Home ಕ್ರೈಂ ನ್ಯೂಸ್ ಉದ್ಯೋಗ ಕಳೆದುಕೊಂಡ  ಹೆಂಡತಿ ಶಿರಚ್ಛೇದನ ಮಾಡಿದ ಪತಿ: ಕತ್ತರಿಸಿದ ತಲೆಯೊಂದಿಗೆ ದೇವಸ್ಥಾನದಲ್ಲಿ ಕುಳಿತ ಕೊಲೆಗಡುಕ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಉದ್ಯೋಗ ಕಳೆದುಕೊಂಡ  ಹೆಂಡತಿ ಶಿರಚ್ಛೇದನ ಮಾಡಿದ ಪತಿ: ಕತ್ತರಿಸಿದ ತಲೆಯೊಂದಿಗೆ ದೇವಸ್ಥಾನದಲ್ಲಿ ಕುಳಿತ ಕೊಲೆಗಡುಕ!

Share
ಹೆಂಡತಿ
Share

ಗಂಗಾರಾಮ್‌ಪುರ (ಪಶ್ಚಿಮ ಬಂಗಾಳ): ಆರ್ಥಿಕ ಬಿಕ್ಕಟ್ಟು ಹಾಗೂ ತೀವ್ರ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಅತ್ಯಂತ ನಿರ್ದಯವಾಗಿ ಕೊಲೆ ಮಾಡಿ ಶಿರಚ್ಛೇದನ ಮಾಡಿರುವ ಅಮಾನವೀಯ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಗಂಗಾರಾಮ್‌ಪುರದಲ್ಲಿ ವರದಿಯಾಗಿದೆ.

35 ವರ್ಷದ ಸೀಮಾ ಸರ್ಕಾರ್ ಹತ್ಯೆಗೀಡಾದ ದುರ್ದೈವಿಯಾಗಿದ್ದು, ಆಕೆಯ ಪತಿ ರಿಂಟು ಘೋಷ್ (46) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಉದ್ಯೋಗ ಕಳೆದುಕೊಂಡ ಬಳಿಕ ಮಾನಸಿಕವಾಗಿ ಕುಸಿದಿದ್ದ ಪತಿ, ಮನೆಯಲ್ಲೇ ಮಕ್ಕಳ ಕಣ್ಣೆದುರೇ ಈ ಕೃತ್ಯ ಎಸಗಿ, ಹೆಂಡತಿಯ ಕತ್ತರಿಸಿದ ತಲೆಯನ್ನು ಹಿಡಿದು ಕಾಳಿ ದೇವಸ್ಥಾನದ ಆವರಣದಲ್ಲಿ ಕುಳಿತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಕೆಲಸ ಕಳೆದುಕೊಂಡಿದ್ದ ಪತಿ: ಆರೋಪಿ ರಿಂಟು ಈ ಹಿಂದೆ ಸರ್ಕಾರಿ ಬಸ್ ಸೇವೆಯಲ್ಲಿ (NBSTC) ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದನು. ಇತ್ತೀಚೆಗೆ ಕೆಲಸ ಕಳೆದುಕೊಂಡ ಬಳಿಕ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದಂಪತಿ ನಡುವೆ ನಿತ್ಯ ಜಗಳ ನಡೆಯುತ್ತಿತ್ತು.

ಭೀಕರ ಕೃತ್ಯ ಮತ್ತು ದೇವಸ್ಥಾನದಲ್ಲಿ ಪ್ರತ್ಯಕ್ಷ: ಮನೆಯಲ್ಲಿ ಜಗಳ ತೀವ್ರಗೊಂಡಾಗ ಮಾರಕಾಸ್ತ್ರದಿಂದ ಪತ್ನಿಯ ತಲೆ ಕತ್ತರಿಸಿ ಕೊಲೆ ಮಾಡಿದ ಪತಿ, ಬಳಿಕ ಕತ್ತರಿಸಿದ ತಲೆಯೊಂದಿಗೆ ಸ್ಥಳೀಯ ಕಾಳಿ ದೇವಸ್ಥಾನದ ಆವರಣಕ್ಕೆ ತೆರಳಿ ಕುಳಿತಿದ್ದನು.

ಪೊಲೀಸರ ಬಂಧನ: ಸ್ಥಳೀಯರ ಮಾಹಿತಿ ಮೇರೆಗೆ ಧಾವಿಸಿದ ಗಂಗಾರಾಮ್‌ಪುರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ, ಮೃತದೇಹ ಹಾಗೂ ಶಿರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ನನಗೆ ಕೆಲಸ ಹೋದ ಮೇಲಿಂದ ಮಾನಸಿಕ ಸ್ಥಿತಿ ಸರಿ ಇರಲಿಲ್ಲ ಎಂದು ಆರೋಪಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದು, ಈ ಕುರಿತು ಗಂಗಾರಾಮ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles