Home ಕ್ರೈಂ ನ್ಯೂಸ್ ಕೋಣೆಯಲ್ಲಿ ಕೂಡಿಹಾಕಿ ಮ್ಯಾನ್ಮಾರ್ ಯುವತಿ ಮೇಲೆ ಮೂವರಿಂದ ಸಾಮೂಹಿಕ ಅತ್ಯಾಚಾರ: ಪತಿಯೇ ಸ್ನೇಹಿತರ ಕೃತ್ಯಕ್ಕೆ ಸಾಥ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಕೋಣೆಯಲ್ಲಿ ಕೂಡಿಹಾಕಿ ಮ್ಯಾನ್ಮಾರ್ ಯುವತಿ ಮೇಲೆ ಮೂವರಿಂದ ಸಾಮೂಹಿಕ ಅತ್ಯಾಚಾರ: ಪತಿಯೇ ಸ್ನೇಹಿತರ ಕೃತ್ಯಕ್ಕೆ ಸಾಥ್!

Share
ಪತಿ
Share

ಹೈದರಾಬಾದ್: ಹೈದರಾಬಾದ್‌ನಲ್ಲಿ ಅಮಾನವೀಯ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಮ್ಯಾನ್ಮಾರ್ ಮೂಲದ 18 ವರ್ಷದ ಯುವತಿಯೊಬ್ಬಳನ್ನು ಆಕೆಯ ಪತಿಯೇ ಮನೆಯಲ್ಲಿ ಲಾಕ್ ಮಾಡಿ, ತನ್ನ ಮೂವರು ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸಿರುವ ದಾರುಣ ಘಟನೆ ವರದಿಯಾಗಿದೆ. ಬಾಡಿಗೆ ಹಣ ಸಂಗ್ರಹಿಸಲು ಬಂದ ಮನೆ ಮಾಲೀಕ ಬಾಗಿಲಿನ ಬೀಗ ಒಡೆದಾಗ ಈ ಭೀಕರ ಕೃತ್ಯ ಹೊರಬಂದಿದೆ.

ಬಾಂಗ್ಲಾದೇಶದ ಕಾಕ್ಸ್ ಬಜಾರ್‌ನಲ್ಲಿದ್ದ ಹಮೈರಾ ತಮನ್ನಾ ಎಂಬಾಕೆಯನ್ನು ಮೊಹಮ್ಮದ್ ಫಯಾಜ್ ಎಂಬಾತ ಮದುವೆಯಾಗುವುದಾಗಿ ನಂಬಿಸಿ ಮೇ ತಿಂಗಳಲ್ಲಿ ಹೈದರಾಬಾದ್‌ಗೆ ಕರೆತಂದಿದ್ದನು. ಇಲ್ಲಿ ಮದುವೆಯಾದ ಬಳಿಕ ಪತಿ ಫಯಾಜ್ ಮನೆಯಿಂದ ಹೊರ ಹೋಗುವಾಗ ಹೊರಗಿನಿಂದ ಬೀಗ ಹಾಕಿ, ತನ್ನ ಮೂವರು ಸ್ನೇಹಿತರಾದ ಅಹ್ಮದ್ ಮುಜೀಬ್, ನೂರ್ ಕಮಾಲ್ ಹಾಗೂ ಜಿಯಾ-ಉರ್-ರೆಹಮಾನ್ ಅವರನ್ನು ಕಳುಹಿಸಿ ಯುವತಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿಸಿದ್ದಾನೆ. ಅಕ್ಟೋಬರ್ 23 ರಂದು ಮನೆ ಮಾಲೀಕ ಬಾಗಿಲು ಒಡೆದಾಗ ಯುವತಿ ತಪ್ಪಿಸಿಕೊಂಡು ಬಂದು ಸಂಬಂಧಿಕರ ಸಹಾಯದಿಂದ ಅಕ್ಟೋಬರ್ 26 ರಂದು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮನೆಯಲ್ಲಿ ಬಂದಿ,  ಅತ್ಯಾಚಾರ: ಪತಿ ಫಯಾಜ್ ತನ್ನ ಹೆಂಡತಿಯನ್ನು ಮನೆಯಲ್ಲಿ ಕೂಡಿಹಾಕಿ, ತನ್ನ ಮೂವರು ಸ್ನೇಹಿತರಿಂದ ಲೈಂಗಿಕ ದೌರ್ಜನ್ಯ ಎಸಗಲು ಪ್ರಚೋದಿಸಿದ್ದಾನೆ.

ಮನೆ ಮಾಲೀಕರಿಂದ ರಕ್ಷಣೆ: ಬಾಡಿಗೆ ಹಣಕ್ಕಾಗಿ ಬಂದ ಮಾಲೀಕ ಬೀಗ ಒಡೆದಾಗ ಯುವತಿ ಸಂಕಷ್ಟದಿಂದ ಪಾರಾಗಿದ್ದು, ಬೇರೊಬ್ಬರ ಫೋನ್ ಮೂಲಕ ಕುಟುಂಬಕ್ಕೆ ವಿಷಯ ಮುಟ್ಟಿಸಿದ್ದಾಳೆ.

ಪೊಲೀಸರಿಂದ ಪ್ರಕರಣ ದಾಖಲು: ಸಂತ್ರಾತೆ ಯುವತಿಯ ಸಂಬಂಧಿ ಮೊಹಮ್ಮದ್ ರಶೀದ್ ಸಹಾಯದಿಂದ ದೂರು ದಾಖಲಾಗಿದ್ದು, ಪತಿ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಅತ್ಯಾಚಾರ ಹಾಗೂ ಬೆದರಿಕೆ ಪ್ರಕರಣ ದಾಖಲಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles