SUDDIKSHANA KANNADA NEWS/ DAVANAGERE/ DATE:18-11-2024
ದಾವಣಗೆರೆ: ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದವರು ಒಗ್ಗಟ್ಟಿನಿಂದ ಸಮಾಜದ ಸಂಘಟನೆ ಮಾಡಬೇಕು ಎಂದು ವಾಲ್ಮೀಕಿ ನಾಯಕ ಸಮಾಜದ ಗೌರವಾಧ್ಯಕ್ಷ ಎಸ್. ವಿ. ರಾಮಚಂದ್ರಪ್ಪ ಕರೆ ನೀಡಿದರು.
ನಗರದ ನಾಯಕ ವಿಧ್ಯಾರ್ಥಿ ನಿಲಯದಲ್ಲಿ ನಡೆದ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮುಂದಿನ ವಾಲ್ಮೀಕಿ ಜಯಂತಿಯ ಒಳಗಾಗಿ ಮಹಿಳಾ ಹಾಸ್ಟೇಲ್ ನಿರ್ಮಾಣ ಹಾಗೂ ವಾಲ್ಮೀಕಿ ಸಮುದಾಯ ಭವನ ಉದ್ಘಾಟನೆಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದವರು ಒಗ್ಗಟ್ಟಿನಿಂದ ಸಮಾಜದ ಸಂಘಟನೆ ಮಾಡಬೇಕು. ನಮ್ಮಲ್ಲಿ ಯಾವುದೇ ಒಡಕು ಬೇಡು ಎಂದರು.
ವಾಲ್ಮೀಕಿ ಸಮಾಜದ ಮುಖಂಡ ಬಿ. ವೀರಣ್ಣ ಸಭೆ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಆಂಜನೇಯ ಗುರೂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಶ್ರೀನಿವಾಸ ದಾಸಕರಿಯಪ್ಪ, ಗುಮ್ಮನೂರು ಶಂಭಣ್ಣ, ಶಾಮನೂರು ಪ್ರವೀಣ್, ಹದಡಿ ರಾಜಣ್ಣ, ಟಿ. ಎನ್. ರಾಜಶೇಖರ್, ಹರಪನಹಳ್ಳಿ ಕೆ. ಉಚ್ಚಂಗೇಪ್ಪ, ಲಿಂಗರಾಜ ಫಣಿಯಾಪುರ, ಹೊನ್ನೈಳ್ಳಿ ಎಚ್. ಸಿ. ಶೇಖರಪ್ಪ, ಗಿರಿಯಪ್ಪ, ಎಚ್. ಆರ್. ನರಸಿಂಹಯ್ಯ, ಹರಿಹರದ ಮಹೇಶ್ವರಪ್ಪ, ಕರಿಬಸಪ್ಪ, ಕೆ. ಆರ್. ಮಂಜುನಾಥ, ಭಾರತ್ ಕಾಲೋನಿ ರಂಗಸ್ವಾಮಿ, ಕೊಡಗನೂರು ಸುರೇಶ್, ಜಿಮ್ ನಾಗರಾಜ್, ಅನಿಲ್, ಹೊನ್ನಪುರ ಹನುಮಂತು, ಸೇರಿದಂತೆ ಆನೇಕರು ಉಪಸ್ಥಿತರಿದ್ದರು.