Home ಕ್ರೈಂ ನ್ಯೂಸ್ ಸಂಶಯದ ಕಣ್ಣು, ಕೊಲೆಯಲ್ಲಿ ಅಂತ್ಯ: ಬಟ್ಟೆ ಕೊಡಿಸುವ ನೆಪದಲ್ಲಿ ಕರೆದೊಯ್ದು ಗೋಡಂಬಿ ತೋಪಿನಲ್ಲಿ ಪತ್ನಿಯ ಕತ್ತು ಕೊಯ್ದು ಕೊಂದ ಕ್ರೂರಿ ಪತಿ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಸಂಶಯದ ಕಣ್ಣು, ಕೊಲೆಯಲ್ಲಿ ಅಂತ್ಯ: ಬಟ್ಟೆ ಕೊಡಿಸುವ ನೆಪದಲ್ಲಿ ಕರೆದೊಯ್ದು ಗೋಡಂಬಿ ತೋಪಿನಲ್ಲಿ ಪತ್ನಿಯ ಕತ್ತು ಕೊಯ್ದು ಕೊಂದ ಕ್ರೂರಿ ಪತಿ

Share
ಪತ್ನಿ
Share

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ತಾತಹಳ್ಳಿ ಗ್ರಾಮದಲ್ಲಿ ಅನುಮಾನದ ಪಿಶಾಚಿಯಿಂದಾಗಿ ಭೀಕರ ಹತ್ಯೆಯೊಂದು ನಡೆದಿದೆ. ಬಟ್ಟೆ ಕೊಡಿಸುವುದಾಗಿ ಹೆಂಡತಿಯನ್ನು ಬೈಕ್‌ನಲ್ಲಿ ಕರೆದೊಯ್ದ ಪತಿ ಚಂದ್ರಶೇಖರ್, ನಿರ್ಜನ ಗೋಡಂಬಿ ತೋಪಿನಲ್ಲಿ 35 ವರ್ಷದ ಪದ್ಮ ಅವರ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಕೃತ್ಯ ಎಸಗಿದ ಬಳಿಕ ಮೃತರ ತಾಯಿಗೆ ಮೊಬೈಲ್ ಕರೆ ಮಾಡಿ ವಿಷಯ ಮುಟ್ಟಿಸಿ, ಬಳಿಕ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಆರೋಪಿ ತಾನಾಗೇ ಶರಣಾಗಿದ್ದಾನೆ.

ದಂಪತಿಗೆ ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ ಪತಿಯ ಅನೈತಿಕ ಸಂಬಂಧದ ಸಂಶಯ ಹಾಗೂ ಕೌಟುಂಬಿಕ ಕಲಹವೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.

ಘಟನೆಯ ಹಿನ್ನೆಲೆ: ಬಟ್ಟೆ ಕೊಡಿಸುವ ಸುಳ್ಳು ಹೇಳಿ ಪತ್ನಿ ಪದ್ಮಳನ್ನು ಬೈಕ್‌ನಲ್ಲಿ ಗೋಡಂಬಿ ತೋಪಿಗೆ ಕರೆದೊಯ್ದು ಚಂದ್ರಶೇಖರ್ ಹರಿತವಾದ ಆಯುಧದಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.

ಸಂಶಯದ ಪಿಶಾಚಿ: ಕಳೆದ ಎರಡು ವರ್ಷಗಳಿಂದ ಹೆಂಡತಿಯ ಚಾರಿತ್ರ್ಯದ ಬಗ್ಗೆ ಪತಿ ಚಂದ್ರಶೇಖರ್ ಸಂಶಯ ಪಡುತ್ತಿದ್ದು, ಇದೇ ವಿಚಾರಕ್ಕೆ ದಂಪತಿ ನಡುವೆ ನಿತ್ಯ ಜಗಳ ನಡೆಯುತ್ತಿತ್ತು.

ಪೊಲೀಸರಿಗೆ ಶರಣಾಗತಿ: ಕೊಲೆ ಮಾಡಿದ ತಕ್ಷಣ ಅತ್ತೆ ನರಸಮ್ಮ ಅವರಿಗೆ ಫೋನ್ ಮಾಡಿ ಮಗಳ ಕೊಲೆ ಬಗ್ಗೆ ತಿಳಿಸಿ, ಬಳಿಕ ಗೌರಿಬಿದನೂರು ಗ್ರಾಮಾಂತರ ಠಾಣೆಗೆ ತೆರಳಿ ಆರೋಪಿ ಶರಣಾಗಿದ್ದಾನೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅತ್ತೆ ನರಸಮ್ಮ ನೀಡಿರುವ ದೂರಿನ ಮೇರೆಗೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles