Home ಕ್ರೈಂ ನ್ಯೂಸ್ “ಸುಟ್ಟ ರೊಟ್ಟಿ ತಿನ್ನಿಸುತ್ತಿದ್ದಳು, ಆಸ್ತಿಗಾಗಿ ಕಿರುಕುಳ ನೀಡುತ್ತಿದಳು”: ಪತ್ನಿ, ಅತ್ತೆ ಮಾವನ ವಿರುದ್ಧ ಆರೋಪಿಸಿ ಮದುವೆ ವಾರ್ಷಿಕೋತ್ಸವದ ಹಿಂದಿನ ದಿನವೇ ಬಿಜೆಪಿ ಮುಖಂಡನ ಪುತ್ರ ಆತ್ಮಹತ್ಯೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

“ಸುಟ್ಟ ರೊಟ್ಟಿ ತಿನ್ನಿಸುತ್ತಿದ್ದಳು, ಆಸ್ತಿಗಾಗಿ ಕಿರುಕುಳ ನೀಡುತ್ತಿದಳು”: ಪತ್ನಿ, ಅತ್ತೆ ಮಾವನ ವಿರುದ್ಧ ಆರೋಪಿಸಿ ಮದುವೆ ವಾರ್ಷಿಕೋತ್ಸವದ ಹಿಂದಿನ ದಿನವೇ ಬಿಜೆಪಿ ಮುಖಂಡನ ಪುತ್ರ ಆತ್ಮಹತ್ಯೆ!

Share
ವಾರ್ಷಿಕೋತ್ಸವ
Share

ಮೀರತ್ (ಉತ್ತರ ಪ್ರದೇಶ): ಮದುವೆಯಾಗಿ ಕೇವಲ ಒಂದು ವರ್ಷವಾದ ಹಿನ್ನೆಲೆಯಲ್ಲಿ ಮೊದಲ ವಾರ್ಷಿಕೋತ್ಸವದ ಹಿಂದಿನ ದಿನವೇ 26 ವರ್ಷದ ಯುವಕನೊಬ್ಬ ವಿಷ ಪ್ರಾಶನ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಮೃತ ಯುವಕನನ್ನು ಗಾಜಿಯಾಬಾದ್‌ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಬಿಜೆಪಿ ಕಾಂಕರ್ಖೇರಾ ಮಂಡಲ ಉಪಾಧ್ಯಕ್ಷ ರಾಜೀವ್ ಗುಪ್ತಾ ಅವರ ಪುತ್ರ ಪ್ರವಲ್ ಗುಪ್ತಾ ಎಂದು ಗುರುತಿಸಲಾಗಿದೆ.

ಆತ್ಮಹತ್ಯೆಗೂ ಮುನ್ನ ಪ್ರವಲ್ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಒಂದನ್ನು ರೆಕಾರ್ಡ್ ಮಾಡಿದ್ದು, ತನ್ನ ಸಾವಿಗೆ ಪತ್ನಿ ಸ್ನೇಹಾ ಗುಪ್ತಾ ಹಾಗೂ ಆಕೆಯ ಕುಟುಂಬವೇ ನೇರ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪತ್ನಿ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದು, ತನ್ನ ಹೆಸರಿಗೆ ಆಸ್ತಿ ವರ್ಗಾವಣೆ ಮಾಡುವಂತೆ ಒತ್ತಾಯಿಸುತ್ತಿದ್ದಾಳೆ ಎಂದು ಅವರು ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಡೆತ್‌ ವಿಡಿಯೋದಲ್ಲಿ ಗಂಭೀರ ಆರೋಪ: ಪತ್ನಿ ಸ್ನೇಹಾ ಗುಪ್ತಾ ತನಗೆ ಉದ್ದೇಶಪೂರ್ವಕವಾಗಿ ಸುಟ್ಟ ರೊಟ್ಟಿಗಳನ್ನು ತಿನ್ನಿಸುತ್ತಿದ್ದಳು, ಸಂಬಳದ ಸಂಪೂರ್ಣ ಹಣವನ್ನು ಕಸಿದುಕೊಳ್ಳುತ್ತಿದ್ದಳು ಹಾಗೂ ಹೆತ್ತವರನ್ನು ಬಿಟ್ಟು ಪ್ರತ್ಯೇಕವಾಗಿ ವಾಸಿಸುವಂತೆ ಒತ್ತಡ ಹೇರುತ್ತಿದ್ದಳು ಎಂದು ಪ್ರವಲ್ ಆರೋಪಿಸಿದ್ದಾರೆ.

ಕುಟುಂಬದವರ ಮೇಲೂ ಹಲ್ಲೆ ಆರೋಪ: ತಾಯಿ ಹಾಗೂ ತಂಗಿ ಮನೆಗೆ ಬಂದಾಗ ಪತ್ನಿ ಸ್ನೇಹಾ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾಳೆ. ಅಲ್ಲದೆ, ತಂದೆ-ತಾಯಿಯಿಂದ ದೂರವಿರುವಂತೆ ಹಾಗೂ ಸುಳ್ಳು ಮೊಕದ್ದಮೆ ಹೂಡುವುದಾಗಿ ಹೆದರಿಸುತ್ತಿದ್ದರು ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ಪೊಲೀಸ್ ಕೌನ್ಸಿಲಿಂಗ್ ಬಳಿಕ ದುರಂತ: ದಂಪತಿ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 31 ರಂದು ಪೊಲೀಸ್ ಲೈನ್ಸ್‌ನ ಕುಟುಂಬ ಕೌನ್ಸಿಲಿಂಗ್ ಕೇಂದ್ರದಲ್ಲಿ ಸಭೆ ನಡೆದಿತ್ತು. ಇದರ ಮನನೊಂದು ನವೆಂಬರ್ 1 ರಂದು ಪ್ರವಲ್ ವಿಷ ಸೇವಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಸಾವನ್ನಪ್ಪಿದ್ದಾರೆ.

ಮಗನ ಮದುವೆ ಮಾಡಿಸಿದ ಅದೇ ದಿನದಂದು ಈಗ ಶವಯಾತ್ರೆ ನಡೆಸಬೇಕಾಗಿ ಬಂದಿದೆ ಎಂದು ಮೃತನ ಪೋಷಕರು ಕಣ್ಣೀರಿಟ್ಟಿದ್ದಾರೆ. ಮಗನ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮೊಮ್ಮಗಳ ಆರೈಕೆಯನ್ನು ತಾವೇ ಮಾಡುವುದಾಗಿ ತಾಯಿ ಕಿರಣ್ ಗುಪ್ತಾ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles