿಮಿನೇಷನ್ ಅಂಚಿಗೆ ತಳ್ಳಿದೆ. ಸೆಮಿಫೈನಲ್ ಪ್ರವೇಶಿಸಬೇಕಾದರೆ ಉಳಿದ ನಾಲ್ಕು ಪಂದ್ಯಗಳಲ್ಲಿಯೂ ಗೆಲ್ಲಲೇಬೇಕಿದೆ.
ಅಫ್ಘಾನಿಸ್ತಾನದ ವಿರುದ್ಧ, ಬಾಬರ್ ಅಜಮ್ ಅವರ ಫೀಲ್ಡಿಂಗ್ನಲ್ಲಿ, ವಿಶೇಷವಾಗಿ ಬೌಂಡರಿ ಮತ್ತು ಒಂದೆರಡು ಓವರ್ಥ್ರೋಗಳಿಂದ ರನ್ ಬಿಟ್ಟು ಕೊಡಲಾಗಿತ್ತು. ಇದು ಪಾಕಿಸ್ತಾನ ಸೋಲುತ್ತದೆ ಎಂಬುದನ್ನು ಸೂಚಿಸುವಂತಿತ್ತು
ಎಂದಿದ್ದಾರೆ ವಾಸೀಂ ಅಕ್ರಂ ಹಾಗೂ ಪಾಕ್ ಅಭಿಮಾನಿಗಳು. ಅಫ್ಘಾನಿಸ್ತಾನ ತಂಡವು ಚೆನ್ನೈನಲ್ಲಿ ನಡೆದ ಎರಡನೇ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನವನ್ನು ಎಂಟು ವಿಕೆಟ್ಗಳಿಂದ ಸೋಲಿಸಿ ನಿಬ್ಬೆರಗಾಗಿಸಿತು.
ಏಕದಿನ ಕ್ರಿಕೆಟ್ ನಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಮೊದಲ ಜಯವನ್ನು ದಾಖಲಿಸಿದ ಆಫ್ಘನ್ನರು ಈಗ ಅಕ್ಷರಶಃ ಬಾಬರ್ ಅಜಮ್ ಟೀಂಗೆ ಶಾಕ್ ನೀಡಿತು. ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸಿ ಬೆರಗುಗೊಳಿಸಿದ್ದರು.
ಚೆಪಾಕ್ ಟ್ರ್ಯಾಕ್ನಲ್ಲಿ ಪಾಕಿಸ್ತಾನ ನೀಡಿದ್ದ 283 ರನ್ಗಳ ಗುರಿಯು ಸುಲಭವಾಗಿರಲಿಲ್ಲ. ಈ ಗುರಿ ಬೆನ್ನತ್ತಿದ ಅಪ್ಘಾನಿಸ್ತಾನ ಇನ್ನು ಒಂದು ಓವರ್ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಕೇವಲ ಎರಡು ವಿಕೆಟ್ ಕಳೆದುಕೊಂಡು ಜಯ
ದಾಖಲಿಸಿತು.
ಕೋಲ್ಕತ್ತಾ ನೈಟ್ ರೈಡರ್ಸ್ನ ಹಿಟ್ ಪ್ಲೇಯರ್ ರಹಮಾನುಲ್ಲಾ ಗುರ್ಬಾಜ್ (53 ಎಸೆತಗಳಲ್ಲಿ 65) ಟಿ-20 ಆಟ ನೆನಪಿಸಿದರು. ಮತ್ತೊಬ್ಬ ಆರಂಭಿಕ ಬ್ಯಾಟ್ಸ್ ಮನ್ ಇಬ್ರಾಹಿಂ ಝದ್ರಾನ್ (113 ಎಸೆತಗಳಲ್ಲಿ 87) ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ಮೊದಲ ವಿಕೆಟ್ ಗೆ 130 ರನ್ ಪೇರಿಸಿದಾಗಲೇ ಅಪ್ಘಾನಿಸ್ತಾನಕ್ಕೆ ಗೆಲ್ಲುವ ಸಾಧ್ಯತೆ ಹೆಚ್ಚಾಯಿತು.
ಅಫ್ಘಾನಿಸ್ತಾನವು ಅಂತಿಮ ಓವರ್ನಲ್ಲಿ ಗುರಿಯನ್ನು ಬೆನ್ನಟ್ಟಲು ಸಾಕಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಿತು, ಪಾಕಿಸ್ತಾನದ ಬೌಲಿಂಗ್ ದೌರ್ಬಲ್ಯಕ್ಕೆ ಸಾಕ್ಷಿಯಾಯ್ತು. ಪಂದ್ಯದ ಆಟಗಾರ: ಇಬ್ರಾಹಿಂ ಜದ್ರಾನ್ – 87 (113 ಎಸೆತಗಳು) ರನ್ ಬಾರಿಸಿ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.