Home ಕ್ರೈಂ ನ್ಯೂಸ್ ಹೋಟೆಲ್ ರೂಮ್‌ ಬಾಗಿಲಲ್ಲಿ ನವವಿವಾಹಿತೆ ನಿಗೂಢ ಸಾವು, ಪತಿಯೇ ಹತ್ಯೆ ಮಾಡಿರುವ ಶಂಕೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಹೋಟೆಲ್ ರೂಮ್‌ ಬಾಗಿಲಲ್ಲಿ ನವವಿವಾಹಿತೆ ನಿಗೂಢ ಸಾವು, ಪತಿಯೇ ಹತ್ಯೆ ಮಾಡಿರುವ ಶಂಕೆ!

Share
ಹೋಟೆಲ್
Share

ಉತ್ತರ ಪ್ರದೇಶ (ಜಾನ್ಸಿ): ಉತ್ತರ ಪ್ರದೇಶದ ಜಾನ್ಸಿಯಲ್ಲಿ ನಡೆದ ನವವಿವಾಹಿತೆಯೊಬ್ಬರ ನಿಗೂಢ ಸಾವು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಮುಸ್ಕಾನ್ ಸಿಮೋಲಿಯಾ (28) ಎಂಬ ವನಿತೆ ಹೋಟೆಲ್ ಒಂದರಲ್ಲಿ ಕುಸಿದುಬಿದ್ದು ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೃತೆಯ ಪತಿ ನೀಲೇಶ್ ವಿರುದ್ಧ ಆಕೆಯ ಪೋಷಕರು ಗಂಭೀರ ಕೊಲೆ ಆರೋಪ ಹೊರಿಸಿದ್ದಾರೆ.

ಮಧ್ಯಪ್ರದೇಶದ ವಿದಿಶಾ ನಿವಾಸಿ ಹಾಗೂ ಬ್ಯಾಂಕ್ ಮ್ಯಾನೇಜರ್ ಆಗಿರುವ ನೀಲೇಶ್ ಜೊತೆ ಜೂನ್ 29 ರಂದು ಮುಸ್ಕಾನ್ ವಿವಾಹವಾಗಿತ್ತು. ರೈಲ್ವೆ ಪರೀಕ್ಷೆ ಬರೆಯಲು ತವರು ಮನೆಗೆ ಬಂದಿದ್ದ ಮುಸ್ಕಾನ್ ಅವರನ್ನು ಪತಿ ನೀಲೇಶ್ ಅಕ್ಟೋಬರ್ 23 ರಂದು ಹೋಟೆಲ್ ಒಂದಕ್ಕೆ ಕರೆದೊಯ್ದಿದ್ದರು. ಹೋಟೆಲ್‌ನಿಂದ ಹೊರಡುವ ವೇಳೆ ಮುಸ್ಕಾನ್ ಇದ್ದಕ್ಕಿದ್ದಂತೆ ಬಾಗಿಲ ಬಳಿ ಕುಸಿದುಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಪತಿ ನೀಲೇಶ್‌ಗೆ ಈಗಾಗಲೇ ಬೇರೆ ಮದುವೆಯಾಗಿರುವ ವಿಷಯ ತಿಳಿದು ಕಿರುಕುಳ ನೀಡುತ್ತಿದ್ದು, ಆತನೇ ಗೋಡೆಗೆ ತಲೆಬಡಿದು ಕೊಲೆ ಮಾಡಿದ್ದಾನೆ ಎಂದು ಮೃತೆಯ ತಂದೆ ರಾಮ್‌ಜಿ ಲಾಲ್ ಅಹಿರ್ವಾರ್ ಆರೋಪಿಸಿದ್ದಾರೆ.

ಹೋಟೆಲ್ ಸಿಸಿಟಿವಿಯಲ್ಲಿ ಮಹಿಳೆ ಜಾರಿಬೀಳುತ್ತಿರುವುದು ಕಂಡುಬಂದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಗೂಢ ಸಾವು, ಸಿಸಿಟಿವಿ ದೃಶ್ಯ: ಹೋಟೆಲ್ ಕೊಠಡಿಯ ಪ್ರವೇಶದ್ವಾರದಲ್ಲಿ ಮುಸ್ಕಾನ್ ಕುಸಿದುಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕುಟುಂಬಸ್ಥರ ಗಂಭೀರ ಆರೋಪ: ನೀಲೇಶ್‌ಗೆ ಮೊದಲೇ ಮದುವೆಯಾಗಿರುವ ವಿಚಾರ ಮುಸ್ಕಾನ್‌ಗೆ ತಿಳಿದಿದ್ದರಿಂದ ಆತನಿಗೆ ಕಿರುಕುಳ ನೀಡಿ, ಗೋಡೆಗೆ ತಲೆಬಡಿದು ಹತ್ಯೆ ಮಾಡಲಾಗಿದೆ ಎಂದು ತಂದೆ ಆರೋಪಿಸಿದ್ದಾರೆ.

ಪೊಲೀಸರ ತನಿಖೆ: ಮಹಿಳೆ ಕಾಲುಜಾರಿ ಬಿದ್ದಿರುವುದಾಗಿ ಹೋಟೆಲ್ ಸಿಬ್ಬಂದಿ ಹೇಳುತ್ತಿದ್ದು, ಪೋಸ್ಟ್‌ಮಾರ್ಟಮ್ ವರದಿ ಬಂದ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಎಸ್‌ಪಿ ಪ್ರೀತಿ ಸಿಂಗ್ ತಿಳಿಸಿದ್ದಾರೆ.

ಹಿನ್ನೆಲೆ: ಜೂನ್ 29 ರಂದು ಮದುವೆಯಾಗಿದ್ದ ಮುಸ್ಕಾನ್, ರೈಲ್ವೆ ನೇಮಕಾತಿ ಪರೀಕ್ಷೆಗಾಗಿ ಜಾನ್ಸಿಯ ತಂದೆಯ ಮನೆಗೆ ಬಂದಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles