ಬೆಂಗಳೂರು: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಿಗಾಗಿ ಮುಕ್ತಗೊಳಿಸಿರುವ 15,000 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆನ್ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ವಿಸ್ತರಿಸಿ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಅಕ್ಟೋಬರ್ 26, 2026 ರಂದು ಹೊರಡಿಸಲಾದ ಕರ್ನಾಟಕ ಗೆಜೆಟ್ ಅಧಿಸೂಚನೆ (ಸಂಖ್ಯೆ 1248) ಪ್ರಕಾರ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈಗ ನವೆಂಬರ್ 16, 2026 ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಗ್ರಾಜ್ಯುಯೇಟ್ ಪ್ರೈಮರಿ ಟೀಚರ್ (GPT) ಹಾಗೂ ಕಂಪ್ಯೂಟರ್ ಸೈನ್ಸ್ ಶಿಕ್ಷಕ ಹುದ್ದೆಗಳನ್ನು ಒಳಗೊಂಡಂತೆ ಒಟ್ಟು 15,000 ಖಾಲಿ ಹುದ್ದೆಗಳಿಗೆ ಕಲ್ಯಾಣ ಕರ್ನಾಟಕ ಮತ್ತು ಕಲ್ಯಾಣೇತರ ಕರ್ನಾಟಕ ಪ್ರದೇಶಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಅಥವಾ ಹೊಸದಾಗಿ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ನವೆಂಬರ್ 18, 2026 ರವರೆಗೆ ತಮ್ಮ ಅರ್ಜಿಗಳಲ್ಲಿ ತಿದ್ದಪಡಿ (Application Correction) ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ಆದ schooleducation.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ವಿಸ್ತರಿಸಲಾದ ಕೊನೆಯ ದಿನಾಂಕ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 16, 2026 ಕೊನೆಯ ದಿನವಾಗಿದ್ದು, ನವೆಂಬರ್ 18 ರವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
ಹುದ್ದೆಗಳ ವಿವರ: ಒಟ್ಟು 15,000 ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 6,9 ಮತ್ತು ಕಲ್ಯಾಣೇತರ ಕರ್ನಾಟಕ ಭಾಗದಲ್ಲಿ 8,033 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಪ್ರಮುಖ ಪೋಸ್ಟ್ಗಳು: ಗ್ರಾಜ್ಯುಯೇಟ್ ಪ್ರೈಮರಿ ಟೀಚರ್ (GPT – 8,500), ಅಸಿಸ್ಟೆಂಟ್ ಮಾಸ್ಟರ್ (AM – 4,500), ಪ್ರೈಮರಿ ಸ್ಕೂಲ್ ಟೀಚರ್ (PST – 900), ದೈಹಿಕ ಶಿಕ್ಷಣ ಶಿಕ್ಷಕರು (PET – 600) ಮತ್ತು ಕಂಪ್ಯೂಟರ್ ಸೈನ್ಸ್ ಟೀಚರ್ (CST – 500).
ಅರ್ಹತೆ ಮತ್ತು ವಯೋಮಿತಿ: ಹುದ್ದೆಗೆ ತಕ್ಕಂತೆ ವಿದ್ಯಾರ್ಹತೆ ಹೊಂದಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 21 ರಿಂದ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮೀಸಲಾತಿ ವರ್ಗದವರಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.





Leave a comment