ತೇನಿ (ತಮಿಳುನಾಡು): ತಮಿಳುನಾಡಿನ ತೇನಿ ಜಿಲ್ಲೆಯ ಉಪಕಾರಾಗೃಹದಲ್ಲಿ ಸೋಮವಾರ ತಡರಾತ್ರಿ ಭಾರಿ ನಾಟಕೀಯ ಬೆಳವಣಿಗೆಯೊಂದರಲ್ಲಿ 17 ವಿಚಾರಣಾಧೀನ ಕೈದಿಗಳು ಜೈಲಿನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಕೈದಿಗಳಲ್ಲಿ ಒಬ್ಬನಿಗೆ ಫಿಟ್ಸ್ (ಅಪಸ್ಮಾರ) ಬಂದಿದೆ ಎಂದು ಕಟ್ಟುಕಥೆ ಸೃಷ್ಟಿಸಿ ಜೈಲು ಸಿಬ್ಬಂದಿಯನ್ನು ಗೇಮ್‌ಗೆೆ ಆಹ್ವಾನಿಸಿ, ಸಿಬ್ಬಂದಿ ಒಳಗೆ ಬರುತ್ತಿದ್ದಂತೆ ಏಕಾಏಕಿ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಈ ದಿಢೀರ್ ದಾಳಿಯಲ್ಲಿ ಮೂವರು ಜೈಲು ಸಿಬ್ಬಂದಿ ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ.
ಸಿಬ್ಬಂದಿಗೆ ಗಾಯ: ಕರ್ತವ್ಯದಲ್ಲಿದ್ದ ಗ್ರೇಡ್-2 ಪೊಲೀಸ್ ಸಿಬ್ಬಂದಿ ತಂಗಪಾಂಡಿ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ಜಿ.ವಿಲಕ್ಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರಿಂದ ಭರ್ಜರಿ ಬೇಟೆ: ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಹಿಡಿಯಲು ಡಿಜಿಪಿ ಸೂಚನೆಯಂತೆ 17 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ಬಂಧನ ಪ್ರಕ್ರಿಯೆ: ಮಂಗಳವಾರ ಬೆಳಗಿನ ವೇಳೆಗೆ ಕಾರ್ಯಾಚರಣೆ ಚುರುಕುಗೊಳಿಸಿ 4 ಜನರನ್ನು ಮರುಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ಮುಂದುವರೆದಿದೆ.





Leave a comment