Home ಕ್ರೈಂ ನ್ಯೂಸ್ 2 ತಿಂಗಳು ಆಂಟಿಯೊಂದಿಗಿನ ಪ್ರೇಮ ಸಂಬಂಧಕ್ಕೆ ಸಿಕ್ಕಿದ್ದು ಶಾಕಿಂಗ್ ಕ್ಲೈಮ್ಯಾಕ್ಸ್: ರಾತ್ರೋರಾತ್ರಿ ‘ಗಂಡ ಮತ್ತು ತಂದೆ’ಯಾದ 22ರ ಯುವಕ, ಏನಿದು ‘ಪಕಡುವಾ ಮದುವೆ’!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

2 ತಿಂಗಳು ಆಂಟಿಯೊಂದಿಗಿನ ಪ್ರೇಮ ಸಂಬಂಧಕ್ಕೆ ಸಿಕ್ಕಿದ್ದು ಶಾಕಿಂಗ್ ಕ್ಲೈಮ್ಯಾಕ್ಸ್: ರಾತ್ರೋರಾತ್ರಿ ‘ಗಂಡ ಮತ್ತು ತಂದೆ’ಯಾದ 22ರ ಯುವಕ, ಏನಿದು ‘ಪಕಡುವಾ ಮದುವೆ’!

Share
ಪ್ರೇಮ
Share

ಹೈದರಾಬಾದ್: ಸಾಮಾಜಿಕ ಜಾಲತಾಣಗಳಲ್ಲಿ “ಅರೇಂಜ್ಡ್ ಮ್ಯಾರೇಜ್ ರಿಸ್ಕ್” ಎಂಬ ಚರ್ಚೆಗಳ ನಡುವೆಯೇ, ಪ್ರೇಮ ಸಂಬಂಧವೊಂದು ಅನಿರೀಕ್ಷಿತ ತಿರುವು ಪಡೆದು ರಾತ್ರೋರಾತ್ರಿ ಹಸೆಮಣೆ ಏರಿಸಿದ ಘಟನೆಯೊಂದು ಭಾರಿ ವೈರಲ್ ಆಗುತ್ತಿದೆ.

ಏನಿದು ಘಟನೆ?

22 ವರ್ಷದ ನಿತೀಶ್ ಕುಮಾರ್ ಎಂಬ ಯುವಕ ತನ್ನ ನೆರೆಮನೆಯಲ್ಲಿ ವಾಸವಿದ್ದ ತನಗಿಂತ 10 ವರ್ಷ ಹಿರಿಯ ಮಹಿಳೆಯೊಂದಿಗೆ ಕಳೆದ ಎರಡು ತಿಂಗಳಿಂದ ಪ್ರೇಮ ಸಂಬಂಧ ಹೊಂದಿದ್ದ. ವೃತ್ತಿಯಲ್ಲಿ ನರ್ಸ್ ಆಗಿರುವ ಈ ಮಹಿಳೆಗೆ ಈಗಾಗಲೇ ಮದುವೆಯಾಗಿ, ಒಂದು ಮಗುವೂ ಇತ್ತು.

ತನ್ನ ಪ್ರೇಯಸಿಯನ್ನು ರಹಸ್ಯವಾಗಿ ಭೇಟಿಯಾಗಲು ರಾತ್ರಿಯ ವೇಳೆ ಆಕೆಯ ಮನೆಗೆ ತೆರಳಿದ್ದ ನಿತೀಶ್‌ಗೆ ಅಲ್ಲಿ ಕಾದಿತ್ತು ದೊಡ್ಡ ಅಚ್ಚರಿ. ಮೊದಲೇ ಹೊಂಚು ಹಾಕಿ ಕುಳಿತಿದ್ದ ಮಹಿಳೆಯ ಕುಟುಂಬಸ್ಥರು ಯುವಕನನ್ನು ರೆಡ್ ಹ್ಯಾಂಡಾಗಿ ಹಿಡಿದು ಬಾಗಿಲು ಲಾಕ್ ಮಾಡಿದ್ದಾರೆ.

ಪೊಲೀಸ್ ದೂರು ಇಲ್ಲ, ಗಲಾಟೆಯೂ ಇಲ್ಲ!

ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಗಲಾಟೆ ಅಥವಾ ಪೋಲಿಸ್ ದೂರು ದಾಖಲಾಗುವುದು ಸಹಜ. ಆದರೆ, ಇಲ್ಲಿ ಮಹಿಳೆಯ ಕುಟುಂಬದವರು ರಂಪಾಟ ಮಾಡದೆ, ಮಧ್ಯರಾತ್ರಿಯೇ ಪುರೋಹಿತರನ್ನು ಮನೆಗೆ ಕರೆಸಿದ್ದಾರೆ. ಬೆಳಗಾಗುವುದರೊಳಗೆ ಶಾಸ್ತ್ರೋಕ್ತವಾಗಿ ಹಸೆಮಣೆ ಏರಿಸಿ, ತಾಳಿ ಕಟ್ಟಿಸಿದ್ದಾರೆ.

ಈ ದಿಢೀರ್ ಮದುವೆಯಿಂದಾಗಿ ಬ್ರಹ್ಮಚಾರಿ ಯುವಕ, ಕಣ್ಣು ಮುಚ್ಚಿ ತೆರೆಯುವುದರೊಳಗೆ ಪತಿಯ ಸ್ಥಾನದ ಜೊತೆಗೆ ಮಗುವಿಗೆ ತಂದೆಯ ಹೊಣೆಗಾರಿಕೆಯನ್ನೂ ವಹಿಸಿಕೊಳ್ಳುವಂತಾಗಿದೆ. ಸದ್ಯ ಈ “ಪಕಡುವಾ ವಿವಾಹ” (ಬಲವಂತದ ಮದುವೆ) ಮಾದರಿಯ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು “ಪ್ರೀತಿಗೆ ವಯಸ್ಸಿನ ಹಂಗಿಲ್ಲ, ಆದರೆ ಜವಾಬ್ದಾರಿಗೆ ಸಿದ್ಧರಿರಬೇಕು” ಎಂದು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles