ಉನ್ನಾವೋ: ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ನಿವಾಸಿ ಹಾಗೂ ರಾಷ್ಟ್ರಮಟ್ಟದ ಬಾಕ್ಸರ್ ಆದ 24 ವರ್ಷದ ಮಂಟ್ಸಾ ಎಂಬುವವರು ಕಾನ್ಪುರ-ಪ್ರಯಾಗ್ರಾಜ್ ಹೆದ್ದಾರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಚಿನ್ನದ ಪದಕ ವಿಜೇತೆಯಾಗಿದ್ದ ಮಂಟ್ಸಾ ಅವರ ಸಾವು ಕ್ರೀಡಾ ಲೋಕದಲ್ಲಿ ಹಾಗೂ ಕುಟುಂಬದಲ್ಲಿ ತೀವ್ರ ಆಘಾತ ತಂದಿದೆ. ಇದು ಕೊಲೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದು, ಸ್ನೇಹಿತನ ಕಡೆಗೆ ಶಂಕೆಯೊಡ್ಡಿದ್ದಾರೆ.
ನವೆಂಬರ್ 5ರಂದು ಮಧ್ಯಾಹ್ನ ಸೋದರಳಿಯನ ಮದುವೆಗೆ ಸಾಮಗ್ರಿಗಳನ್ನು ಖರೀದಿಸಲು ತೆರಳುವುದಾಗಿ ಮನೆಯಿಂದ ಹೊರಟಿದ್ದ ಮಂಟ್ಸಾ ನಾಪತ್ತೆಯಾಗಿದ್ದರು. ನಂತರ ಮೊಬೈಲ್ ಸ್ವಿಚ್ ಆಫ್ ಬಂದಿದ್ದು, ಮಹಾರಾಜ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಘಟನೆಯ ಹಿನ್ನೆಲೆ: ನವೆಂಬರ್ 5ರಂದು ಮಧ್ಯಾಹ್ನ 12:30ರ ಸುಮಾರಿಗೆ ಮನೆಯಿಂದ ತೆರಳಿದ್ದ ಮಂಟ್ಸಾ ನಾಪತ್ತೆಯಾಗಿದ್ದು, ಬಳಿಕ 40-50 ಕಿ.ಮೀ ದೂರದ ಹೆದ್ದಾರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಕುಟುಂಬದ ಆರೋಪ: ಮೃತರ ಮೊಬೈಲ್ ಫೋನ್ ಹಾಗೂ ಬಟ್ಟೆಗಳು ನಾಪತ್ತೆಯಾಗಿದ್ದು, ಸ್ನೇಹಿತನೇ ಈ ಕೊಲೆ ಮಾಡಿದ್ದಾನೆ ಎಂದು ಮೃತಳ ತಾಯಿ ಸಂಜನಾ ಆರೋಪಿಸಿದ್ದಾರೆ.
ಪೊಲೀಸ್ ತನಿಖೆ: ಕಾಲ್ ಡಿಟೇಲ್ ರೆಕಾರ್ಡ್ಸ್ ಗೂ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.
ಪ್ರತಿಭಾವಂತ ಕ್ರೀಡಾಪಟುವಿನ ನಿಗೂಢ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.





Leave a comment